ಕಲಬುರಗಿ: ರೋಗಿಗೆ ಚಿಕಿತ್ಸೆ ನೀಡುವಾಗ ಸುರಕ್ಷಿತವಾಗಿ ನೀಡುವ ಜೊತೆಗೆ ಆಗಬಹುದಾದ ಹಾನಿಯನ್ನು ತಡೆಗಟ್ಟುವುದು, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಅನಗತ್ಯ ಹಾನಿಯ ಅಪಾಯ ತಗ್ಗಿಸುವುದು ಅಗತ್ಯವಾಗಿದೆ ಎಂದು ಖ್ಯಾತ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವ ಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ “ವಿಶ್ವ ರೋಗಿಗಳ ಸುರಕ್ಷತಾ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ರೋಗಿಯ ಆರೈಕೆ ಮಾಡುವ ಪ್ರಕ್ರಿಯೆಯ ಪ್ರತಿಯೊಂದು ಹಂತವು ಒಂದು ನಿರ್ದಿಷ್ಟ ಮಟ್ಟದ ಅಂತರ್ಗತ ಅಸುರಕ್ಷಿತತೆಯನ್ನು ಹೊಂದಿರುತ್ತದೆ ಎಂದರು.
ಸ್ಪಷ್ಟ ನೀತಿಗಳು, ಸಾಂಸ್ಥಿಕ ನಾಯಕತ್ವದ ಸಾಮರ್ಥ್ಯ, ಸುರಕ್ಷತಾ ಸುಧಾರಣೆಗಳನ್ನು ಹೆಚ್ಚಿಸುವ ದತ್ತಾಂಶ, ನುರಿತ ಆರೋಗ್ಯ ವೃತ್ತಿಪರರು ಮತ್ತು ಅವರ ಆರೈಕೆಯಲ್ಲಿ ರೋಗಿಗಳು ಪರಿಣಾಮಕಾರಿಯಾಗಿ ಒಳಗೊಳ್ಳುವುದು. ರೋಗ ನಿರ್ಣಯದ ಬಗ್ಗೆ ತಪ್ಪು ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ರೋಗಿಗೆ ಚಿಕಿತ್ಸೆ ನೀಡುವುದು, ಆರೋಗ್ಯ-ಸ್ವಾಧೀನಪಡಿಸಿಕೊಂಡಿರುವ ಸೋಂಕುಗಳು, ಮರುಪರಿಶೀಲನೆಗಳು, ರೋಗಿಯ ಖಾಯಿಲೆ ಕುರಿತ ಇತಿಹಾಸ ತಿಳಿಯುವುದು ಅತ್ಯಗತ್ಯ ಎಂದರು.
ತಪ್ಪಾದ ಸೈಟ್ ಶಸ್ತ್ರಚಿಕಿತ್ಸೆ, ಉತ್ತಮ ಸಂವಹನದ ಕೊರತೆ, ಆಸ್ಪತ್ರೆಯ ನೌಕರರ ನಡುವೆ, ರೋಗಿ ಮತ್ತು ವೈದ್ಯರ ನಡುವೆ ಸರಿಯಾದ ಸಂವಹನ ಇರಬೇಕು. ರೋಗಿಗಳ ಸುರಕ್ಷತೆಯನ್ನು ಸುಧಾರಿಸಲು ಸಾರ್ವಜನಿಕ ಜಾಗೃತಿ ಮೂಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಚ್.ಬಿ ಪಾಟೀಲ್, ಶಿವಯೋಗೆಪ್ಪಾ ಎಸ್. ಬಿರಾದಾರ, ಅಸ್ಲಾಂ ಶೇಖ್, ದತ್ತು ಹಡಪದ, ಸುಭಾಷ ಕೇಶ್ವಾರ ಸೇರಿದಂತೆ ಅನೇಕರು ಇದ್ದರು.