ಸುದ್ದಿ ಸಂಗ್ರಹ

ಕಾಳಗಿ: ಪಿಎಸ್ಐ ತಿಮ್ಮಯ್ಯ ಬಿ.ಕೆ ಅವರಿಗೆ ಬೀಳ್ಕೊಡುಗೆ ಸಮಾರಂಭ

ಸುದ್ದಿ ಸಂಗ್ರಹ ಕಾಳಗಿ
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎರಡು ವರ್ಷ ಪಿಎಸ್ಐ ಆಗಿ ಸೇವೆ ಸಲ್ಲಿಸಿದ ತಿಮ್ಮಯ್ಯ ಬಿ.ಕೆ ಅವರು ಕರ್ತವ್ಯದಲ್ಲಿ ಚಾಣಾಕ್ಷ ಬುದ್ದಿವಂತ ವ್ಯಕ್ತಿಯಾಗಿದ್ದರು ಎಂದು ಸಿಪಿಐ ಜಗದೇವಪ್ಪ ಪಾಳಾ ಹೇಳಿದರು.

ಈಚೆಗೆ ಕಾಳಗಿ ಪೊಲೀಸ್ ಠಾಣೆಯಿಂದ ಯಡ್ರಾಮಿ ಠಾಣೆಗೆ ವರ್ಗಾವಣೆಗೊಂಡ ಪಿಎಸ್ಐ ತಿಮ್ಮಯ್ಯ ಬಿ.ಕೆ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಎಸ್ಐ ತಿಮ್ಮಯ್ಯ ಬಿ.ಕೆ ಅವರು ಕಳ್ಳತನ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ಭೇದಿಸಿ ಆರೋಪಿಗಳನ್ನು ಸದೆ ಬಡೆಯುವ ಮೂಲಕ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ ಎಂದರು.

ಸನ್ಮಾನಿತ ಪಿಎಸ್ಐ ತಿಮ್ಮಯ್ಯ ಬಿ.ಕೆ, ಮಾಡಬೂಳ ಪಿಎಸ್ಐ ಗೌತಮ ಗುತ್ತೇದಾರ, ಕ್ರೈಂ ಪಿಎಸ್ಐ ಸಿದ್ದಲಿಂಗ ಸೇರಿದಂತೆ ಅನೇಕರು ಮಾತನಾಡಿ, ಕರ್ತವ್ಯ ಮತ್ತು ಸ್ಥಳೀಯ ಜನರ, ಅಧಿಕಾರಿಗಳ ಸಹಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಯುವ ಮುಖಂಡ ಸಂತೋಷ ಪತಂಗೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಶರಣಪ್ಪ ಬೇಲೂರ, ಗುರುರಾಜ ಮದ್ದೂರ, ಸಂತೋಷ ಕಡಬೂರ, ದತ್ತು ಗುತ್ತೇದಾರ, ಸಂಗಮೇಶ ಬಡಿಗೇರ, ನಾಗಯ್ಯ ಮಠಪತಿ, ರಾಜು ಒಡೆಯರಾಜ, ಸಂತೋಷ ಚಿಕ್ಕಮಠ ಸೇರಿದಂತೆ ಅನೇಕರು ಇದ್ದರು‌.

ಕಾರ್ಯಕ್ರಮದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ, ಠಾಣೆಯ ವ್ಯಾಪ್ತಿಯ ವಿವಿಧ ಗ್ರಾಮಸ್ಥರು, ಸ್ಥಳೀಯರು ಸನ್ಮಾನಿಸಿ ಬೀಳ್ಕೊಟ್ಟರು. ನಂತರ ಸಿಬ್ಬಂದಿ ಹೂವಿನ ಸುರಿಮಳೆ ಗೈದರು.

Leave a Reply

Your email address will not be published. Required fields are marked *