ಕರ್ನಾಟಕ ಏಕೀಕರಣದ ಯಶೋಗಾಥೆ ಅವಿಸ್ಮರಣೀಯ: ಮುಡಬಿ ಗುಂಡೇರಾವ

ಸುದ್ದಿ ಸಂಗ್ರಹ ಕಲಬುರಗಿ ಕರ್ನಾಟಕ ಏಕೀರಣದ ಯಶೋಗಾಥೆ ಅವಿಸ್ಮರಣೀಯವಾಗಿದ್ದು, ವಿದ್ಯಾರ್ಥಿ ದಿಸೆಯಿಂದಲೇ ನಾಡು-ನುಡಿಯ ಬಗ್ಗೆ ತಿಳಿದುಕೊಂಡು ಸೇವೆ ಸಲ್ಲಿಸಬೇಕು ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು. ನಗರದ ವಿದ್ಯಾ ನಗರದಲ್ಲಿನ ರಾಜೀವ ಗಾಂಧಿ ಸ್ಮಾರಕ ಅನುದಾನಿತ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಪ್ರಯುಕ್ತ ಗುರುವಾರ ಹಮ್ಮಿಕೊಂಡಿರುವ ಸರಣಿ ಉಪನ್ಯಾಸ-5 : ‘ಕರ್ನಾಟಕದ ಏಕೀಕರಣದ ಯಶೋಗಾಥೆ’ಯ ವಿಷಯದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾತನಾಡುವ ಎಲ್ಲರನ್ನು ಒಟ್ಟುಗೂಡಿಸಿ ಅಖಂಡ […]

Continue Reading

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಬಿ ಹೊಸಮನಿಗೆ ಗೌರವ ಸತ್ಕಾರ

ಸುದ್ದಿ ಸಂಗ್ರಹ ಕಲಬುರಗಿ ಪ್ರಸಕ್ತ ಸಾಲಿನ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಬಿ ಹೊಸಮನಿ ಅವರಿಗೆ ನಗರದ ಗುಬ್ಬಿ ಕಾಲೋನಿಯಲ್ಲಿರುವ ಹೊಸಮನಿ ಅವರ ಮನೆಯಲ್ಲಿ ಸತ್ಕರಿಸಲಾಯಿತು. ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಸನ್ಮಾನಿಸಿ, ಗೌರವಿಸಲಾಯಿತು. ಕಜಾಪ ಜಿಲಾಧ್ಯಕ್ಷ ಎಂ.ಬಿ ನಿಂಗಪ್ಪ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಪ್ರಮುಖರಾದ ಶೀಲವಂತ ಹೊಸಮನಿ,  ಸಾಯಬಣ್ಣ […]

Continue Reading

ಮಾನವ ಕಂಪ್ಯೂಟರ್ ಶಕುಂತಲಾ ದೇವಿ: ಎಚ್.ಬಿ ಪಾಟೀಲ

ಕಲಬುರಗಿ: ಶಕುಂತಲಾ ದೇವಿಯವರನ್ನು ಗಣಿತದ ಸಂಕೀರ್ಣ ಸಮಸ್ಯೆಗಳನ್ನು ಕ್ಯಾಲ್ಕುಲೇಟರ್‌ಗಿಂತ ವೇಗವಾಗಿ ಪರಿಹರಿಸುವ ಸಾಮರ್ಥ್ಯದಿಂದಾಗಿ ಮಾನವ ಕಂಪ್ಯೂಟರ್ ಎಂದು ಕರೆಯಲಾಗಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದವರು. ಶಕುಂತಲಾ ದೇವಿಯವರು ನಮ್ಮ ನಾಡು, ದೇಶದ ಕೀರ್ತಿ ವಿಶ್ವದೆಲ್ಲೆಡೆ ಪಸರಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.   ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ನಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಮಾನವ ಕಂಪ್ಯೂಟರ್ ಶಕುಂತಲಾ ದೇವಿಯವರ 96ನೇ […]

Continue Reading

ಬಸವೇಶ್ವರ ಸಮಾಜ ಸೇವಾ ಬಳಗದಿಂದ ಸಂಭ್ರಮದ 70ನೇ ಕರ್ನಾಟಕ ರಾಜ್ಯೋತ್ಸವ

ಕಲಬುರಗಿ: ನಗರದ ಆಳಂದ ಖಾದ್ರಿ ಚೌಕ್‌ನಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಶನಿವಾರ ಸಂಭ್ರಮದಿಂದ 70ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖಂಡ ಓಂಕಾರ ವಠಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ ಮತ್ತು ವಿದ್ಯಾರ್ಥಿಗಳು ಇದ್ದರು.

Continue Reading

ಸೈಡ್‌ ಕೊಡದಿದ್ದಕ್ಕೆ ಕಿರಿಕ್‌, ಬೈಕ್‌ಗೆ ಕ್ಯಾಬ್ ಗುದ್ದಿಸಿ ದುಂಡಾವರ್ತನೆ – ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರು: ‌ಸೈಡ್‌ ಕೊಡದಿದ್ದಕ್ಕೆ ಬೈಕ್‌ಗೆ ಕಾರು ಗುದ್ದಿಸಿ ಕ್ಯಾಬ್‌ ಚಾಲಕ ದುಂಡಾವರ್ತನೆ ತೋರಿದ ಘಟನೆ ನಗರದ ಕೆ.ಆರ್‌ ಪುರದ ಬಳಿ ನಡೆದಿದೆ. ಸೈಡ್ ಕೊಡುವ ವಿಚಾರಕ್ಕೆ ಕ್ಯಾಬ್‌ ಚಾಲಕ ಹಾಗೂ ಬೈಕ್‌ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ವಲ್ಪ ಮುಂದೆ ಬಂದು ಬೈಕ್ ಸವಾರ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಕ್ಯಾಬ್‌ ಚಾಲಕ ಕಾರಿನಲ್ಲಿ ಬೈಕ್‌ಗೆ ಗುದ್ದಿಸಿ ಸವಾರನನ್ನು ಬೀಳಿಸಿದ್ದಾನೆ. ಕ್ಯಾಬ್ ಚಾಲಕನ ದುಂಡಾವರ್ತನೆ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾನದಲ್ಲಿ […]

Continue Reading

ರಾಷ್ಟ್ರೀಯ ಏಕತಾ ದಿನ ಆಚರಣೆ: ಮಕ್ಕಳಿಂದ ಪ್ರತಿಜ್ಞಾ ವಿಧಿ ಬೋಧನೆ

ಶಹಾಬಾದ: ಸರ್ದಾರ್ ವಲ್ಲಭವಾಯ್ ಪಟೇಲ್ ಅವರು ದೇಶದ ಎಲ್ಲಾ ಸಂಸ್ಥಾನಗಳನ್ನು ಒಗ್ಗೂಡಿಸಿದರು. ದೇಶದ ಐಕ್ಯತೆ, ಸಮಗ್ರತೆ, ಆತಂರಿಕ ಭದ್ರತೆಗಾಗಿ ಶ್ರಮಿಸಿದ ಮಹನೀಯರು ಎಂದು ಮುಖ್ಯಗುರು ಸವಿತಾ ಬೆಳಗುಂಪಿ ಹೇಳಿದರು. ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭವಾಯಿ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟೇಲರ ಸಾಧನೆಗಳು ನಮಗೆಲ್ಲರಿಗೂ ಸ್ಫೂರ್ತಿದಾಯಕ. ಐಕ್ಯತೆ, ಸಮಗ್ರತೆ, ಆಂತರಿಕ ಭದ್ರತೆ ನಿಟ್ಟಿನಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಲು ಏಕತಾ ದಿನಾಚರಣೆ ಪ್ರೇರಣೆಯಾಗಿದೆ […]

Continue Reading

ನಾಳೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಸುದ್ದಿ ಸಂಗ್ರಹ ಕಲಬುರಗಿ ಜಿಲ್ಲಾಡಳಿತ, ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಅ.31ರಂದು ಬೆಳಗ್ಗೆ 10.30ಕ್ಕೆ ನಗರದ ಡಾ.ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಸರಕಾರಿ ನೌಕರರ ದಿನಾಚರಣೆ ನಿಮಿತ್ತ ‘ಸರ್ವೋತ್ತಮ ಸೇವಾ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023, 2024, 2025ನೇ ಸಾಲಿನ ಒಟ್ಟು 30 ಜನರ ‘ಸರ್ವೋತ್ತಮ ಸೇವಾ’ ಪ್ರಶಸ್ತಿಗೆ ಆಯ್ಕೆ […]

Continue Reading

ಕಠಿಣ ಪರಿಶ್ರಮ, ತಾಳ್ಮೆಯಿಂದ ಉನ್ನತ ಸಾಧನೆ ಸಾಧ್ಯ: ಮುಡಬಿ ಗುಂಡೇರಾವ

ಕಲಬುರಗಿ: ಜೀವನದಲ್ಲಿ ಗುರಿ ನಿಗದಪಡಿಸಿಕೊಂಡು ಅದಕ್ಕೆ ಪೂರಕವಾಗಿ ಕಠಿಣ ಪರಿಶ್ರಮ, ತಾಳ್ಮೆ, ಸಮಯ ಬದ್ಧತೆಯಿಂದ ನಿರಂತರವಾಗಿ ಪ್ರಯತ್ನಿಸಿದರೆ, ಖಂಡಿತವಾಗಿ ಜೀವನದಲ್ಲಿ ಉನ್ನತವಾದ ಸಾಧನೆ ಮಾಡಲು ಸಾಧ್ಯ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಮತಪಟ್ಟರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಕಳೆದ ಅಗಷ್ಟ್ ಬ್ಯಾಚ್‌ನ ತರಬೇತಿ ಹೊಂದಿ ಉತ್ತೀರ್ಣ ವಿದ್ಯಾರ್ಥಿಗಳಿ ರವಿವಾರ ಏರ್ಪಡಿಸಲಾಗಿದ್ದ ‘ಪ್ರಮಾಣ ಪತ್ರಗಳ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಿಂದಲೆ ತಂದೆ-ತಾಯಿ, ಗುರು-ಹಿರಿಯರಿಗೆ ಮತ್ತು ದೇಶಕ್ಕೆ […]

Continue Reading

ಕಲೆಯ ಪೋಷಣೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಕಲಬುರಗಿ: ಭಾರತ ದೇಶ ಅನೇಕ ಧರ್ಮ, ಸಮುದಾಯ, ಭಾಷೆ, ಪ್ರದೇಶಗಳು, ಅಪರೂಪದ ವಾಸ್ತುಶಿಲ್ಪಗಳು, ಕಲಾಕೃತಿಗಳು, ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು ದೊಡ್ಡ ಮ್ಯೂಸಿಯಂ ಆಗಿದೆ. ವಿಶ್ವದ ಯಾವುದೇ ಕಲಾವಿದನಿಗೆ ನಮ್ಮ ದೇಶವೇ ಆಧಾರವಾಗಿದ್ದು, ಇಲ್ಲಿಗೆ ಆಗಮಿಸಿ ಅಧ್ಯಯನ ಮಾಡುತ್ತಿದ್ದಾರೆ. ದೇಶದಲ್ಲಿರುವ ಅಪರೂಪದ ಕಲಾಕೃತಿಗಳು, ಐತಿಹಾಸಿಕ ಸ್ಥಳಗಳು, ಸ್ಮಾರಕಗಳನ್ನು ರಕ್ಷಿಸಿ, ಮುಂದಿನ ಜನಾಂಗಕ್ಕೆ ಮುಟ್ಟಿಸುವ ಕಾರ್ಯವಾಗಬೇಕಾಗಿದೆ ಎಂದು ಅಂತಾರಾಷ್ಟೀಯ ಖ್ಯಾತ ಚಿತ್ರ ಕಲಾವಿದ ಡಾ.ಸುಬ್ಬಯ್ಯ ಎಂ.ನೀಲಾ ಅಭಿಮತಪಟ್ಟರು. ನಗರದ ಅಗ್ನಿಶಾಮಕ ಠಾಣೆಯ ಎದುರುಗಡೆಯಿರುವ ಮಹಾಲಕ್ಷ್ಮಿ ನಗರದ ನೀಲಾ ಆರ್ಟ್ ಗ್ಯಾಲರಿ’ಯಲ್ಲಿ […]

Continue Reading

ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೊ ಹನಿ ಹಾಕಿಸಿ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಐದು ವರ್ಷಗಳೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೊ ಹನಿ ಹಾಕಿಸುವ ಮೂಲಕ ಪೋಲಿಯೊ ರೋಗ ಬರದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಜರುಗಿದ ‘ವಿಶ್ವ ಪೋಲಿಯೋ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರು ಕೂಡಾ ನಮ್ಮ ನೆರೆ-ಹೊರೆ ರಾಷ್ಟ್ರಗಳಲ್ಲಿ ಇನ್ನೂ ಕಂಡುಬರುತ್ತಿರುವುದರಿಂದ ಅದು ವೈರಸ್ ನಮ್ಮ ದೇಶಕ್ಕೆ ತಗುಲಬಾರದೆಂದು ಮುಂಜಾಗ್ರತೆಯಾಗಿ ಪೋಲಿಯೊ […]

Continue Reading