ಅಳಿವಿನಂಚಿನ ವನ್ಯಜೀವಿಗಳ ಉಳಿಸುವ ಕಾರ್ಯವಾಗಲಿ: ಎಚ್.ಬಿ ಪಾಟೀಲ

ಕಲಬುರಗಿ: ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯವನ್ನು ನಾಶಮಾಡಿ ಅಲ್ಲಿನ ಅನೇಕ ವನ್ಯಜೀವಿಗಳನ್ನು ಬೇಟೆಯಾಡಿ ನಾಶಮಾಡುತ್ತಿದ್ದಾನೆ. ಇದರಿಂದ ಕೆಲವು ಸಂತತಿ ನಾಶಹೊಂದಿದ್ದು, ಮತ್ತೆ ಕೆಲವು ಅಳಿವುನಂಚಿನಲ್ಲಿವೆ. ಅರಣ್ಯ ಸಂಪತ್ತು, ಪ್ರಾಣಿ ಸಂಕುಲದ ರಕ್ಷಣೆ ಅಗತ್ಯವಾಗಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ವನ್ಯಜೀವಿ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಪರಿಸರದ ಜೈವಿಕ ವ್ಯವಸ್ಥೆಯ ಸರಪಣಿಯಲ್ಲಿ ಒಂದು ಯಾವುದೆ ಜೀವಿಯ […]

Continue Reading

ದೇಶದ ನಾಗರಿಕರ ರಕ್ಷಣೆ ಅಗತ್ಯ

ಕಲಬುರಗಿ: ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡಬೇಕು. ಭೂಕಂಪ, ನೆರೆ ಹಾವಳಿ, ಸಾಂಕ್ರಾಮಿಕ ಕಾಯಿಲೆಗಳ ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಚನ್ನಬಸಪ್ಪ ಸಿ ಗಾರಂಪಳ್ಳಿ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ನಾಗರಿಕ ರಕ್ಷಣೆ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೇಶವಾಸಿಗಳು ಕಷ್ಟದ ಸ್ಥಿತಿಯಲ್ಲಿ ಸರ್ಕಾರದ ನೆರವಿನ ಜೊತೆ ಸಹಾಯ ಹಸ್ತ ಚಾಚಬೇಕು ಎಂದರು. […]

Continue Reading

ಎಲ್ಲರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯಲಿ

ಕಲಬುರಗಿ: ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆವಣಿಗೆಯಾಗಿದೆ. ಆದರೆ ಇಂದಿಗೂ ಕೂಡಾ ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ ನಿರ್ಮೂಲನೆಯಾಗಿಲ್ಲ. ಆದ್ದರಿಂದ ಸತ್ಯ, ವೈಚಾರಿಕತೆ ಹೊಂದಿರುವ ವಿಜ್ಞಾನದ ಅಂಶಗಳು, ವಿಷಯಗಳು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಮತ್ತು ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದು ಉಪನ್ಯಾಸಕ, ವಿಚಾರವಾದಿ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯಲ್ಲಿ ಸರ್ ಸಿ.ವಿ ರಾಮನ್ ಅವರ ಭಾವಚಿತ್ರಕ್ಕೆ […]

Continue Reading

ಮಹಾ ಶಿವರಾತ್ರಿ ಆತ್ಮಾವಲೋಕನದ ಸಂದೇಶ ವಾಹಕ

ಕಲಬುರಗಿ: ಪರಮಾತ್ಮನ ಬೆಳಕು ಕಾಣುವುದೇ ನಮ್ಮ ಭಕ್ತಿಯ ಉದ್ದೇಶವಾಗಿರಬೇಕು. ಇಂತಹ ಅಂಶಗಳು ನಮ್ಮಲ್ಲಿ ಮೂಡಿದಾಗ ಆಗ ಭಕ್ತಿಯು ಸಾರ್ಥಕತೆಯನ್ನು ಪಡೆಯುತ್ತದೆಯೆಂಬ ಮೇರು ಸಂದೇಶವು ಶಿವರಾತ್ರಿ ಹೊಂದಿದೆ. ಇದು ಆತ್ಮಾವಲೋಕನದ ಸಂದೇಶದ ವಾಹಕದಂತೆ ಕಾರ್ಯನಿರ್ವಹಿಸುತ್ತದೆ ಎಂದು ಪೂಜ್ಯ ನಾಗೇಶ ಮಹಾರಾಜ ಗುಜರಾತಿ ಹೇಳಿದರು. ನಗರದ ಆಳಂದ ನಾಕಾ ಸಮೀಪದ ಐತಿಹಾಸಿಕ ಬಹು ಪುರಾತನ ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ‘ದೇವಸ್ಥಾನ ಸಮಿತಿ’, ‘ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ಸಂಯುಕ್ತ ಆಶ್ರಯದಲ್ಲಿ […]

Continue Reading

ದೇಶಿ ಆಹಾರದಲ್ಲಿದೆ ಆರೋಗ್ಯದ ಗುಟ್ಟು

ಕಲಬುರಗಿ: ವಿದೇಶ ಫಾಸ್ಟ್, ಜಂಕ್ ಪುಢ್ ಆಹಾರ ಸೇವನೆ ಮಾಡದೆ, ದೇಶಿಯ ಸಾವಯುವ ಆಹಾರ, ಸಿರಿಧಾನ್ಯಗಳ ಆಹಾರ ಉಪಯೋಗಿಸಬೇಕು. ದೇಶಿಯ ಆಹಾರದಲ್ಲಿದೆ ನಮ್ಮ ಆರೋಗ್ಯದ ಗುಟ್ಟು ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ ನಿಂಗಪ್ಪ ಹೇಳಿದರು. ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ಅವರ ಹೊಲದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಕನ್ನಡ ಜಾನಪದ ಪರಿಷತ್ ಇವುಗಳ ವತಿಯಿಂದ ಬುಧವಾರ ಜರುಗಿದ ‘ಸಿಹಿತೆನೆ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು […]

Continue Reading

ಪ್ರತಿಯೊಬ್ಬರಲ್ಲಿ ಸಾಮರಸ್ಯ ಮನೋಭಾವ ಬೆಳೆಯಲಿ: ಎಚ್.ಬಿ ಪಾಟೀಲ

ಕಲಬುರಗಿ: ದೇಶದಲ್ಲಿರುವ ಪ್ರತಿಯೊಬ್ಬರು ನಾವೆಲ್ಲರು ಭಾರತಾಂಬೆಯ ಮಕ್ಕಳು ಒಂದೆ ಎಂಬ ಸಾಮರಸ್ಯ ಭಾವದಿಂದ ಬದುಕುವುದು ಪ್ರಸ್ತುತ ದಿನಗಳಲ್ಲಿ ಅತ್ಯವಶ್ಯಕ ಎಂದು ಉಪನ್ಯಾಸಕ ಹಾಗೂ ಸಮಾಜ ಸೇವಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಖಾದ್ರಿ ದರ್ಗಾದ ಹಜರತ್ ಸೈಯದ್ ಷಾ ಹುಸನೋದ್ದಿನ್ ಖಾದ್ರಿ ಉರಫತ್ ನೂರಾನಿ ಬಾಬಾರವರ 19ನೇ ಉರುಸ್, ಕೋಮು ಸಾಮರಸ್ಯ ಕಾರ್ಯಕ್ರಮ ಹಾಗೂ ವಿವಿಧ ಸಮುದಾಯ ಮುಖಂಡರಿಗೆ ಸೋಮವಾರ ರಾತ್ರಿ ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವರೆಲ್ಲರೂ ಒಂದೆಯಾಗಿದ್ದು, […]

Continue Reading

ರಾಷ್ಟ್ರದ ಅಭಿವೃದ್ಧಿಗೆ ಮುದ್ರಣದ ಕೊಡುಗೆ ಅನನ್ಯ

ಕಲಬುರಗಿ: ಐತಿಹಾಸಿಕ, ಭೌಗೋಳಿಕೆ, ಸಾಹಿತ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ವಿಷಯ, ಮಾಹಿತಿ ದೊರೆಯಬೇಕಾದರೆ ಪುಸ್ತಕ ಅಧ್ಯಯನ ಅಗತ್ಯ. ದೇಶದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಒದಗಿಸಿ, ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲು ಸೂಕ್ತ ಮಾಹಿತಿ ಅಗತ್ಯವಾಗಿದೆ. ಮುದ್ರಣ ಶಾಶ್ವತ ದಾಖಲೆಯಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನರೋಣಾ ಗ್ರಾಮದ ಎಸ್.ಡಿ ಮಠಪತಿ ಪ್ರಿಂರ‍್ಸ್ನಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ […]

Continue Reading

ಶಿಶು ಸಾಹಿತ್ಯದ ಜನಕ ಪಂಜೆ ಮಂಗೇಶರಾಯರು

ಕಲಬುರಗಿ: ಇಂದಿನ ಮಕ್ಕಳೆ ನಾಳಿನ ನಾಗರಿಕರಾಗಿರುವದರಿಂದ ಬಾಲ್ಯದಲ್ಲಿಯೆ ಅವರಿಗೆ ಮೌಲ್ಯ ಬಿತ್ತುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಅನೇಕ ಮೌಲ್ಯಗಳುಳ್ಳ ಸಣ್ಣ ಕಥೆಗಳನ್ನು ಸರಳವಾಗಿ ತಿಳಿಯುವಂತೆ ರಚಿಸಿ ಮಕ್ಕಳ ಸಾಹಿತ್ಯದ ಜನಕರೆನಿಸಿಕೊಂಡ ಪಂಜೆ ಮಂಗೇಶರಾಯರ ಕೊಡುಗೆ ಅವಿಸ್ಮರಣೀಯ ಎಂದು ಉಪನ್ಯಾಸಕ, ಲೇಖಕ ಎಚ್.ಬಿ‌ಪಾಟೀಲ ಅಭಿಮತಪಟ್ಟರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಪಂಜೆ ಮಂಗೇಶರಾಯರ 151ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಮಂಗೇಶರಾಯರು ಸಣ್ಣಕಥೆ, […]

Continue Reading

ಉತ್ತಮ ಚಿಂತನೆ ಉನ್ನತ ಸಾಧನೆಗೆ ಪೂರಕ

ಕಲಬುರಗಿ: ಜೀವನದಲ್ಲಿ ಯಾವುದೆ ಸಂದರ್ಭದಲ್ಲಿಯೂ ಕೂಡ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವದು ಉತ್ತಮ. ಉತ್ತಮ ಚಿಂತನೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.  ನಗರದ  ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಚಿಂತನೆ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಸಕಾರಾತ್ಮಕ ಆಲೋಚನೆಗಳೊಂದಿಗೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು. ಹೊಸ- ಹೊಸ ಯೋಚನೆಗಳಿಂದ ಯೋಜನೆ ರೂಪಿಸಿಕೊಂಡರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.  ಈ ದಿನವನ್ನು  […]

Continue Reading

ಕಿತ್ತೂರ ರಾಣಿ ಚನ್ನಮ್ಮ ಕೊಡುಗೆ ಅವಿಸ್ಮರಣೀಯ

ಕಲಬುರಗಿ: ದೇಶದ ಪ್ರಥಮ ಸ್ವಾತಂತ್ರ ಹೋರಾಟಗಾರ್ತಿಯಾಗಿ ಬಲಿದಾನವಾದ ವೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮ ಶೂರ, ತ್ಯಾಗ, ಸ್ವಾಭಿಮಾನ, ದೇಶಪ್ರೇಮ, ಕೊಡುಗೆ ಅವಿಸ್ಮರಣೀಯ ಎಂದು ಶಿಕ್ಷಕಿ ಪೂಜಾ ಜಮಾದಾರ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ವೀರಮಾತೆ ಕಿತ್ತೂರ ರಾಣಿ ಚನ್ನಮ್ಮರ 196ನೇ ಪುಣ್ಯಸ್ಮರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ದೊರೆಕಿಸಿಕೊಡುವಲ್ಲಿ, ಸಾಮಾಜಿಕ […]

Continue Reading