ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಸ್ ಬಿಹಾರಿ ಬೋಸ್

ಜಿಲ್ಲೆ

ಕಲಬುರಗಿ: ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ತಮ್ಮ ಮಗ ನಿಧನರಾದರು ಕೂಡಾ ವಿಚಲಿತರಾಗದೆ, ಇಡಿ ತಮ್ಮ ಜೀವನದುದ್ದಕ್ಕೂ ದೇಶದ ಸ್ವಾತಂತ್ರಯಕ್ಕಾಗಿ ಶ್ರಮಿಸಿದ ರಾಸ್ ಬಿಹಾರಿ ಬೋಸ್ ಕೊಡುಗೆ ಮರೆಯವಂತಿಲ್ಲ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಸ್ ಬಿಹಾರಿ ಬೋಸ್‌ರ 139ನೇ ಜನ್ಮದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಬೋಸ್‌ರ ಜೀವನ-ಸಾಧನೆ-ಕೊಡುಗೆಯನ್ನು ಇಂದಿನ ಯುವಶಕ್ತಿ ತಿಳಿದುಕೊಳ್ಳಬೇಕಾಗಿದೆ. ಅವರಲ್ಲಿರುವ ಅಪ್ಪಟವಾದ ದೇಶಪ್ರೇಮ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ, ಸಮಾಕ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಸೋನಿಯಾ ಸರಡಗಿ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *