ನಗರದ

ಕಲಬುರಗಿ: ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ……ಸುದ್ದಿ ಸಂಗ್ರಹ ಕಲಬುರಗಿ
ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ನೌಕರರು ನಾಮನಿರ್ದೇಶನ ಅರ್ಜಿ ಆನ್‌ಲೈನ್ ಮೂಲಕ ಸಲ್ಲಿಸಲು ಸರಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ…….2026ನೇ ಸಾಲಿನಲ್ಲಿ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ರಾಜ್ಯ ಸರ್ಕಾರಿ ನೌಕರರು ತಮ್ಮ ನಾಮನಿರ್ದೇಶನ ಅರ್ಜಿ ಸಲ್ಲಿಸಬಯಸುವರು https://dparar.karnataka.gov.in ಅಥವಾ
https://sarvothamaawards.karnataka.gov.in ಮೂಲಕ ಫೆ‌.25ರ ರೊಳಗಾಗಿ ಅರ್ಜಿ ಸಲ್ಲಿಸಬೇಕು. ರಾಜ್ಯ/ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನಾಮನಿರ್ದೇಶನವನ್ನು ಕನ್ನಡ ಅಥವಾ ಇಂಗ್ಲೀಷ್’ನಲ್ಲಿ ಸಲ್ಲಿಸುವದು. ಕನ್ನಡದಲ್ಲಿ ಸಲ್ಲಿಸಲು ನುಡಿ 6.0 ಆವೃತ್ತಿ ಮಾತ್ರ ಬಳಸುವಂತೆ ಸೂಚಿಸಿದೆ. ಮಾಹಿತಿ/ ವಿವರವನ್ನು ಜಾಲತಾಣದಲ್ಲಿ ದಾಖಲಿಸಲು ಯಾವುದೆ ರೀತಿಯ ತಾಂತ್ರಿಕ pmtech.webportal@karnataka.gov.in ನಲ್ಲಿ ಸ್ಪಷ್ಟತೆ ಪಡೆಯಬೇಕು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *