ಹಡಪದ ಅಪ್ಪಣ್ಣ ಸಮಾಜಕ್ಕೆ ನ್ಯಾಯ ಸಿಗಲಿ: ಡಾ. ಎಂ.ಬಿ ಹಡಪದ ‌ ‌

ಜಿಲ್ಲೆ

ಕಲಬುರಗಿ: ಈ ವರ್ಷದ ಬಜೆಟ್’ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿ 100 ಕೋಟಿ ರೂ ಮೀಸಲಿಡುವಂತೆ ಹಡಪದ ಅಪ್ಪಣ್ಣ ಸಮಾಜದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ‌ ಹಡಪದ ಸುಗೂರ ಎನ್ ಒತ್ತಾಯಿಸಿದರು. ಒತ್ತಾಯ.

ಬಸವರಾಜ ಭೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿ‌ ಆದೇಶ ಹೊರಡಿಸಿದ್ದರು. ಆದರೆ ಆ ನಿಗಮ ಪೂರ್ಣ ಪ್ರಮಾಣದಲ್ಲಿ ಇದುವರೆಗೆ ಜಾರಿಗೆ ಬಂದಿಲ್ಲ, ಈಗಲಾದರೂ ಜಾರಿಗೆ ತರಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ ಅವರು ಹಡಪದ ಅಪ್ಪಣ್ಣ ಸಮಾಜದ ಬಹು ದಿನಗಳ ಬೇಡಿಕೆ ಈಡೇರಿಸಬೇಕು ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಬಸವಣ್ಣನವರ ಗವಿ(ಅರಿವಿನ) ಮನೆಯ ಪಕ್ಕದಲ್ಲಿ ಹಡಪದ ಅಪ್ಪಣ್ಣ ನವರ ಗವಿ( ಅರಿವಿನ ಮನೆಯನ್ನು) ಬಿಕೆಡಿಬಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸಬೇಕು.

ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿರುವ ಶರಣ ಹಡಪದ ಅಪ್ಪಣ್ಣನವರ ಜನ್ಮಸ್ಥಳ ‌ಹಾಗೂ ದೇಗಿನಾಳ ಗ್ರಾಮದಲ್ಲಿ ಇರುವ ಹಡಪದ ಲಿಂಗಮ್ಮನವರ ಜನ್ಮಸ್ಥಳವನ್ನು ಕೂಡಲಸಂಗಮ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ಶರಣ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡದ ಅಭಿವೃದ್ಧಿಗೆ 10 ಕೋಟಿ ರೂ ನೀಡಬೇಕು. ಹಡಪದ ಅಪ್ಪಣ್ಣ ಸಮಾಜಕ್ಕೆ ಪರ್ಯಾಯ ಪದವಾದ ನಾಯಿಂದ ಉಪ ಜಾತಿಯನ್ನು ಮುಂದುವರೆಸಿಕೊಂಡು ಹೋಗುಬೇಕು. ನಾಯಿಂದ ಉಪ ಜಾತಿಯಲ್ಲಿ ಬರುವ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜ ಗ್ರಾಮೀಣ ಭಾಗದಲ್ಲಿ ಕ್ಷೌರಿಕ ವೃತ್ತಿ ಮಾಡುವವರೆ ಕ್ಷೌರ ಕುಟೀರ ನೀಡಬೇಕು. ಕ್ಷೌರಿಕ ಕುಟುಂಬಕ್ಕೆ ಆರೋಗ್ಯ ವಿಮೆ ಮತ್ತು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸ್ಮಾರ್ಟ್ ಕಾರ್ಡ್ ನೀಡಬೇಕು ಎಂದರು.

Leave a Reply

Your email address will not be published. Required fields are marked *