ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾದಕ ವ್ಯಸನದಿಂದ ದೂರವಿರಿ: ಪಿಎಸ್ಐ ರೇಣುಕಾ ಉಡಗಿ‌

ಸುದ್ದಿ ಸಂಗ್ರಹ ಶಹಾಬಾದ್ ದೇಶದ ನಿಜವಾದ ಸಂಪತ್ತೆಂದರೆ ಅದು ಮಾನವ ಸಂಪತ್ತು, ಎಲ್ಲಾ ಸಂಪನ್ಮೂಲಗಳು ಇದ್ದೂ ಉತ್ತಮ ಆರೋಗ್ಯಯುತ ಮಾನವ ಸಂಪನ್ಮೂಲ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾದಕ ವ್ಯಸನದಿಂದ ದೂರವಿರಿ ಎಂದು ವಾಡಿ ಕ್ರೈಂ ಪಿಎಸ್ಐ ರೇಣುಕಾ ಉಡಗಿ ಹೇಳಿದರು. ತಾಲೂಕಿನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ‘ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ’ದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಓದುವಂತಹ ವಯಸ್ಸಿನಲ್ಲಿ ಚಟಗಳಿಗೆ ದಾಸರಾಗಿ ಅಮೂಲ್ಯವಾದ ಬದುಕನ್ನು […]

Continue Reading

ಶಹಾಬಾದ್: ಭಂಕೂರಲ್ಲಿ ಅದ್ದೂರಿ ಕಾರಹುಣ್ಣಿಮೆ

ಸುದ್ದಿ ಸಂಗ್ರಹ ಶಹಾಬಾದ್ತಾಲೂಕಿನ ಭಂಕೂರ ಗ್ರಾಮದ ಐತಿಹಾಸಿಕ ಕಾರಹುಣ್ಣಿಮೆ ಸೋಮವಾರ ಅದ್ದೂರಿಯಾಗಿ ನೆರವೇರಿತು. ರವಿವಾರದಿಂದಲೆ ಹಬ್ಬದ ಸಿದ್ಧತೆಗಳು ಶುರುವಾಗಿದ್ದು, ಗ್ರಾಮದ ಕೆರೆಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಬಂಡಿ ಗಂಗಸ್ಥಳಕ್ಕೆ ಹೋಗಿತ್ತು. ದೇವಿಯ ಮೂರ್ತಿಯನ್ನು ಹೊತ್ತ ಬಂಡಿ ಹೂಡಲು ರೈತರು ತಮ್ಮ ಎತ್ತುಗಳನ್ನು ಅಲ್ಲಲ್ಲಿ ನಿಲ್ಲಿಸಿಕೊಂಡು ನಿಂತಿರುತ್ತಾರೆ. ಗಾಡಿ ಹೋಗುತ್ತಿದ್ದಂತೆಯೇ ಒಂದು ಜೊತೆ ಎತ್ತುಗಳನ್ನು ನೊಗದಿಂದ ಬಿಚ್ಚಿ ಮತ್ತೊಂದು ಜೊತೆ ಎತ್ತುಗಳನ್ನು ಕಟ್ಟಿದರು. ನಂತರ ಹಣಮಂತ ದೇವರ ಗುಡಿ, ಅಂಕಲಮ್ಮಾ ಗುಡಿಗೆ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಅಲ್ಲಿ ಭಕ್ತರು […]

Continue Reading

ಕಲಬುರಗಿ: ಸಂಗೋಳಗಿ ಸರ್ಕಾರಿ ಶಾಲೆಯ ಚಾವಣಿಯ ಪದರ ಕುಸಿತ

ಸುದ್ದಿ ಸಂಗ್ರಹ ಆಳಂದತಾಲೂಕಿನ ಸಂಗೋಳಗಿ (ಸಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಚಾವಣಿಯ ಪದರ ಶನಿವಾರ ಕುಸಿದು ಬಿದ್ದಿದೆ. ಸದ್ಯ ಶಾಲಾ ತರಗತಿಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿರುವುದರಿಂದ ಯಾವುದೆ ದುರ್ಘಟನೆ ಸಂಭವಿಸಿಲ್ಲ. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಈ ಸರ್ಕಾರಿ ಶಾಲೆಯ ಹಳೆಯ ಕಟ್ಟಡದಲ್ಲಿ ಮೂರು ಕೋಣೆಗಳು ಇದ್ದವು. ಅಂದಾಜು 40 ವರ್ಷದ ಹಿಂದೆ ನಿರ್ಮಿಸಲಾದ ಕಟ್ಟಡವು ಈಗ ಬಳಕೆಯಲ್ಲಿಲ್ಲ. ಆದರೆ ಹೊಸ ಶಾಲೆಯ ಮುಂಭಾಗದಲ್ಲಿನ ಕಟ್ಟಡದಲ್ಲಿ ಮಕ್ಕಳು ಆಟೋಟದಲ್ಲಿ ನಿರತರಾಗಿರುತ್ತಾರೆ. 204 […]

Continue Reading

ಕಲಬುರಗಿಯಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬಸ್ ಜೇವರ್ಗಿ ಬಳಿ ಪಲ್ಟಿ

ಸುದ್ದಿ ಸಂಗ್ರಹ ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಕೆಕೆಆರ್‌ಟಿಸಿ ಬಸ್ ಮಂಗಳವಾರ ಸಂಜೆ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಸಿಂಧನೂರಿನ ಶಿವಲಿಂಗಮ್ಮ ಸಿದ್ದಣ್ಣ, ಪದ್ಮ ಸತ್ಯನಾರಾಯಣ, ಶ್ರಾವ್ಯ ರಾಘವೇಂದ್ರ, ಭಾಗ್ಯಲಕ್ಷ್ಮಿ, ಮೀನಾಕ್ಷಿ, ಸಮರ್ಥ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಈ ಬಸ್ ಕಲಬುರಗಿ ನಗರದಿಂದ ಧರ್ಮಸ್ಥಳಕ್ಕೆ ಮಂಗಳವಾರ ಮಧ್ಯಾಹ್ನ ಹೊರಟಿತ್ತು. ತಾಲೂಕಿನ ಕೆಲ್ಲೂರ ಗ್ರಾಮದ ಬಳಿ ಚಾಲಕ ನೀರು ಕುಡಿಯುತ್ತಾ ಬಸ್ ಚಲಾಯಿಸುವಾಗ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು […]

Continue Reading

ರಸಗೊಬ್ಬರಕ್ಕಾಗಿ ರೈತರು ಆತಂಕ ಪಡಬೇಡಿ: ದೇವಿಂದ್ರ ಅರಣಕಲ್

ಸುದ್ದಿ ಸಂಗ್ರಹ ಚಿತ್ತಾಪುರಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಅಗತ್ಯ ರಸಗೊಬ್ಬರ ಪೂರೈಕೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ರೈತರಿಗೆ ರಸಗೊಬ್ಬರ ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಹೇಳಿದ್ದಾರೆ. ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಂಗಾರು ಬಿತ್ತನೆಗೆ ರೈತರು ತರಾತುರಿ ಮಾಡಬಾರದು. ಮುಂಗಾರು ಮಳೆಗಾಲ ಶುರುವಾಗಲು ಇನ್ನೂ ಒಂದು ವಾರ […]

Continue Reading

ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ: ಚಾಂದಪಾಶಾ ಮೋಮೀನ್ ಮನವಿ‌

ಸುದ್ದಿ ಸಂಗ್ರಹ ಚಿಂಚೊಳಿವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಡಾ.ಶರಣಪ್ರಕಾಶ ಪಾಟೀಲ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸುಲೇಪೇಟ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಚಾಂದಪಾಶಾ ಮೋಮೀನ್ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ಅತ್ಯಂತ ಪ್ರಭಾವಿ ನಾಯಕರಾಗಿರುವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಉನ್ನತ ಜವಾಬ್ದಾರಿ ನೀಡುವುದು ಪಕ್ಷದ ಹಿತದೃಷ್ಟಿಯಿಂದ   ಸಮಯೋಚಿತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ […]

Continue Reading

ಕರದಾಳ: ಸಿಡಿಲ ಹೊಡೆತಕ್ಕೆ ಸುಟ್ಟು ಹೋದ ಕಣಕಿ ಬಣಮಿ

ಸುದ್ದಿ ಸಂಗ್ರಹ ಚಿತ್ತಾಪುರ ಮೇ.27ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗುಡುಗು ಸಹಿತ ಭಾರಿ ಗಾಳಿ- ಮಳೆಯ ಅಬ್ಬರದ ನಡುವೆ ಕಣಕಿ ಬಣಮಿಗೆ ಸಿಡಿಲು ಬಡಿದು, ಕಣಕಿ ಬಣಮಿ ಸಂಪುರ್ಣವಾಗಿ ಹೊತ್ತಿ ಉರಿದ ಘಟನೆ ಕರದಾಳ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕರದಾಳ ಗ್ರಾಮದ ಸಿದ್ದಣ್ಣ ಶರಣಪ್ಪ ಕೊಟ್ರಿಕಿ ಎಂಬವರ ಜಮೀನಿನಲ್ಲಿ ಶೇಖರಿಸಿದ್ದ ಕಣಕಿ ಬಣಮಿಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದೆ. ಮಳೆಯ ನಡುವೆಯೂ ಕಣಕಿ ಬಣಮಿ ಬೆಂಕಿಗಾಹುತಿಯಾಗಿದ್ದು, ಗಾಳಿಯ ರಭಸಕ್ಕೆ ಕಣಕಿ ಬಣಮಿಯಿಂದ ಹಾರುತ್ತಿರುವ ಬೆಂಕಿಯ […]

Continue Reading

ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ ಕುಳಿತ ಗ್ರಾಮಸ್ಥರು

ಸುದ್ದಿ ಸಂಗ್ರಹ ಶಹಾಬಾದ್ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮಕ್ಕೆ ಹೋಗುವ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಬೆಳಗ್ಗೆಯಿಂದ ರಸ್ತೆಯ ಮಧ್ಯೆ ಟೆಂಟ್‌ ಹಾಕಿಕೊಂಡು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಶಹಾಬಾದ್‌ನಿಂದ ಜೇವರ್ಗಿಗೆ ಹೋಗುವ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ದಿನನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿವೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷಿಸಿದ್ದಾರೆ. ರಸ್ತೆ ನಿರ್ಮಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳೇ ನೇರ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆಯಿಂದ […]

Continue Reading

ಟ್ಯಾಂಕರ್– ಕ್ರೂಸರ್ ಡಿಕ್ಕಿ, ಐವರು ಸ್ಥಳದಲ್ಲೇ ಸಾವು

ಸುದ್ದಿ ಸಂಗ್ರಹ ಚಿತ್ತಾಪುರಟ್ಯಾಂಕರ್- ಕ್ರೂಸರ್ ಮಧ್ಯೆ ಡಿಕ್ಕಿ ಸಂಭವಿಸಿದ ಭೀಕರ‌ ಅಪಘಾತದಲ್ಲಿ ಐವರು ಸ್ಥಳದಲ್ಲೇ‌ ಮೃತಪಟ್ಟಿದ್ದಾರೆ. ತಾಲೂಕಿನ ಲಾಡ್ಲಾಪುರ- ಹಲಕರ್ಟಿ ಮಧ್ಯೆ ಶನಿವಾರ ಬೆಳಗಿನ ಜಾವ ಈ‌ ಅಪಘಾತ ಸಂಭವಿದೆ. ವಾಡಿ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-150ರ ಮೇಲೆ ಈ‌ ಅಪಘಾತ ಜರುಗಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಯಾದಗಿರಿಯಿಂದ ಇಂಗಳಗಿಗೆ ತೆರಳುತ್ತಿದ್ದ ಕ್ರೂಸರ್ ಮತ್ತು ವಾಡಿಯಿಂದ ಯಾದಗಿರಿಗೆ ತೆರಳುತ್ತಿದ್ದ ಟ್ಯಾಂಕರ್ ಮಧ್ಯೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಇಂಗಳಗಿ ಗ್ರಾಮದ ಐದು ಜನ ಮೃತಪಟ್ಟಿದ್ದು ಎಲ್ಲರೂ ಪರಸ್ಪರ ಸಂಬಂಧಿಕರಾಗಿದ್ದಾರೆ. […]

Continue Reading

ಕಲಬುರಗಿಯ ನೂತನ ಮೃಗಾಲಯ ಲೋಕಾರ್ಪಣೆ: ಬನ್ನೇರುಘಟ್ಟದಿಂದ ಬಂದ ಸಿಂಹಗಳೆ ಆಕರ್ಷಣೆ

ಸುದ್ದಿ ಸಂಗ್ರಹ ಕಾಳಗಿತಾಲೂಕಿನ ಮಾಡಬೂಳ ಗ್ರಾಮದ ವ್ಯಾಪ್ತಿಯಲ್ಲಿ ಅಂದಾಜಯ 35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಲಬುರಗಿ ‌ಮೃಗಾಲಯವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಕಲಬುರಗಿ ನಗರದಲ್ಲಿ 1988ರಲ್ಲಿ ಸ್ಥಾಪಿಸಿದ್ದ‌ ಕಿರು ಮೃಗಾಲಯವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 38(1) ಅಡಿಯಲ್ಲಿ ಮೃಗಾಲಯ ಸ್ಥಾಪನೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ರಾಜ್ಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿಯೊಂದಿಗೆ ದೊಡ್ಡ ‌ಪ್ರಮಾಣದಲ್ಲಿ ಉನ್ನತೀಕರಿಸಿ ಮತ್ತು ವಿಸ್ತರಿಸಲಾಗಿದೆ. ಹೊಸ ಮೃಗಾಲಯದಲ್ಲಿ […]

Continue Reading