ಕಠಿಣ ಪರಿಶ್ರಮ, ತಾಳ್ಮೆಯಿಂದ ಉನ್ನತ ಸಾಧನೆ ಸಾಧ್ಯ: ಮುಡಬಿ ಗುಂಡೇರಾವ

ನಗರದ

ಕಲಬುರಗಿ: ಜೀವನದಲ್ಲಿ ಗುರಿ ನಿಗದಪಡಿಸಿಕೊಂಡು ಅದಕ್ಕೆ ಪೂರಕವಾಗಿ ಕಠಿಣ ಪರಿಶ್ರಮ, ತಾಳ್ಮೆ, ಸಮಯ ಬದ್ಧತೆಯಿಂದ ನಿರಂತರವಾಗಿ ಪ್ರಯತ್ನಿಸಿದರೆ, ಖಂಡಿತವಾಗಿ ಜೀವನದಲ್ಲಿ ಉನ್ನತವಾದ ಸಾಧನೆ ಮಾಡಲು ಸಾಧ್ಯ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಮತಪಟ್ಟರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಕಳೆದ ಅಗಷ್ಟ್ ಬ್ಯಾಚ್‌ನ ತರಬೇತಿ ಹೊಂದಿ ಉತ್ತೀರ್ಣ ವಿದ್ಯಾರ್ಥಿಗಳಿ ರವಿವಾರ ಏರ್ಪಡಿಸಲಾಗಿದ್ದ ‘ಪ್ರಮಾಣ ಪತ್ರಗಳ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಿಂದಲೆ ತಂದೆ-ತಾಯಿ, ಗುರು-ಹಿರಿಯರಿಗೆ ಮತ್ತು ದೇಶಕ್ಕೆ ಗೌರವ ನೀಡುವ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ ಶಿಕ್ಷಣ ಎಲ್ಲರಿಗೂ ಅತ್ಯವಶ್ಯಕ, ಹೀಗಾಗಿ ಕಂಪ್ಯೂಟರ ತರಬೇತಿ ಪಡೆಯುವುದು ಅಗತ್ಯ. ಸಕ್ಸಸ್ ಸಂಸ್ಥೆಯು ಕಳೆದ 14 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಇಲ್ಲಿನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಂಸ್ಥೆಯು ತರಬೇತಿಯ ಜೊತೆ ವ್ಯಕ್ತಿತ್ವ ವಿಕಸನ, ಕೌಶಲ ಅಭಿವೃದ್ಧಿ ಸೇರಿದಂತೆ ಅನೇಕ ಮೌಲ್ಯಗಳನ್ನು ನೀಡುವ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಓಂಕಾರ ವಠಾರ, ಶಿವಯೋಗೆಪ್ಪಾ ಎಸ್.ಬಿರಾದರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ನಿಲೊಫರ್ ಶೇಖ್, ಪೂಜಾ ಹೂಗಾರ, ಮುಸ್ಕಾನ್ ಶೇಖ್, ಕಾವೇರಿ ಹೌದೆ, ಸ್ನೇಹಾ ಚೌಹಾಣ, ರುಕ್ಸಾನಾ ಪಟೇಲ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *