ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ಕೊಡ್ಲಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ರಟಕಲ್ ಠಾಣೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಮೂಲತಃ ಕಲಬುರಗಿಯ ರಾಣೇಶ ಪೀರ್ ದರ್ಗಾ ಪ್ರದೇಶ ಆಶ್ರಯ ಕಾಲೊನಿ ನಿವಾಸಿ, ಕೊಡ್ಲಿ ಗ್ರಾಮದಲ್ಲಿ ನೆಲೆಸಿರುವ ಸುಧಾಕರ ಪಾಣೇಗೇರ ಬಂಧಿತ ಆರೋಪಿ. ಆತನಿಂದ ಒಟ್ಟು 51 ಗ್ರಾಂ ಚಿನ್ನಾಭರಣ, 26 ಗ್ರಾಂ ಬೆಳ್ಳಿ ಆಭರಣ, 50 ಸಾವಿರ ನಗದು ಸೇರಿದಂತೆ ಒಟ್ಟು 8.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಸುಲೇಪೇಟ ಸಿಪಿಐ ಕೃಷ್ಣಕುಮಾರ ನೇತೃತ್ವದ ರಟಕಲ್ ಪಿಎಸ್‌ಐ ಶೀಲಾದೇವಿ, ಸಿಬ್ಬಂದಿ ನಟರಾಜ, ಮೋಹನರೆಡ್ಡಿ, ವಸಂತ, ಪಾಂಡುರಂಗ, ಸುನೀಲಕುಮಾರ, ಆಕಾಶ, ಲಕ್ಷ್ಮಿ ಮ್ಯಾಳೇಸಿ ಮತ್ತು ರೇವಣಸಿದ್ದಪ್ಪ ಅವರಿದ್ದ ತಂಡವು ಈ ಪ್ರಕರಣ ಭೇದಿಸಿದೆ.