ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಹೊರವಲಯದ ನಾಗಾವಿಯ ಮುಜರಾಯಿ ಇಲಾಖೆಯ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿ ತೆರೆದು ಹಣ ಎಣಿಸುವಾಗ ಮಲೇಷ್ಯಾ ದೇಶದ ಕರೆನ್ಸಿ ಪತ್ತೆಯಾಗಿದೆ.
ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಶನಿವಾರ ಹುಂಡಿ ಹಣ ಎಣಿಕೆಯಲ್ಲಿ ಮಲೇಷ್ಯಾದ 18 ನೋಟು ಮತ್ತು 2 ನಾಣ್ಯಗಳು ದೊರೆತಿವೆ. ಒಂದು ರಿಂಗಿತ್ಗೆ ಭಾರತದ ರೂ.23.26 ಪೈಸೆ ಮೌಲ್ಯವಾಗುತ್ತದೆ ಎಂದು ಹೇಳಿದ್ದಾರೆ.
ಹುಂಡಿಯಲ್ಲಿ 500 ರೂ ಮುಖಬೆಲೆಯ 556 ನೋಟು, 200 ರೂ ಮುಖಬೆಲೆಯ 455 ನೋಟು, 100 ರೂ ಮುಖಬೆಲೆಯ 4,011 ನೋಟು, 50 ರೂ ಮುಖಬೆಲೆಯ 5,012 ನೋಟು, 20 ರೂ, ಮುಖಬೆಲೆಯ 10,733 ನೋಟು, 10 ರೂ ಮುಖಬೆಲೆಯ 14,480 ನೋಟು ಹಾಗೂ 5 ರೂ ಮುಖಬೆಲೆಯ 9400 ನಾಣ್ಯ, 1 ರೂಪಾಯಿಯ 18,000 ನಾಣ್ಯಗಳು ಸೇರಿದಂತೆ ಒಟ್ಟು 14,73,160 ಹಣ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಚಿತ್ತಾಪುರದ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಶನಿವಾರ ಪತ್ತೆಯಾದ ಮಲೇಷಿಯಾದ ನಾಣ್ಯಗಳು