ಸೈಬರ್‌ ಅಪರಾಧದ ಬಗ್ಗೆ ಜಾಗೃತಿ ವಹಿಸಿ: ಡಿವೈಎಸ್‌ಪಿ ಶಂಕರಗೌಡ ಪಾಟೀಲ್

ತಾಲೂಕು

ಸುದ್ದಿ ಸಂಗ್ರಹ ಚಿತ್ತಾಪುರ
ಸೈಬರ್ ಅಪರಾಧ ಮತ್ತು ವಂಚನೆಗಳ ಬಗ್ಗೆ ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದು ಡಿವೈಎಸ್‌ಪಿ ಶಂಕರಗೌಡ ಪಾಟೀಲ್‌ ಹೇಳಿದರು.

ತಾಲೂಕಿನ ಮಾಡಬೂಳ ಕ್ರಾಸ್‌’ನಲ್ಲಿ ಮಾಡಬೂಳ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೈಬರ್ ವಂಚನೆ ತಡೆಗಟ್ಟಲು ಕ್ಲಿಷ್ಟಕರವಾದ ಪಾಸ್‌ವರ್ಡ್ ಬಳಸಬೇಕು. ಅಪರಿಚಿತ ಲಿಂಕ್’ಗಳನ್ನು ಕ್ಲಿಕ್ ಮಾಡಬಾರದು. ಆ್ಯಂಟಿ ವೈರಸ್ ಸಾಫ್ಟ್‌ವೇರ್ ಅಳವಡಿಸಬೇಕು. ಆನ್‌’ಲೈನ್‌ನಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಜಾಗರೂಕತೆ ವಹಿಸಬೇಕು ಎಂದರು.

ವಾಹನಗಳ ಮಾಲಿಕರು ಮತ್ತು ಚಾಲಕರು ಕಡ್ಡಾಯವಾಗಿ ಡ್ರೈವಿಂಗ್ ಲೈಸನ್ಸ್, ಇನ್ಸುರೆನ್ಸ್ ಹೊಂದಿರಬೇಕು. ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಿಎಸ್‌ಐಗಳಾದ ಗೌತಮ್, ಸಿದ್ಧಲಿಂಗ, ಎಎಸ್‌ಐಗಳಾದ ಕಾಳಪ್ಪ, ಗುಂಡಪ್ಪ, ಹೇಡ್ ಕಾನ್’ಸ್ಟೆಬಲ್ ವೀರಶೆಟ್ಟಿ, ಗುರುಶಾಂತ, ಸಿಬ್ಬಂದಿಗಳಾದ ಚಂದ್ರಶೇಖರ, ಗಪೂರ್, ಪ್ರಶಾಂತ, ಮಾಳಗೊಂಡ, ಕೊಟ್ರೇಶ, ಸರೋಜಿನಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *