ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಾಮಾಜಿಕ ನ್ಯಾಯ ಅಗತ್ಯ

ಕಲಬುರಗಿ: ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನವಾದ ಅವಕಾಶ ಒದಗಿಸಿಕೊಡುವ ಪರಿಕಲ್ಪನೆಯೇ ಸಾಮಾಜಿಕ ನ್ಯಾಯವಾಗಿದ್ದು, ಇದರಿಂದ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಗಂಗಾ ನಗರದಲ್ಲಿರುವ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು.‌ ಜಾತಿ, ಧರ್ಮ, ಭಾಷೆ, ಪ್ರಾಂತ್ಯ, […]

Continue Reading

ಹಡಪದ ಅಪ್ಪಣ್ಣ ಸಮಾಜಕ್ಕೆ ನ್ಯಾಯ ಸಿಗಲಿ: ಡಾ. ಎಂ.ಬಿ ಹಡಪದ ‌ ‌

ಕಲಬುರಗಿ: ಈ ವರ್ಷದ ಬಜೆಟ್’ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿ 100 ಕೋಟಿ ರೂ ಮೀಸಲಿಡುವಂತೆ ಹಡಪದ ಅಪ್ಪಣ್ಣ ಸಮಾಜದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ‌ ಹಡಪದ ಸುಗೂರ ಎನ್ ಒತ್ತಾಯಿಸಿದರು. ಒತ್ತಾಯ. ಬಸವರಾಜ ಭೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿ‌ ಆದೇಶ ಹೊರಡಿಸಿದ್ದರು. ಆದರೆ ಆ ನಿಗಮ ಪೂರ್ಣ ಪ್ರಮಾಣದಲ್ಲಿ ಇದುವರೆಗೆ ಜಾರಿಗೆ […]

Continue Reading

ಹರ್ಡೇಕರ ಮಂಜಪ್ಪನವರ ಸಾಮಾಜಿಕ ಕೊಡುಗೆ ಅನನ್ಯ

ಕಲಬುರಗಿ: ಮಹಾತ್ಮ ಗಾಂಧಿಜಿಯವರ ಸತ್ಯ, ಶಾಂತಿ, ಅಹಿಂಸೆ, ನ್ಯಾಯ, ಸಮಾನತೆ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವುಗಳನ್ನು ಪಸರಿಸುವ ಕಾರ್ಯ ಮಾಡಿರುವ ಹರ್ಡೇಕರ ಮಂಜಪ್ಪನವರು ಕರ್ನಾಟಕದ ಗಾಂಧಿಜಿಯಾಗಿದ್ದಾರೆ. ಅವರ ಸಾಮಾಜಿಕ ಕೊಡುಗೆ ಅನನ್ಯವಾಗಿದೆ ಎಂದು ಪೂಜ್ಯ ಶಿವಾನಂದ ಶ್ರೀಗಳು ಅಭಿಮತಪಟ್ಟರು. ನಗರದ ಮಕ್ತಂಪುರ ಗುರುಬಸವ ಮಠದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ‘ಶರಣ ಹರ್ಡೇಕರ ಮಂಜಪ್ಪನವರ 139ನೇ ಜನ್ಮದಿನೋತ್ಸವ’ ನಿಮಿತ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಮಂಜಪ್ಪನವರು ಗಾಂಧಿಯವರ ಅನುಯಾಯಿಯಾಗಿ […]

Continue Reading

ಸಮನ್ವಯ ತತ್ವದ ಮೇರು ಸಾಧಕ ರಾಮಕೃಷ್ಣ ಪರಮಹಂಸ

ಕಲಬುರಗಿ: ಧರ್ಮಗಳು ಬೇರೆ-ಬೇರೆಯಾದರು ಕೂಡಾ, ಎಲ್ಲಾ ಧರ್ಮಗಳ ಮೂಲತತ್ವ ಒಂದೆಯಾಗಿದೆ. ‘ದೇವನೊಬ್ಬ, ನಾಮ ಹಲವು’ ಆಗಿದ್ದು, ಎಲ್ಲಾ ಧರ್ಮಗಳ ತಿರುಳು ಒಂದೆಯಾಗಿದೆ. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಸೌಹಾರ್ದವಾಗಿ ಬದುಕಬೇಕೆಂಬ ಸಮನ್ವಯ ತತ್ವ ಪ್ರತಿಪಾದಿಸಿದ ರಾಮಕೃಷ್ಣ ಪರಮಹಂಸ್‌ರ ಸಂದೇಶ ಪಾಲನೆ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಜರುಗಿದ ‘ರಾಮಕೃಷ್ಣ ಪರಮಹಂಸ್‌ರ 189ನೇ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ […]

Continue Reading

ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳುವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು

ಶಿವಮೊಗ್ಗ: ಕನ್ನಡದ ಬಗ್ಗೆ ನನಗೆ ಅಷ್ಟು ತಿಳುವಳಿಕೆ ಇಲ್ಲ. ಆದರೆ ಕನ್ನಡದ ಉಳಿಯುವಿಕೆಗೆ ನನ್ನ ಜವಾಬ್ದಾರಿ ಇದೆ. ಕನ್ನಡದ ಬಗ್ಗೆ ತಿಳಿದುಕೊಳ್ಳದೆ ಇದ್ದರೂ ಅದಕ್ಕಿಂತ ಮಿಗಿಲಾಗಿ ನನಗೆ ಕನ್ನಡದ ಬಗ್ಗೆ ಅಭಿಮಾನ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್‌ನ ಗ್ರಂಥಾಲಯಕ್ಕೆ ನನ್ನ ತಂದೆ ಎಸ್‌ ಬಂಗಾರಪ್ಪ ಅವರ ಹೆಸರಿನಲ್ಲಿ 5 ಲಕ್ಷ ರೂ. ಅನುದಾನ ನೀಡಿದ್ದೆನೆ. ನಮ್ಮ ತಂದೆ ಬಂಗಾರಪ್ಪ ಅವರು ಕಷ್ಟಪಟ್ಟು […]

Continue Reading

ಜಾನಪದದಿಂದ ದೇಶದ ಸಂಸ್ಕೃತಿ, ಪರಂಪರೆ ಶ್ರೀಮಂತ

ಕಲಬುರಗಿ:  ಜಾನಪದ ದೇಶದ ಮೂಲ ಸಂಸ್ಕೃತಿಯಾಗಿದೆ. ಇದಕ್ಕೆ ಗ್ರಾಮೀಣ ಜನರ ಕೊಡುಗೆ ಅಪಾರವಾಗಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ. ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ.ಬಿ ನಿಂಗಪ್ಪ ಹೇಳಿದರು. ತಾಲೂಕಿನ ಗೌಡನಹಳ್ಳಿಯ ಭೋಜಲಿಂಗೇಶ್ವರ ಮಠದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ಸೇಡಂ ತಾಲೂಕ ಘಟಕ  ಹಾಗೂ ಭೋಜಲಿಂಗೇಶ್ವರ ಮಠದ ಸಂಯುಕ್ತಾಶ್ರಯದಲ್ಲಿ ರವಿವಾರ ಏರ್ಪಡಿಸಲಾಗಿದ್ದ ‘ಜಾನಪದ ಜಾತ್ರೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಜನಪದರ ಹಾಡು-ಪಾಡು’ ಎಂಬ ವಿಷಯದ […]

Continue Reading

ಪ್ರಶಸ್ತಿಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಪ್ರೊ.ಮಲ್ಲೇಪುರಂ ವೆಂಕಟೇಶ

ಕಲಬುರಗಿ: ರಾಜ್ಯ ಸರ್ಕಾರವು ವಿವಿಧ ಅಕಾಡೆಮಿಗಳ ಮೂಲಕ ನೀಡುತ್ತಿರುವ ‍ಪ್ರಶಸ್ತಿಗಳಲ್ಲಿ ಕಲ್ಯಾಣ ಕರ್ನಾಟಕದವರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಬೇಸರ ವ್ಯಕ್ತಪಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಅಥವಾ ಉತ್ತರ ಕರ್ನಾಟಕ ಭಾಗದವರಿಗೆ ಪ್ರಶಸ್ತಿಗಳಲ್ಲಿ ಸಿಕ್ಕ ಆದ್ಯತೆ ಇಲ್ಲಿಯವರಿಗೆ ಸಿಗುತ್ತಿಲ್ಲ. ಈ ಭಾಗದ ಪ್ರತಿಭೆಗಳನ್ನು ಗುರುತಿಸುವ […]

Continue Reading

ವಿದ್ಯಾರ್ಥಿ ದೆಸೆಯಿಂದಲೆ ಮೌಲ್ಯಗಳು, ಪ್ರಯತ್ನಶೀಲತೆ ಮೈಗೂಡಲಿ

ಕಲಬುರಗಿ: ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಗುರಿಯನ್ನು ನಿರ್ಧರಿಸಿ, ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಸಿಬೇಕು. ಕೀಳರಿಮೆ ತಾಳದೆ, ಧನಾತ್ಮಕ ಚಿಂತನೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್ ಹೇಳಿದರು. ಜೇವರ್ಗಿ ಪಟ್ಟಣದ ಶಹಾಪುರ ರಸ್ತೆಯಲ್ಲಿರುವ ಜೈನಾಪುರ ಫಂಕ್ಸನ್ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ನರೇಂದ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡಬೇಕು. ವಿದೇಶಿ ಸಂಸ್ಕೃತಿ ಅನುಕರಣೆ […]

Continue Reading

ಕಾರಿನಲ್ಲಿ ಸಾಗಿಸುತ್ತಿದ್ದ 40 ಲಕ್ಷ ಮೌಲ್ಯದ ಗಾಂಜಾ ವಶ: ಇಬ್ಬರ ಬಂಧನ

ಕಲಬುರಗಿ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 40 ಲಕ್ಷ ರೂ ಮೊತ್ತದ ಗಾಂಜಾ ವಶಪಡಿಸಿಕೊಂಡು, ಸಾಗಾಟಕ್ಕೆ ಬಳಸಿದ 5 ಲಕ್ಷ ರೂ ಮೊತ್ತದ ಕಾರು ಹಾಗೂ 50 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ , ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲಿ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ ತಾಂಡಾದ ಹತ್ತಿರ ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿರುವ […]

Continue Reading

ಕಳ್ಳರ ಹಾವಳಿಗೆ ಒನಕೆ ಒಬವ್ವನ ರೂಪ ತಾಳಿದ ಮಹಿಳೆಯರು ಗಸ್ತು ಸಂಚಾರ

ಬಾಗಲಕೋಟೆ: ಮನೆಗಳ್ಳರ ಹಾವಳಿ‌ಗೆ ಬೇಸತ್ತ ಮಹಿಳೆಯರು ಒನಕೆ ಓಬವ್ವನ ರೂಪ ತಾಳಿ ಗಮನ ಸೆಳೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ‌ ಮುಧೋಳ ನಗರದಲ್ಲಿ ನಡೆದಿದೆ. ನಗರದ ಜಯನಗರ ನಿವಾಸಿಗಳೇ ಓಬವ್ವನ ರೂಪ ತಾಳಿದ ಮಹಿಳೆಯರು. ಕಳ್ಳರ‌ ಕಾಟದಿಂದ ಬೇಸತ್ತ ಮಹಿಳೆಯರು, ರಾತ್ರಿಪೂರ್ತಿ ಬಡಿಗೆ ಹಿಡಿದು ಬಡಾವಣೆಯಲ್ಲಿ ಗಸ್ತು ತಿರುಗಿ ಗಮನ ಸೆಳೆದಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಜಯನಗರದಲ್ಲಿ ಎರಡು ಮನೆಗಳ ಕಳ್ಳತನವಾಗಿದ್ದರೆ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಇದರಿಂದ ಅಲರ್ಟ್ ಆದ ಮಹಿಳೆಯರು ಪೊಲೀಸರನ್ನು ನಂಬದೆ, […]

Continue Reading