ವಾಡಿ ಪುರಸಭೆ: 10 ವರ್ಷಕ್ಕಿಂತ ಹೆಚ್ಚು ಅವಧಿ ಕರ್ತವ್ಯದಲ್ಲಿರುವ ನೌಕರರ ವರ್ಗಾವಣೆಗೆ ಕರವೇ ಒತ್ತಾಯ

ಚಿತ್ತಾಪುರ: ವಾಡಿ ಪುರಸಭೆಯಲ್ಲಿ 3 ಜನ ನೌಕರರು 10 ರಿಂದ 15 ವರ್ಷಗಳಾದರೂ ಇನ್ನೂ ವಾಡಿಕೆಯಲ್ಲೆ ಕಾರ್ಯನಿರ್ವಹಿಸುತ್ತಿದ್ದಾರೆ, ಹೀಗಾಗಿ ಆದಷ್ಟು ಬೇಗ ಅವರನ್ನು ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಚಂದರ ಚವ್ಹಾಣ ಮತ್ತು ಘಟಕದ ಅಧ್ಯಕ್ಷ ಶಿವಕುಮಾರ ಗುತ್ತೆದಾರ ಅವರು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ತಾಲೂಕಿನ ವಾಡಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಅಧಿಕಾರಿ ಈಶ್ವರ ಅಂಬೆಕಾರ, ಪ್ರಥಮ ದರ್ಜೆ ಸಹಾಯಕ ವಿರುಪಾಕ್ಷ ಮತ್ತು ಆರೋಗ್ಯ ನಿರಿಕ್ಷಕಿ ಲತಾಮಣಿ […]

Continue Reading

ಪ್ರಗತಿಶೀಲ ಚಿಂತನೆಗೆ ಪ್ರೇರಣೆ ನೀಡುವ ದೇವನೂರು ಸಾಹಿತ್ಯ

ಕಲಬುರಗಿ: ದೇವನೂರು ಮಹಾದೇವ ಅವರು ಕೇವಲ ಸಾಹಿತಿ ಮಾತ್ರವಲ್ಲದೆ, ದಲಿತ ಹಕ್ಕುಗಳಿಗಾಗಿ ಹೋರಾಡಿದ ಸಾಮಾಜಿಕ ಹೋರಾಟಗಾರರು ಆಗಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖ ಸಂಘಟಕರು. ಅವರ ಬರವಣಿಗೆಯು ದಲಿತರ ಮೇಲಿನ ಶೋಷಣೆ, ಕ್ರೌರ್ಯ ಹಾಗೂ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುವ ಮೂಲಕ ಪ್ರಗತಿಶೀಲ ಚಿಂತನೆಗೆ ಪ್ರೇರಣೆ ನೀಡುತ್ತವೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ […]

Continue Reading

16 ಲಕ್ಷ ರೂ.ಗಳೊಂದಿಗೆ ನಾಪತ್ತೆಯಾದ ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ

ಬಳ್ಳಾರಿ: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನರಿಂದ ಸಂಗ್ರಹವಾಗಿದ್ದ 16 ಲಕ್ಷ ರೂ. ಬ್ಯಾಂಕಿಗೆ ಜಮೆ ಮಾಡದೆ ಹಣದೊಂದಿಗೆ ಎಸ್’ಡಿಎ ಸಿಬ್ಬಂದಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಆರ್’ಟಿಒ ಕಚೇರಿಯ ಖಜಾನೆ (ಟ್ರೆಶರಿ) ವಿಭಾಗದ ಸಿಬ್ಬಂದಿ ರವಿ ತಾವರೆಕೆಡ 16.72 ಲಕ್ಷ ರೂ.ಗಳೊಂದಿಗೆ ನಾಪತ್ತೆಯಾಗಿದ್ದು, ಈ ಕುರಿತು ಆರ್’ಟಿಒ ಅಧಿಕಾರಿ ಶ್ರೀನಿವಾಸ್ ಗಿರಿ ನೀಡಿರುವ ದೂರಿನ ಮೇರೆಗೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಖಜಾನೆ ವಿಭಾಗದ ಎಸ್’ಡಿಎ ರವಿ ತಾವರೆಕೆಡ ಕಚೇರಿಯಲ್ಲಿ ಸಾರಿಗೆ ಇಲಾಖೆ ಸಾರ್ವಜನಿಕರಿಗೆ […]

Continue Reading

ಮದುವೆ ಮಂಟಪದಲ್ಲೆ ಪತಿಗೆ ಚಪ್ಪಲಿಯಿಂದ ಥಳಿಸಿದ ಪತ್ನಿ

ಚಿತ್ರದುರ್ಗ: ವರದಕ್ಷಿಣೆ ದುರಾಸೆಗೆ 2ನೇ ಮದುವೆಯಾಗಲು ಮುಂದಾಗಿದ್ದ ಪತಿಗೆ ಕಲ್ಯಾಣ ಮಂಟಪದಲ್ಲೆ ಪತ್ನಿ ತನ್ನ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ತಡರಾತ್ರಿ ಜರುಗಿದೆ. ಪತ್ನಿ, ಆಕೆಯ ಕುಟುಂಬಸ್ಥರಿಂದ ಪತಿ ಮತ್ತು ಆತನ ಕಡೆಯವರಿಗೆ ಸಖತ್ತಾಗಿ ಧರ್ಮದೇಟು ಬಿದ್ದವು. ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಈ ಘಟನೆಯಿಂದ ನವ ವಧು ಮತ್ತು ಕುಟುಂಬದವರು ಕಕ್ಕಾಬಿಕ್ಕಿಯಾದರು. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮುಶೇನಾಳ ಗ್ರಾಮದ ತನುಜಾ 4 ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ […]

Continue Reading

ಸುರಕ್ಷಿತ ಆಹಾರ ಸೇವನೆಯಿಂದ ಸದೃಢ ಆರೋಗ್ಯ ಸಾಧ್ಯ

ಕಲಬುರಗಿ: ಮಾನವನು ಆರೋಗ್ಯಪೂರ್ಣವಾಗಿ ಜೀವಿಸಲು ಶುದ್ಧವಾದ ಆಕ್ಸಿಜನ್, ಕುಡಿಯುವ ನೀರು ಮತ್ತು ಆಹಾರ ಅವಶ್ಯಕ. ನಮ್ಮ ದೇಹಕ್ಕೆ ಬರುವ ಅನೇಕ ಕಾಯಿಲೆಗಳು ಇವುಗಳಿಗೆ ಸಂಬಂಧಿಸಿವೆ. ಶುಚಿಯಾದ, ಸತ್ವಯುತ ಮತ್ತು ಸಮತೋಲಿತವಾದ ಆಹಾರದ ಸೇವನೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸನ್’ಲೈಟ್ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಆಹಾರ ಸುರಕ್ಷತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನ ದುರಾಸೆಯಿಂದ ನಾವು […]

Continue Reading

ಬ್ರೈನ್ ಟ್ಯೂಮರ್ ನಿರ್ಲಕ್ಷ್ಯ ಬೇಡ, ಮುಂಜಾಗ್ರತೆ ಅಗತ್ಯ: ಡಾ.ಮಂಜುನಾಥ

ಕಲಬುರಗಿ: ಆಧುನಿಕ ಒತ್ತಡ ಬದುಕು, ಅನಾರೋಗ್ಯಕರ ಜೀವನ ಶೈಲಿ, ಅಪಘಾತ, ವಿಶ್ರಾಂತಿ ಇಲ್ಲದಿರುವುದು, ರಾಸಾಯನಿಕ ಸೇವನೆ, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ಮತ್ತಿತರ ಕಾರಣಗಳಿಂದ ಬ್ರೈನ್ ಟ್ಯೂಮರ್ ಉಂಟಾಗುತ್ತದೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೆ, ತಿಳಿದುಕೊಂಡು, ಮುಂಜಾಗ್ರತೆ ವಹಿಸಬೇಕಾದದ್ದು ಅವಶ್ಯಕವಾಗಿವೆ ಎಂದು ಕುಟುಂಬ ವೈದ್ಯ ಡಾ.ಮಂಜುನಾಥ ಪವಾಡಶೆಟ್ಟಿ ಸಲಹೆ ನೀಡಿದರು. ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದ ಬಸವೇಶ್ವರ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ವಿಶ್ವ ಬ್ರೈನ್ ಟ್ಯೂಮರ್ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, […]

Continue Reading

ಪರಿಸರ ಸಮತೋಲನೆಗೆ ಸಾಗರ-ಸಮುದ್ರಗಳು ಅಗತ್ಯ: ಎಚ್.ಬಿ ಪಾಟೀಲ

ಕಲಬುರಗಿ: ಪರಿಸರ ಸಮತೋಲನ ಸ್ಥಿತಿಯಲ್ಲಿರಲು ಸಾಗರ ಮತ್ತು ಸಮುದ್ರಗಳು ತುಂಬಾ ಅವಶ್ಯಕವಾಗಿವೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ವಿಶ್ವ ಸಾಗರಗಳು ಮತ್ತು ಸಮುದ್ರ ಸಂಬಂಧಿ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಮಾನವನಿಗೆ ಅವಶ್ಯಕವಾಗಿ ಬೇಕಾಗುವ ನೀರನ್ನು ಪೂರೈಸುವ ಸಾಗರಗಳು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿವೆ. ಭೂಮಿಯ ಮೇಲೆ ಒಟ್ಟು ಶೇ.97ರಷ್ಟು ನೀರನ್ನು ಹಿಡಿದಿಟ್ಟುಕೊಂಡು ಮಳೆಯ ರೂಪದಲ್ಲಿ ಭೂಮಿಯ ಮೇಲೆ ಸುರಿಯುವ […]

Continue Reading

ಮನೆ ಮೇಲೆ ಕಾರು ಇಟ್ಟ ಮೆಕ್ಯಾನಿಕ್‌: ಕಾರನ್ನು ದೇವರಂತೆ ಪೂಜಿಸುವ ಕುಟುಂಬ

ಬೆಳಗಾವಿ: ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಮೆಕ್ಯಾನಿಕ್‌ ಸೂರಜ್ ನಾರೆ ಅವರು ನೆಚ್ಚಿನ ಕಾರನ್ನು ತಮ್ಮ ಮೂರು ಅಂತಸ್ತಿನ ಮನೆಯ ಮೇಲೆ ಇಟ್ಟಿದ್ದಾರೆ. ಕ್ರೇನ್‌ ನೆರವಿನಿಂದ ಮೇಲೆ ಇಡಲಾಗಿರುವ ಕಾರು ಸುಲಭವಾಗಿ ಕಾಣುವಂತೆ ಇಳಿಜಾರಿನಲ್ಲಿ ಇರಿಸಲಾಗಿದೆ. ಬೇಡಕಿಹಾಳದ ಕಡುಬಡ ಕುಟುಂಬದಲ್ಲಿ ಜನಿಸಿದ ಸೂರಜ್‌ ಐಟಿಐ ಓದಿ, ಮಹಾರಾಷ್ಟ್ರದ ಪುಣೆಯಲ್ಲಿ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ 4 ವರ್ಷ ದುಡಿದರು. 12 ವರ್ಷಗಳ ಹಿಂದೆ ಸ್ವಗ್ರಾಮಕ್ಕೆ ಬಂದು, ತಮ್ಮದೆ ಚಿಕ್ಕ ಗ್ಯಾರೇಜ್‌ ತೆರೆದರು. ಜೊತೆಗೆ ಕಾರು ಚಾಲನಾ ತರಬೇತಿ ಕೇಂದ್ರ […]

Continue Reading

ಕನ್ನಡಕ್ಕೆ ಮಾಸ್ತಿಯವರು ಅಮೂಲ್ಯ ಆಸ್ತಿ: ಡಾ.ವಾಸುದೇವೆ ಸೇಡಂ

ಕಲಬುರಗಿ: ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಕನ್ನಡದ ಅಮೂಲ್ಯವಾದ ಆಸ್ತಿಯಾಗಿದ್ದಾರೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ.ವಾಸುದೇವೆ ಸೇಡಂ ಎಚ್. ಹೇಳಿದರು. ನಗರದ ಹೊಸ ಜೇವರ್ಗಿ ರಸ್ತೆಯ ಗೆಟ್ಸ್ ಡಿಗ್ರಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್’ರ 134ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ವಿಶ್ವದ ಪ್ರಮುಖ ಭಾಷೆಗಳಲ್ಲಿ ಸ್ಥಾನ ಪಡೆಯುವಲ್ಲಿ ಶ್ರಮಿಸಿದ, […]

Continue Reading

ಡಾ.ಎಚ್ ನರಸಿಂಹಯ್ಯ ಬಹುಮುಖ ವ್ಯಕ್ತಿತ್ವದ ಸಮಾಜ ಸುಧಾರಕ: ಎಚ್.ಬಿ ಪಾಟೀಲ

ಕಲಬುರಗಿ: ದೇಶ ಕಂಡ ಶ್ರೇಷ್ಠ ಶಿಕ್ಷಣ ತಜ್ಞರಲ್ಲಿ ಒಬ್ಬರಾದ ಡಾ.ಎಚ್ ನರಸಿಂಹಯ್ಯನವರು ಬಹುಮುಖ ವ್ಯಕ್ತಿತ್ವದ ಸಮಾಜ ಸುಧಾರಕರಾಗಿ ಜನಮಾನಸದಲ್ಲಿ ಅಚಳಿಯದೇ ಉಳಿದಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ಸಮೀಪದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಬೆಳಿಗ್ಗೆ ಏರ್ಪಡಿಸಿದ್ದ ‘ಡಾ.ಎಚ್.ನರಸಿಂಹಯ್ಯನವರ 105ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರದ ಅಭಿವೃದ್ಧಿಯ ಜೀವಾಳವಾದ […]

Continue Reading