ಶಹಾಬಾದ್: ಸತತ ಮಳೆಯಿಂದ ದೇವಾಲಯ ಜಲಾವೃತ, ಜನಜೀವನ ಅಸ್ತವ್ಯಸ್ತ

ಸುದ್ದಿ ಸಂಗ್ರಹ ಶಹಾಬಾದ್ಮಹಾರಾಷ್ಟ್ರ ಜಲಾಶಯಗಳಿಂದ ನಿರಂತರ ನೀರು ಹರಿಬಿಡುತ್ತಿರುವ ಪರಿಣಾಮ ನಗರದ ಹಳೆ ಶಹಬಾದ್, ಸಂಗ್ ಏರಿಯಾ ಅಪ್ಪರ ಮಡ್ಡಿ ಲೋವರ್‌ ಮಡ್ಡಿ, ಸುಮಾರು ನಾಲ್ಕು ವಾರ್ಡಗಳಲ್ಲಿ ಹಳ್ಳದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಳೆ ಶಹಾಬಾದ್ ವಿಶ್ವರಾಧ್ಯ ಮಠ ಸಂಪೂರ್ಣ ಜಲದಿಗ್ಧಂಧನವಾಗಿದೆ. ಆಕಸ್ಮಿಕವಾಗಿ ಮಠದಲ್ಲಿ ಉಳಿದುಕೊಂಡ ಮಾನಸಿಕ ಅಸ್ತವ್ಯಸ್ತ ಮಹೆಬೂಬ್ ಪಟೇಲ್ ಅವರನ್ನು ರಕ್ಷಿಸಿ ಅಗ್ನಿಶಾಮಕ ದಳದ ತಂಡವು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ. ವಾರ್ಡ್ ನಂಬರ್ 7, 8, 9, 26 ಮತ್ತು 27ರಲ್ಲಿ ಹೆಚ್ಚು […]

Continue Reading

ರೋಗಿಗಳಿಗೆ ಸುರಕ್ಷಿತ ಚಿಕಿತ್ಸೆ ಅಗತ್ಯ: ಡಾ.ರಾಜಶೇಖರ ಪಾಟೀಲ

ಕಲಬುರಗಿ: ರೋಗಿಗೆ ಚಿಕಿತ್ಸೆ ನೀಡುವಾಗ ಸುರಕ್ಷಿತವಾಗಿ ನೀಡುವ ಜೊತೆಗೆ ಆಗಬಹುದಾದ ಹಾನಿಯನ್ನು ತಡೆಗಟ್ಟುವುದು, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಅನಗತ್ಯ ಹಾನಿಯ ಅಪಾಯ ತಗ್ಗಿಸುವುದು ಅಗತ್ಯವಾಗಿದೆ ಎಂದು ಖ್ಯಾತ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವ ಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ “ವಿಶ್ವ ರೋಗಿಗಳ ಸುರಕ್ಷತಾ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ರೋಗಿಯ ಆರೈಕೆ ಮಾಡುವ ಪ್ರಕ್ರಿಯೆಯ ಪ್ರತಿಯೊಂದು […]

Continue Reading

ಪ್ರಥಮ ಚಿಕಿತ್ಸೆ ಜೀವ ರಕ್ಷಕ: ಡಾ.ರಾಜಶೇಖರ ಪಾಟೀಲ

ಕಲಬುರಗಿ: ಯಾವುದೆ ರೀತಿಯ ಅಪಘಾತ, ದೇಹವು ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರೆ ತೆರಳುವಕ್ಕಿಂತ ಮುಂಚಿತವಾಗಿ, ಮನೆ ಅಥವಾ ಅಫಘಾತವಾದ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಥಮ ಚಿಕಿತ್ಸೆ ಮಾಡುವುದು ತುಂಬಾ ಅವಶ್ಯಕ ಎಂದು ಖ್ಯಾತ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ‘ಅಂತಾರಾಷ್ಟ್ರೀಯ ಪ್ರಥಮ ಚಿಕಿತ್ಸೆ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಪ್ರಥಮ […]

Continue Reading

ಸ್ವಾವಲಂಬನೆ, ಘನತೆಯ ಬದುಕಿಗೆ ಸಾಕ್ಷರತೆ ಅಗತ್ಯ

ಕಲಬುರಗಿ: ಸಾಕ್ಷರತೆಯು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ ಅಂಶವಾಗಿದೆ, ವ್ಯಕ್ತಿಯನ್ನು ಸಮಾಜದಲ್ಲಿ ಘನತೆ ಹಾಗೂ ಸ್ವಾವಲಂಬನೆಯಿಂದ ಬದಕಲು ಸಹಾಯ ಮಾಡುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಟ್ಟು, ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ ಪಾಟೀಲ್ ಹೇಳಿದರು.  ನಗರದ ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಬೆಳಿಗ್ಗೆ ಜರುಗಿದ “ಅಂತಾರಾಷ್ಟ್ರೀಯ ಸಾಕ್ಷರತಾ […]

Continue Reading

ಹೋಗಿ ಮೋದಿ, ಶಾ ಹತ್ತಿರ ಕೇಳು: ಕಷ್ಟ ಹೇಳಲು ಬಂದಿದ್ದ ಯುವ ರೈತನ ವಿರುದ್ಧ ಖರ್ಗೆ ಆಕ್ರೋಶ

ಕಲಬುರಗಿ: ಅತಿವೃಷ್ಠಿಯಿಂದ ನಾನು ಬೆಳೆದಿದ್ದ ಬೆಳೆ ಹಾಳಾಗಿದೆ ಎಂದು ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದಿದ್ದ ಯುವ ರೈತನ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಬಂದಿದ್ದ ಯುವಕ ಅತಿವೃಷ್ಠಿಯಿಂದ 4 ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆ ಹಾಳಾಗಿದೆ ಸರ್ ಎಂದು ಹೇಳಿದ್ದಾನೆ. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು, ಯುವಕನಿಗೆ ನೀನು ಎಷ್ಟು ಎಕರೆಯಲ್ಲಿ ಬೆಳೆ ಬೆಳೆದಿದ್ದಿಯಾ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಯುವಕ 4 ಎಕರೆಯಲ್ಲಿ ಬೆಳೆ ಬೆಳೆದಿದ್ದೆ […]

Continue Reading

ಮಾನವನ ದೇಹಕ್ಕೆ ಎಳೆನೀರು ಸಂಜೀವಿನಿಯಂತೆ

ಕಲಬುರಗಿ: ಮಾನವನ ದೇಹದ ಬೆಳವಣಿಗೆಗೆ ಗಾಳಿ, ನೀರು, ಆಹಾರ ಅತ್ಯವಶ್ಯಕ. ದೇಹಕ್ಕೆ ಬರುವ ರೋಗಗಳಲ್ಲಿ ಆಹಾರ ಸಂಬಂಧಿತ ಕಾಯಿಲೆಗಳು ಪ್ರಮುಖ. ವ್ಯಕ್ತಿ ಯಾವುದೆ ಕಾಯಿಲೆಗೆ ತುತ್ತಾದಾಗ ಆಹಾರ, ನೀರು ಸೇವನೆ ಅಸಾಧ್ಯವಾದಾಗ ಎಳೆನೀರು ಸೇವಿಸಿದರೆ ನೈಸರ್ಗಿಕ ಗ್ಲೂಕೋಸ್ ದೊರೆಯುತ್ತದೆ. ಇದು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ತೆಂಗು ದಿನಾಚರಣೆ’ಯಲ್ಲಿ ತೆಂಗಿನ ಗಿಡ […]

Continue Reading

ಸದೃಢ ಆರೋಗ್ಯಕ್ಕಾಗಿ ಸಮತೋಲಿತ ಆಹಾರದ ಸೇವನೆ ಅಗತ್ಯ: ಡಾ.ಅನುಪಮಾ

ಕಲಬುರಗಿ: ಸದೃಢ ಆರೋಗ್ಯಕ್ಕಾಗಿ ಎಲ್ಲರು ಸಮತೋಲಿತ ಆಹಾರ ಸೇವಿಸುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಪೋಷಕಾಂಶ ಸಪ್ತಾಹ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದ ಅವರು, ಯಾವುದೆ ರಾಷ್ಟ್ರದ ಅಭಿವೃದ್ದಿಯಲ್ಲಿ ಆರೋಗ್ಯ ಭರಿತ, ಸದೃಢ ಮಾನವ ಸಂಪನ್ಮೂಲ ತುಂಬಾ ಅವಶ್ಯಕ. ಮಗುವಿದ್ದಾಗಲೇ ಅದಕ್ಕೆ ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರ ನೀಡಬೇಕು. ಇದರಿಂದ ಆ […]

Continue Reading

ನೇತ್ರದಾನ ಮಾಡುವುದು ಅಗತ್ಯ: ಡಾ.ಕೇಶ್ವಾರ

ಕಲಬುರಗಿ: ಕಣ್ಣುಗಳು ದಾನ ಮಾಡುವುದು ಒಂದು ಶ್ರೇಷ್ಠ ಕಾರ್ಯ. ಹುಟ್ಟು ಕುರುಡರಾಗಿ ಅಥವಾ ಅಪಘಾತದಿಂದ ದೃಷ್ಟಿ ಕಳೆದುಕೊಂಡವರಿಗೆ ಕಣ್ಣು ದಾನ ಮಾಡುವ ಮೂಲಕ ಅವರಿಗೆ ದೃಷ್ಟಿ ಭಾಗ್ಯ ನೀಡಬಹುದು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ “41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ” ಕಾರ್ಯಕ್ರಮವನ್ನು ಮಹಿಳೆಯೊಬ್ಬರ ಕಣ್ಣು ಪರೀಕ್ಷಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾವಿನ ನಂತರವು […]

Continue Reading

ದೇಶದ ಅಭಿವೃದ್ಧಿಯಲ್ಲಿ ಉದ್ಯಮಗಳ ಪಾತ್ರ ಅನನ್ಯ

ಕಲಬುರಗಿ: ಉದ್ಯಮಗಳು ಸರಕುಗಳನ್ನು ಉತ್ಪಾದಿಸಿ ಸೇವೆಗಳನ್ನು ನೀಡುತ್ತವೆ. ಸರ್ಕಾರಕ್ಕೆ ತೆರಿಗೆ ಪಾವತಿಸುತ್ತವೆ. ಗ್ರಾಹಕರಿಗೆ ಅಗತ್ಯ ಸರಕುಗಳು ಪೂರೈಸುತ್ತವೆ. ಉದ್ಯೋಗ ನೀಡುವುದು ಸೇರಿದಂತೆ ಮತ್ತಿತರ ಕೊಡುಗೆ ನೀಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಉದ್ಯಮಗಳು ಅನನ್ಯವಾದ ಪಾತ್ರ ವಹಿಸಿವೆ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಕೇದರನಾಥ ಕುಲಕರ್ಣಿ ಹೇಳಿದರು. ನಗರದ ಸ್ವಾರಗೇಟ್’ನ ‘ರೇವಣಸಿದ್ದೇಶ್ವರ ಮಿನರಲ್ ವಾಟರ್ ಪ್ಲಾಂಟ್’ನ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ಉದ್ಯಮಿಗಳ ದಿನಾಚರಣೆ’ಯಲ್ಲಿ ಮಾತನಾಡಿದರು. ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ […]

Continue Reading

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ ಅಪಾರ: ಎಚ್.ಬಿ ಪಾಟೀಲ

ಕಲಬುರಗಿ: ಭಾರತ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಪಾದಾರ್ಪಣೆ ಮಾಡುವುದು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡುತ್ತಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರ, ಚಂದ್ರನಲ್ಲಿರುವ ವಾತಾವರಣ ಸೇರಿದಂತೆ ಅಲ್ಲಿನ ಮಾಹಿತಿಯ ಬಗ್ಗೆ ವ್ಯಾಪಕವಾಗಿ ಸಂಶೋಧನೆ […]

Continue Reading