ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಬಿ ಹೊಸಮನಿಗೆ ಗೌರವ ಸತ್ಕಾರ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಪ್ರಸಕ್ತ ಸಾಲಿನ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಬಿ ಹೊಸಮನಿ ಅವರಿಗೆ ನಗರದ ಗುಬ್ಬಿ ಕಾಲೋನಿಯಲ್ಲಿರುವ ಹೊಸಮನಿ ಅವರ ಮನೆಯಲ್ಲಿ ಸತ್ಕರಿಸಲಾಯಿತು.

ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಸನ್ಮಾನಿಸಿ, ಗೌರವಿಸಲಾಯಿತು.

ಕಜಾಪ ಜಿಲಾಧ್ಯಕ್ಷ ಎಂ.ಬಿ ನಿಂಗಪ್ಪ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಪ್ರಮುಖರಾದ ಶೀಲವಂತ ಹೊಸಮನಿ,  ಸಾಯಬಣ್ಣ ಹೋಳ್ಕರ್, ಶಿವಲಿಂಗಪ್ಪ ಗೌಳಿ, ಎಚ್.ಎಸ್ ಬರಗಾಲಿ, ಶಿವಶಂಕರ ಬಿ, ಚಂದ್ರಕಾಂತ ಸೂರನ್, ಚಾಂದ ಪಟೇಲ್, ಮಂಜುನಾಥ ಉಪ್ಪಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *