ಚಿತ್ರ : 11 ಎಸ್‌ಬಿಡಿ 1
ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಬ್ಬದ ನಿಮಿತ್ತ ಸೌಹಾರ್ದ ಸಭೆಯಲ್ಲಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಮಾತನಾಡಿದರು.
ಹಬ್ಬಗಳ ದಿಕ್ಕು ತಪ್ಪಬಾರದು ಭಾವೈಕ್ಯತೆಯಿಂದ ಹಬ್ಬ ಆಚರಿಸಲು ಸಲಹೆ
ಸುದ್ದಿ ಸಂಗ್ರಹ ಶಹಾಬಾದ್
ಹಬ್ಬಗಳು ಭಾವನೆಗಳಿಗೆ ಧಕ್ಕೆ ತರದಂತೆ ಭಾವೈಕ್ಯತೆ ಹಾಗೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು, ಹಬ್ಬಗಳ ದಿಕ್ಕು ತಪ್ಪಬಾರದು, ಹಬ್ಬಗಳಲ್ಲಿ ಸಮಾಜದಲ್ಲಿ ಶಾಂತಿಗೆ ಭಂಗ ತಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಶಹಾಬಾದ ವಿಭಾಗದ ಡಿವೈಎಸ್‌ಪಿ
ಶಂಕರಗೌಡ ಪಾಟೀಲ್ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಬ್ಬದ ನಿಮಿತ್ತ ಕರೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದರು. ಗಣೇಶ ಉತ್ಸವ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಿ ಎಲ್ಲರೂ ಸಹೋದರತೆ ಭಾವದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರು.
ತಹಶೀಲ್ದಾರ ನೀಲಪ್ರಭಾ ಬಬಲಾದ ಮಾತನಾಡಿ ಗಣೇಶ ಉತ್ಸವ ಸಮಿತಿಯವರು ಸಾರ್ವಜನಿಕರು ವಿವಿಧ ಇಲಾಖೆಗಳಿಂದ ಪಡೆಯಬೇಕಾದ ಎಲ್ಲಾ ಪರವಾನಗಿಗಳು ಅನುಮೋದನೆಗಳು
ಮತ್ತು ಸೇವೆಗಳನ್ನು ಒಂದೇ ಸೂರಿನಡಿ ಪಡೆಯುವ ವ್ಯವಸ್ಥೆಯಾಗಿದೆ. ಪೊಲೀಸ್ ಇಲಾಖೆ, ನಗರಸಭೆ, ವಿದ್ಯುತ್ ಇಲಾಖೆ ಮತ್ತು ಅಗ್ನಿಶಾಮಕ ದಳದಂತಹ ಬೇರೆ ಬೇರೆ ಕಚೇರಿಗಳಿಗೆ ಅಲೆಯಬೇಕಾಗುತ್ತಿತ್ತು. ಆದರೆ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ನೀವು ಒಂದೇ ಒಂದು ಅರ್ಜಿ ಸಲ್ಲಿಸಿದರೆ ಸಾಕು, ಆ ಅರ್ಜಿಯೇ ಎಲ್ಲಾ ಇಲಾಖೆಗಳಿಗೆ ಹೋಗಿ ಅಲ್ಲಿಂದಲೇ ನಿಮಗೆ ಎಲ್ಲಾ ಅನುಮತಿಗಳು ಒಟ್ಟಿಗೆ ಸಿಗುತ್ತವೆ.ಏಕ ಗವಾಕ್ಷಿ ವ್ಯವಸ್ಥೆಯ ಮುಖ್ಯ ಅನುಕೂಲಗಳು ಸಮಯದ ಉಳಿತಾಯವಾಗುತ್ತದೆ ಎಂದು ಹೇಳಿದರು.
ಪಿಐ ಪರಶುರಾಮ ವನಂಜಕರ ಅವರು ಪ್ರಾಸ್ತಾವಿಕ ಮಾತನಾಡಿದರು.
ನಗರಸಭೆ ಎಇಇ ಪೌರಾಯುಕ್ತ ಮನೋಜಕುಮಾರ ಗುರಿಕಾರ, ಅಗ್ನಿಶಾಮಕ ಅಧಿಕಾರಿ ನಾಗರಾಜ, ಎಸ್‌ಓ ಮಡಿವಾಳ, ಮಾತನಾಡಿದರು.
ಚಂದ್ರಕಾAತ ಗೊಬ್ಬರಕರ, ರಫೀಗ ಬಾಗವಾನ, ಮೃತ್ಯುಂಜಯ ಸ್ವಾಮಿ, ಮತೀನ ಸೇಠ ಮಾತನಾಡಿದರು. ಚಂದ್ರಕಾAತ ಗೊಬ್ಬುರ, ಮೃತ್ಯುಂಜಯ ಹಿರೇಮಠ, ಕಿರಣ ಚವ್ಹಾಣ್, ಬಸವರಾಜ ಸಾತ್ಯಾಳ, ಕೃಷ್ಣಪ್ಪ ಕರಣಿಕ, ದಶರಥ ದೇಸಾಯಿ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ರಾಮು ಕುಸಾಳೆ, ಶಿವಕುಮಾರ ನಾಟೀಕಾರ, ಜಹೀರ್ ಪಟ್ವಾಘರ, ರಾಜೇಶ ಯನಗುಂಟಿಕರ್, ಕಾಶಿನಾಥ ಜೊಗಿ, ದೇವರಾಜ ರಾಠೋಟ, ಕಿರಣ ಚವ್ಹಾಣ್, ಡಿ.ಸಿ ಹೊಸ್ಮನಿ, ಮಂಗಲ ನಾಯಕ, ಶರಣು ವಸ್ತ್ರದ, ಮಲ್ಲಿಕಾರ್ಜುನ ಕಟ್ಟಿ, ನಾಗರಾಜ ಮೇಲಗಿರಿ, ತಾಲೂಕಿನ ವಿವಿಧ ಗಣೇಶ ಉತ್ಸವ ಸಮಿತಿಯ ಯುವಕರು, ಮುಖಂಡರು ಪಾಲ್ಗೊಂಡಿದರು.
ಮಲ್ಲಿಕಾರ್ಜುನ ನಿರೂಪಿಸಿದರು. ದೊಡ್ಡಪ್ಪ ಪೂಜಾರಿ ಸ್ವಾಗತಿಸಿದರು.
ಕೋಟ್ :
“ ಪ್ರತಿಯೊಂದು ಹಬ್ಬ, ಆಚರಣೆಗಳಾಗಲಿ ತನ್ನದೆಯಾದ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುತ್ತದೆ. ಅವುಗಳ ಮಹತ್ವ ಅರಿತಾಗ ಆಚರಣೆಯಲ್ಲಿ ಸಾರ್ವತ್ರಿಕ ಸಂಭ್ರಮ ಕಾಣಬಹುದು. ತಾಲೂಕಿನಲ್ಲಿ ಯಾವುದೇ ಅಪರಾಧ ಚಟುವಟಿಕೆ ಸಹಿಸುವುದಿಲ್ಲ ಅಂತವರಿಗೆ ಕಾನೂನ ತಕ್ಕ ಉತ್ತರ ನೀಡಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಇತರರಿಗೆ ಯಾವುದೇ ತೊಂದರೆಯಾಗಬಾರದು, ಸಭ್ಯತೆಯಿಂದ ಕಲಬುರಗಿ ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಭಣೆ ಆಚರಣೆ
– ಶಂಕರಗೌಡ ಪಾಟೀಲ್ ಡಿವೈಎಸ್‌ಪಿ ಶಹಾಬಾದ್.