ಸುದ್ದಿ ಸಂಗ್ರಹ ಶಹಾಬಾದ್
ಹಬ್ಬಗಳು ಜನರ ಭಾವನೆಗಳು ಗಟ್ಟಿ ಮಾಡುತ್ತವೆ, ಇದಕ್ಕೆ ತದ್ವಿರುದ್ಧ ಕೆಲಸ ಮಾಡಬಾರದು. ಭಾವೈಕ್ಯತೆ ಹಾಗೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು, ಸಮಾಜದಲ್ಲಿ ಶಾಂತಿಗೆ ಭಂಗ ತಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಹಾಬಾದ ಡಿವೈಎಸ್ಪಿ
ಶಂಕರಗೌಡ ಪಾಟೀಲ್ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ನಿಮಿತ್ತ ಕರೆಯಲಾದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಉತ್ಸವದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಎಲ್ಲರೂ ಸಹೋದರತೆ ಭಾವದಿಂದ ಹಬ್ಬಗಳು ಆಚರಿಸಬೇಕು ಎಂದರು.
ತಹಸಿಲ್ದಾರ ನೀಲಪ್ರಭಾ ಬಬಲಾದ ಮಾತನಾಡಿ, ಗಣೇಶ ಉತ್ಸವ ಸಮಿತಿಯವರು, ಸಾರ್ವಜನಿಕರು ವಿವಿಧ ಇಲಾಖೆಗಳಿಂದ ಪಡೆಯಬೇಕಾದ ಎಲ್ಲಾ ಪರವಾನಗಿಗಳ ಅನುಮೋದನೆ
ಮತ್ತು ಸೇವೆಗಳನ್ನು ಒಂದೆ ಸೂರಿನಡಿ ಪಡೆಯುವ ವ್ಯವಸ್ಥೆಯಾಗಿದೆ. ಪೊಲೀಸ್ ಇಲಾಖೆ, ನಗರಸಭೆ, ವಿದ್ಯುತ್ ಇಲಾಖೆ ಮತ್ತು ಅಗ್ನಿಶಾಮಕ ದಳದಂತಹ ಬೇರೆ ಬೇರೆ ಕಚೇರಿಗಳಿಗೆ ಅಲೆಯಬೇಕಾಗುತ್ತಿತ್ತು. ಆದರೆ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ನೀವು ಒಂದು ಅರ್ಜಿ ಸಲ್ಲಿಸಿದರೆ ಸಾಕು, ಆ ಅರ್ಜಿಯೇ ಎಲ್ಲಾ ಇಲಾಖೆಗಳಿಗೆ ಹೋಗಿ ಅಲ್ಲಿಂದಲೆ ನಿಮಗೆ ಎಲ್ಲಾ ಅನುಮತಿಗಳು ಒಟ್ಟಿಗೆ ಸಿಗುತ್ತವೆ. ಏಕ ಗವಾಕ್ಷಿ ವ್ಯವಸ್ಥೆಯ ಮುಖ್ಯ ಅನುಕೂಲಗಳ ಸಮಯದ ಉಳಿತಾಯವಾಗುತ್ತದೆ ಎಂದರು.
ಪಿಐ ಪರಶುರಾಮ ವನಂಜಕರ ಪ್ರಾಸ್ತಾವಿಕ ಮಾತನಾಡಿದರು.
ನಗರಸಭೆ ಎಇಇ ಪೌರಾಯುಕ್ತ ಮನೋಜಕುಮಾರ ಗುರಿಕಾರ, ಅಗ್ನಿಶಾಮಕ ಅಧಿಕಾರಿ ನಾಗರಾಜ, ಎಸ್ಓ ಮಡಿವಾಳ, ಮಾತನಾಡಿದರು.
ಚಂದ್ರಕಾಂತ ಗೊಬ್ಬರಕರ, ರಫೀಕ್ ಬಾಗವಾನ, ಮೃತ್ಯುಂಜಯ ಸ್ವಾಮಿ, ಮತೀನ ಸೇಠ, ಚಂದ್ರಕಾಂತ ಗೊಬ್ಬುರ, ಮೃತ್ಯುಂಜಯ ಹಿರೇಮಠ, ಕಿರಣ ಚವ್ಹಾಣ್, ಬಸವರಾಜ ಸಾತ್ಯಾಳ, ಕೃಷ್ಣಪ್ಪ ಕರಣಿಕ, ದಶರಥ ದೇಸಾಯಿ ಅನಿಸಿಕೆ ವ್ಯಕ್ತಪಡಿಸಿದರು.
ಪ್ರತಿಯೊಂದು ಹಬ್ಬ, ಆಚರಣೆಗಳಾಗಲಿ ತನ್ನದೆಯಾದ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುತ್ತದೆ. ಅವುಗಳ ಮಹತ್ವ ಅರಿತಾಗ ಆಚರಣೆಯಲ್ಲಿ ಸಾರ್ವತ್ರಿಕ ಸಂಭ್ರಮ ಕಾಣಬಹುದು. ತಾಲೂಕಿನಲ್ಲಿ ಯಾವುದೆ ಅಪರಾಧ ಚಟುವಟಿಕೆ ಸಹಿಸುವುದಿಲ್ಲ ಅಂತವರಿಗೆ ಕಾನೂನ ತಕ್ಕ ಉತ್ತರ ನೀಡಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಇತರರಿಗೆ ಯಾವುದೆ ತೊಂದರೆಯಾಗಬಾರದು, ಸಭ್ಯತೆಯಿಂದ ಕಲಬುರಗಿ ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಭಣೆ ಆಚರಣೆ.
– ಶಂಕರಗೌಡ ಪಾಟೀಲ್ ಡಿವೈಎಸ್ಪಿ ಶಹಾಬಾದ್.
ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ರಾಮು ಕುಸಾಳೆ, ಶಿವಕುಮಾರ ನಾಟೀಕಾರ, ಜಹೀರ್ ಪಟ್ವಾಘರ, ರಾಜೇಶ ಯನಗುಂಟಿಕರ್, ಕಾಶಿನಾಥ ಜೊಗಿ, ದೇವರಾಜ ರಾಠೋಡ, ಕಿರಣ ಚವ್ಹಾಣ, ಡಿ.ಸಿ ಹೊಸ್ಮನಿ, ಮಂಗಲ ನಾಯಕ, ಶರಣು ವಸ್ತ್ರದ್, ಮಲ್ಲಿಕಾರ್ಜುನ ಕಟ್ಟಿ ಮತ್ತು ನಾಗರಾಜ ಮೇಲಗಿರಿ ಸೇರಿದಂತೆ ತಾಲೂಕಿನ ವಿವಿಧ ಗಣೇಶ ಉತ್ಸವ ಸಮಿತಿಯ ಯುವಕರು, ಮುಖಂಡರು ಪಾಲ್ಗೊಂಡಿದರು.
ಮಲ್ಲಿಕಾರ್ಜುನ ನಿರೂಪಿಸಿದರು, ದೊಡ್ಡಪ್ಪ ಪೂಜಾರಿ ಸ್ವಾಗತಿಸಿದರು.