ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮದಲ್ಲಿ ಸಂವಿಧಾನದ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಶಾಸಕ ಬಸವರಾಜ ಮತ್ತಿಮೂಡ ಅನಾವರಣ ಗೊಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ನೀಲಪ್ರಭಾ ಬಬಲಾದ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿ ಸ್ಥಾಪನೆ ಮಾಡಿದರೆ ಸಾಲದು ಅವರ ವಿಚಾರಗಳು ಅಳವಡಿಸಿಕೊಂಡು ಜೀವನ ಸಾಗಿಸಿದರೆ ಮಾತ್ರ ಅಂಬೇಡ್ಕರ ವಾದಿಯಾಗಲು ಸಾಧ್ಯ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶದ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯ ಅವಕಾಶ ಕೊಟ್ಟಿದ್ದಾರೆ, ಶಿಕ್ಷಣಕ್ಕೆ ಮಹತ್ವ ಕೊಟ್ಟಾಗ ಮಾತ್ರ ಸಹೋದರತೆ ಮತ್ತು ಸೌಹಾರ್ದತೆಯ ನಿರ್ಮಾಣ ಮಾಡಲು ಸಾಧ್ಯ ಎಂದರು.
ಜಿ.ಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಬಸವರಾಜ್ ಬೆಣ್ಣೂರ, ವಕೀಲರಾದ ವಿದ್ಯಾಧರ ಹುಗ್ಗಿ, ದಸಂಸ ರಾಜ್ಯ ಸಂಚಾಲಕ ಮರಿಯಪ್ಪ ಹಳ್ಳಿ, ಅಣದೂರಿನ ಪೂಜ್ಯ ವರಜ್ಯೋತಿ ಬಂತೆಜೀ, ತೊನಸನಳ್ಳಿ (ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನದ ಪೂಜ್ಯ ಡಾ.ಮಲ್ಲಣ್ಣಪ್ಪ ಮಹಾಸ್ವಾಮಿ, ಮುಖಂಡ ದಿನೇಶ ದೊಡ್ಡಮನಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಮುತ್ತಮ್ಮ ಮರತೂರು ವಹಿಸಿದ್ದರು.
ವೇದಿಕೆ ಮೇಲೆ ಪೌರಾಯುಕ್ತ ಡಾ. ಕೆ.ಗುರುಲಿಂಗಪ್ಪ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ, ಪಿ.ಐ ನಟರಾಜ್ ಲಾಡೆ, ಉಪಾಧ್ಯಕ್ಷೆ ಅಪ್ರೋಜ ಬೇಗಂ, ಕಾಡಾ ನಿಗಮದ ಅಧ್ಯಕ್ಷ ಡಾ.ಎಂ.ಎ ರಶೀದ, ಪ್ರಮುಖರಾದ ಚೇತನ್ ಗುರಿಕಾರ, ಮಲ್ಲಪ್ಪ ಹೊಸಮನಿ, ಅಜೀತಕುಮಾರ ಪಾಟೀಲ, ಅಪ್ಪುಗೌಡ ಪಾಟೀಲ, ಶಿವಲಿಂಗಪ್ಪ ಗೋಳೆದ, ರಾಜಕುಮಾರ ಹುಗ್ಗಿ, ರಾಜು ಮೇಸ್ತ್ರಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಅಂಬೇಡ್ಕರ್ ಅಭಿಮಾನಿಗಳು ಇದ್ದರು.
ಕಾರ್ಯಕ್ರಮವನ್ನು ಪಿಡಿಒ ನಿಂಗಪ್ಪ ಕೆಂಭಾವಿ ಸ್ವಾಗತಿಸಿದರು, ಮಲ್ಲಣ್ಣ ಮಸ್ಕಿ ನಿರೂಪಿಸಿದರು, ಶ್ರೀಕಾಂತ್ ಹುಡುಗಿ ವಂದಿಸಿದರು.