ಶಹಾಬಾದ: ಸರ್ದಾರ್ ವಲ್ಲಭವಾಯ್ ಪಟೇಲ್ ಅವರು ದೇಶದ ಎಲ್ಲಾ ಸಂಸ್ಥಾನಗಳನ್ನು ಒಗ್ಗೂಡಿಸಿದರು. ದೇಶದ ಐಕ್ಯತೆ, ಸಮಗ್ರತೆ, ಆತಂರಿಕ ಭದ್ರತೆಗಾಗಿ ಶ್ರಮಿಸಿದ ಮಹನೀಯರು ಎಂದು ಮುಖ್ಯಗುರು ಸವಿತಾ ಬೆಳಗುಂಪಿ ಹೇಳಿದರು.
ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭವಾಯಿ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟೇಲರ ಸಾಧನೆಗಳು ನಮಗೆಲ್ಲರಿಗೂ ಸ್ಫೂರ್ತಿದಾಯಕ. ಐಕ್ಯತೆ, ಸಮಗ್ರತೆ, ಆಂತರಿಕ ಭದ್ರತೆ ನಿಟ್ಟಿನಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಲು ಏಕತಾ ದಿನಾಚರಣೆ ಪ್ರೇರಣೆಯಾಗಿದೆ ಎಂದರು.
ಶಿಕ್ಷಕಿ ಆರತಿ ವೆಂಕಟೇಶ ಅವರು ಮಕ್ಕಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಚವ್ಹಾಣ್, ಶಿಕ್ಷಕಿಯರಾದ ಪಾರ್ವತಿ ಚಟ್ಟಿ, ಸುಜಾತ ಕುಂಬಾರ, ಮಹೇಬೂಬಬಿ, ಚೈತ್ರಾ, ಸಂಜನಾ, ಮಂಜುಳಾ ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.