ಚಿತ್ತಾಪುರ: ಪಟ್ಟಣದ ವೆಂಕಟೇಶ್ವರ ಕಾಲೋನಿಯಲ್ಲಿ ನಿನ್ನೆ (ರವಿವಾರ) ರಾತ್ರಿ 2 ಗಂಟೆ ಸುಮಾರಿಗೆ ಎರಡು ಮನೆಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಗುರುನಾಥ ಹಿಟ್ಟಿನ ಗೀರಿಣಿಯವರ ಮೆನೆಯಲ್ಲಿದ್ದ 2 ತೊಲೆ ಬಂಗಾರ, 15 ತೊಲೆ ಬೆಳ್ಳಿ, 10 ಸಾವಿರ ರೂ. ಕಳ್ಳತನವಾಗಿದೆ. ಧೂಳಯ್ಯಸ್ವಾಮಿ ಎನ್ನುವವರ ಮನೆಯಲ್ಲಿದ್ದ 3 ತೊಲೆ ಬಂಗಾರ, 9 ತೊಲೆ ಬೆಳ್ಳಿ, 30 ಸಾವಿರ ರೂ. ಕಳ್ಳತನವಾಗಿದೆ, ಶಂಕರ ಕೊಳಕೂ ಎನ್ನುವವರ ಮನೆಯ ಕೀಲಿ ಕೈ ಮುರಿದು ಕಳ್ಳತನಕ್ಕೆ ಯತ್ನಿಸಿರುವದಾಗಿ ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ ಅಂಬಾಟಿ, ಕ್ರೈಂ ಪಿಎಸ್‌ಐ ಚಂದ್ರಾಮಪ್ಪ, ಸಿಬ್ಬಂದಿಗಳಾದ ಲಾಲ್ ಅಹ್ಮದ್, ದತ್ತು ಜಾನೆ, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.