ಮಾಡ್ಯಾಳ ಗ್ರಾಮವು ಕುಂತಲ ನಾಡಿನ ಮುಕುಟವಾಗಿದೆ: ಮುಡುಬಿ ಗುಂಡೆರಾವ

ಜಿಲ್ಲೆ

ಕಲಬುರಗಿ: ಮಾಡ್ಯಾಳ ಗ್ರಾಮವು ಕುಂತಲ ನಾಡಿನ ಮುಕುಟವಾಗಿವೆ ಮತ್ತು ಗ್ರಾಮದ ದೇಗುಲುಗಳು ಆಲಂದ ಸಾಸಿ ನಾಡಿನ ಚೆರಿತ್ರೆ ತಿಳಿಸಿಕೊಡುತ್ತವೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು.

ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಶಂಕರಲಿಂಗ ದೇವಾಲಯದಲ್ಲಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಪರಿಚಯಾತ್ಮಕ (19) ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗ್ರಾಮದಲ್ಲಿನ ಹಲವಾರು ಐತಿಹಾಸಿಕ ದೇಗುಲುಗಳು, ಸ್ಮಾರಕ, ಶಾಸನಗಳು ನಾಡಿನ ಇತಿಹಾಸ ಸಾರುತ್ತಿವೆ, ಇಲ್ಲಿಯ ಒಂದೊಂದು ಕಲ್ಲು ಸಹ ಕನ್ನಡ ಭೂಮಿಯ ರೋಚಕ ಕಥೆಗಳನ್ನು ಸಾರುತ್ತಿವೆ. ಶಂಕರಲಿಂಗ ದೇವಾಲಯಕ್ಕೆ ಭೂದತ್ತಿ ನೀಡಿದ ಉಲ್ಲೇಖ ಕ್ರಿ.ಶ 1184 ಶಾಸನ ಸ್ಪಷ್ಟ ಪಡಿಸುತ್ತದೆ. ಗ್ರಾಮದಲ್ಲಿ ದೊರೆತಿರುವ 8 ಶಾಸನಗಳು ಕಲ್ಯಾಣ ಚಾಲುಕ್ಯ ಅರಸರ ಮತ್ತು ಆಳಂದ ಸಾಸಿರ ನಾಡಿನ ನಾಡಪ್ರಭುಗಳ ಸಮಾಜಮುಖಿ ಕಾರ್ಯಗಳ ಬಗ್ಗೆ ಗುಣಗಾನ ಮಾಡಿವೆ. ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯನ ರಾಣಿ ಚಂದಲಾದೇವಿಯು ಈ ಗ್ರಾವನ್ನು ಆಳುತ್ತಿದ್ದಳು. ಮಾಡ್ಯಾಳ ಗ್ರಾಮವು ಪ್ರಾಚೀನ ಕಾಲದಲ್ಲಿ ಧಾರ್ಮಿಕ, ಆಧ್ಯಾತ್ಮ ಕ್ಷೇತ್ರವಾಗಿತ್ತು. ವಾಣಿಜ್ಯ, ವ್ಯಾಪಾರ ವಹಿವಾಟುಗಳ ಮತ್ತು ಶೈಕ್ಷಣಿಕ ಕೇಂದ್ರವಾಗಿತ್ತು ಎನ್ನುವುದಕ್ಕೆ ಶಾಸನಗಳು ಸಾಕ್ಷಿಯಾಗಿವೆ ಎಂದರು.

ಬಸವೇಶ್ವರ ಸೇವಾ ಬಳಗದ ಅಧ್ಯಕ್ಷ ಪ್ರೊ. ಎಚ್.ಬಿ ಪಾಟೀಲ ಮಾತನಾಡಿ, ನಮ್ಮ ಜಿಲ್ಲೆಯ ಪ್ರಮುಖ ಸ್ಥಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಹಳ್ಳಿ ಹಳ್ಳಿಗಳಿಗೆ ಸುತ್ತುತ್ತಾ ಈ ಅಭಿಯಾನ ಜಿಲ್ಲೆಯಾದ್ಯಾಂತ ಯಶಸ್ವಿಯಾಗಿ ನಡೆದಿದೆ. ನಮ್ಮ ನೆಲದ ಭವ್ಯ ಪರಂಪರೆಯನ್ನು ಇಂದಿನ ಯುವಕರಿಗೆ ತಿಳಿಸಿಕೊಡುವುದು ಅವಶ್ಯಕವಾಗಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ತಾಣಗಳಿವೆ, ಪ್ರಾಚೀನ ಕಾಲದಲ್ಲಿ ಪ್ರತಿ ಗ್ರಾಮದಲ್ಲಿ ಕನ್ನಡ ಝೇಂಕಾರಗೊಂಡಿತ್ತು, ಸಂಗೀತ, ಸಾಹಿತ್ಯ ವಿಜ್ರಂಭಿಸಿದೆ. ಜಿಲ್ಲೆಯ ಒಂದೊಂದು ಶಿಲ್ಪ ಶಾಸನ, ಸ್ಮಾರಕಗಳು ಕನ್ನಡ ನಾಡಿನ ಭವ್ಯ ಪರಂಪರೆಯ ರೋಚಕ ಇತಿಹಾಸ ಸಾದರ ಪಡಿಸುತ್ತವೆ. ಆಳಂದ ಸಾಸಿರ ನಾಡಿನ ಸಾವಿರ ಹಳ್ಳಿಗಳ ಇತಿಹಾಸವು ಕಲ್ಯಾಣ ಚಾಲುಕ್ಯ ಅರಸರು ಮತ್ತು ರಾಣಿಯರ ಸಾಧನೆಗಳು ತಿಳಿಸುತ್ತವೆ, ಮಡ್ಯಾಳ ಗ್ರಾಮವನ್ನು 6ನೇ ವಿಕ್ರಮಾದಿತ್ಯನ ರಾಣಿ ಚಂದಲಾದೇವಿ ಆಳುತ್ತಿದ್ದಳು, ಅವರ ಸಮಾಜಾಮುಖಿ ಕಾರ್ಯಗಳ ಬಗ್ಗೆ ಶಾಸನಗಳು ಸಾದರಪಡಿಸುತ್ತವೆ.

ಮುಡುಬಿ ಗುಂಡೆರಾವ
ಸಂಶೋಧಕ ಸಾಹಿತಿ

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಯೋಗಪ್ಪ ಬಿರಾದಾರ, ಡಾ. ರಾಜಶೇಖರ ಪಾಟೀಲ, ಶಿವರಾಯ ಮುತ್ಯಾ ಒಡೆಯರ, ಬಾಬುರಾವ ಪೋಲಿಸಪಾಟೀಲ, ದತ್ತು ಮದರಿ, ಪ್ರಕಾಶ ಹೂಗಾರ, ಸಿದ್ದಣ್ಣ ಹರಳಯ್ಯ, ತುಕಾರಾಮ ಪೂಜಾರಿ, ಸಿದ್ದಣ್ಣ ಪೂಜಾರಿ, ಪ್ರಭು ಹರಳಯ್ಯ, ನಾಗಯ್ಯ ಮಠಪತಿ, ಚಂದ್ರಶಾ ಕುಂಬಾರ, ರಾಮಣ್ಣ ಮದರಿ, ಜೋತಿಬಾ ಪಾಂಡರೆ, ಈರಣ್ಣ ತಳವಾರ, ಮಲ್ಲಿಕಾರ್ಜುನ ಕುಡಕಿ, ನಾಗರಾಜ ಯಳಸಂಗಿ, ರೋಹಿತ ಪಾಟೀಲ ಸೇರಿದಂತೆ ಅನೇಕರು ಇದ್ದರು.



Leave a Reply

Your email address will not be published. Required fields are marked *