ಗಣಿತಶಾಸ್ತ್ರ ಮಹತ್ವದ ಸ್ಥಿರ ಚಿಹ್ನೆ π : ಎಚ್.ಬಿ ಪಾಟೀಲ

ಕಲಬುರಗಿ: ಪೈ(π) ಗಣಿತಶಾಸ್ತ್ರ ಮಹತ್ವದ ಸ್ಥಿರ ಚಿಹ್ನೆಯಾಗಿದ್ದು, ಅದರ ಮೊತ್ತ 3.142 ಇದು ವೃತ್ತದ ಸುತ್ತಳತೆ ಮತ್ತು ವ್ಯಾಸದ ಅನುಪಾತವಾಗಿದೆ. ಇದನ್ನು ಗಣಿತಶಾಸ್ತ್ರಜ್ಞ ವಿಲಿಯಂಜೋನ್ಸ್ ವ್ಯಾಪಕವಾಗಿ ಬಳಸಿ, ಪ್ರಸಿದ್ಧಗೊಳಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನ ಸಕ್ಸಸ್ ಕಂಪಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಪೈ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಗಣಿತಶಾಸ್ತ್ರ ಕೇವಲ ಅದೊಂದು ವಿಷಯವಾಗಿರದೆ,ಜೀವನಕ್ಕೆ ತುಂಬಾ ಹತ್ತಿರವಾಗಿದೆ. ಲೆಕ್ಕಾಚಾರವಿಲ್ಲದ ಬದುಕು ಪರಿಪೂರ್ಣವಾಗಲಾರದು. […]

Continue Reading

ಭೌತ ವಿಜ್ಞಾನದಲ್ಲಿ ಕ್ರಾಂತಿ ಮೂಡಿಸಿದ ಐನ್’ಸ್ಟೀನ್: ಎಚ್.ಬಿ ಪಾಟೀಲ

ಕಲಬುರಗಿ: ವಿಶ್ವ ಪ್ರಸಿದ್ಧ ಭೌತ ವಿಜ್ಞಾನಿ ಅಲ್ಬರ್ಟ್ ಐನ್’ಸ್ಟೀನ್ ಅವರು ಇ=ಎಂಸಿ(2) ಎಂಬ ‘ಸಾಪೇಕ್ಷತಾ ಸಿದ್ಧಾಂತ’ದ ಮೂಲಕ ಭೌತ ವಿಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಜಗದ್ವಿಖ್ಯಾತ ಭೌತವಿಜ್ಞಾನಿ ಅಲ್ಬರ್ಟ್ ಐನ್’ಸ್ಟೀನ್ ಜನ್ಮದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಯಾವುದೆ ಒಂದು ರಾಷ್ಟ್ರದ ಅಭಿವೃದ್ಧಿಯು ಅಲ್ಲಿನ ವಿಜ್ಞಾನ ಕ್ಷೇತ್ರದ ಬೆಳವಣಿಗೆಯ ಮೇಲೆ […]

Continue Reading

ರೈತರು ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ಕಲಬುರಗಿ: ಸಾವಯುವ ಗೊಬ್ಬರದ ವ್ಯಾಪಕ ಬಳಕೆ, ಬೀಜೋಪಚಾರ, ಹೊಸ ತಂತ್ರಜ್ಞಾನದ ಬಳಕೆ, ಸುಧಾರಿತ ಬೀಜಗಳ ಬಳಕೆ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಕೃಷಿಯ ಜೊತೆ ಹೈನುಗಾರಿಕೆ, ತೋಟಗಾರಿಕೆ, ಕೋಳಿ, ಕುರಿ ಸಾಕಾಣಿಕೆಯ ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಕೃಷಿ ಅಧಿಕಾರಿ, ಕೃಷಿಕ ಸಮಾಜದ ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು. ಆಳಂದ ರಸ್ತೆಯ ಸುಂಟನೂರ ಕ್ರಾಸ್ ಸಮೀಪ ಪ್ರಗತಿಪರ ರೈತ ಸಂತೋಷ ಹಿರಮಶೆಟ್ಟಿ ತೋಟದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ’ದ […]

Continue Reading

ಶರಣ ತತ್ವಕ್ಕೆ ಪೂಜ್ಯ ಡಾ.ಮಾತೆ ಮಹಾದೇವಿಯವರ ಕೊಡುಗೆ ಅನನ್ಯ

ಕಲಬುರಗಿ: ಸಾಮಾಜಿಕ ನ್ಯಾಯದ ಹರಿಕಾರರಾದ ಬಸವಣ್ಣನವರು ಮತ್ತು ಎಲ್ಲಾ ಶರಣರ ತತ್ವ ಹಾಗೂ ಕೊಡುಗೆಯನ್ನು ದೇಶದುದ್ದಕ್ಕೂ ಪ್ರಚಾರ ಮಾಡಿ, ಎಲ್ಲರಿಗೂ ವಚನಗಳ ಸಾರವನ್ನು ಉಣಬಡಿಸುವ ಮೂಲಕ ಮಾತೆ ಮಹಾದೇವಿಯವರು ಶರಣ ತತ್ವದ ಪ್ರಸಾರಕ್ಕೆ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ಪರಮ ಪೂಜ್ಯ ಡಾ.ಮಾತೆ ಮಹಾದೇವಿ ಅವರ 79ನೇ […]

Continue Reading

ದುಷ್ಟತೆ ನಾಶದ ಮೇರು ಸಂದೇಶದ ಹೋಳಿ: ಎಚ್.ಬಿ ಪಾಟೀಲ

ಕಲಬುರಗಿ: ಸಂಸ್ಕೃತ ಶಬ್ದವಾದ ‘ಹೋಳಿ’ ಎಂದರೆ ‘ಸುಡು’ ಎಂದರ್ಥ. ಅಂದರೆ ಮನುಷ್ಯನಲ್ಲಿ ಅಡಗಿರುವ ಕಾಮ, ಕ್ರೋದ, ಮದ, ಮೋಹ, ಮತ್ಸರದಂತಹ ಅರಿಷಡ್ವರ್ಗಗಳು, ಕೆಟ್ಟ ಗುಣಗಳನ್ನು ನಾಶಪಡಿಸಿ, ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಪರಸ್ಪರ ಶಾಂತಿ, ಸೌಹಾರ್ದತೆಯ ಜೀವನ ಸಾಗಿಸಬೇಕೆಂಬ ಮೇರು ಸಂದೇಶವನ್ನು ಹೋಳಿ ಹಬ್ಬ ಹೊಂದಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ‘ಹೋಳಿ ಹಬ್ಬದ […]

Continue Reading

ಮುಂಜಾಗ್ರತೆ ವಹಿಸಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಮಾನವನ ದೇಹದ ಪ್ರಮುಖ ಭಾಗವಾದ ಕಿಡ್ನಿಗೆ ವಿವಿಧ ರೀತಿಯಿಂದ ತೊಂದರೆಯಾಗುತ್ತದೆ. ನಿರಂತರ ಆಯಾಸ, ನಿದ್ರೆಯ ತೊಂದರೆ, ಒಣಗಿದ ಚರ್ಮ, ಮೂತ್ರದಲ್ಲಿ ಉರಿಯೂತ ಮತ್ತು ರಕ್ತಪಾತ, ಸ್ನಾಯು ಸೆಳೆತದಂತಹ ಲಕ್ಷಣಗಳು ಕಿಡ್ನಿಯ ತೊಂದರೆಯನ್ನು ಸೂಚಿಸುತ್ತವೆ. ಆಗ ನಿರ್ಲಕ್ಷ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದು ಕಿಡ್ನಿಯನ್ನು ರಕ್ಷಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಸಲಹೆ ನೀಡಿದರು. ಶೇಖರೋಜಾ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ […]

Continue Reading

ಧೂಮಪಾನದಿಂದ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ

ಕಲಬುರಗಿ: ಧೂಮಪಾನ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕದ ಮೇಲೆ ದುಷ್ಪರಿಣಾಮವಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಬುಧವಾರ ಜರುಗಿದ ‘ರಾಷ್ಟೀಯ ಧೂಮಪಾನ ನಿಷೇಧ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಯುವ ಶಕ್ತಿಯಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಸದೃಢ ಮಾನವ ಸಂಪನ್ಮೂಲ ತುಂಬಾ ಅಗತ್ಯವಾಗಿದೆ. ಅದರಲ್ಲಿಯೂ ಯುವಕರು ರಾಷ್ಟ್ರದ ಶಕ್ತಿಯಾಗಿದ್ದಾರೆ. ಆದರೆ ನಮ್ಮ […]

Continue Reading

ಸೂಕ್ತ ತಯಾರಿಯಿಂದ ಪರೀಕ್ಷೆ ಸುಲಭ: ಡಾ. ಪ್ರಹ್ಲಾದ ಬರ‍್ಲಿ

ಚಿತ್ತಾಪುರ: 10ನೇ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಮಹತ್ವದ ಘಟ್ಟ. ಸೂಕ್ತ ತಯಾರಿ ಮಾಡಿಕೊಂಡರೆ ಎಂತಹ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಆರ್.ಜೆ ಕಾಲೇಜಿನ ಪ್ರಾಚಾರ್ಯ ಡಾ. ಪ್ರಲ್ಹಾದ್ ಬರ‍್ಲಿ ಹೇಳಿದರು. ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 10ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸು ಬೇರೆಡೆಗೆ ಸೆಳೆಯುವ ಆಕರ್ಷಣೆ ಇದ್ದರು ಕೂಡ ಲೆಕ್ಕಿಸದೆ ಓದಿನ ಕಡೆಗೆ ಮಾತ್ರ ಗಮನಹರಿಸಿ ಅಧ್ಯಯನ ಮಾಡಿದರೆ, ಉತ್ತಮ […]

Continue Reading

ಬದಲಿ ವಿದ್ಯಾರ್ಥಿನಿಯಾಗಿ ಪರೀಕ್ಷೆಗೆ ಹಾಜರು: ಸಂಪೂರ್ಣ ಪೊಲೀಸ್ ಕಸ್ಟಡಿಗೆ

ಕಲಬುರಗಿ: ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆಯ ಪರೀಕ್ಷೆಯಲ್ಲಿ ಬದಲಿ ವಿದ್ಯಾರ್ಥಿನಿಯಾಗಿ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣ ಪಾಟೀಲ ಅವರನ್ನು ಇಲ್ಲಿನ 4ನೇ ಜೆಎಂಎಫ್‌ಸಿ ನ್ಯಾಯಾಲಯ ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ. ನಗರದ ಮಿಲಿಂದ್ ಶಾಲೆಯಲ್ಲಿ ಅರ್ಚನಾ ಎಂಬ ವಿದ್ಯಾರ್ಥಿನಿಯ ಬದಲಿಗೆ ಅಕ್ರಮವಾಗಿ ಸಂಪೂರ್ಣ ಪಾಟೀಲ ಬರೆಯುತ್ತಿರುವುದನ್ನು ದಲಿತ ಸೇನೆ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ತಕ್ಷಣ ಪೊಲೀಸರು […]

Continue Reading

ಸದೃಢ ಆರೋಗ್ಯ– ಮಾದಕವಸ್ತು ಮುಕ್ತ ಕರ್ನಾಟಕಕ್ಕಾಗಿ ಓಟ

ಕಲಬುರಗಿ: ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಅಪರಾಧ ತಡೆ ಮತ್ತು ತಂಬಾಕು ನಿಷೇಧ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ – 2025 ಓಟದಲ್ಲಿ 5 ಕಿ.ಮೀ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಹೆಬ್ಬಾಳ ಮಕ್ಕಳು ಭಾಗವಹಿಸಿ ಕ್ರಮವಾಗಿ ಮಹೇಶ 6ನೇ ಸ್ಥಾನ ಮತ್ತು ಸಮೀರ್ 8ನೇ ಸ್ಥಾನ ಪಡೆದಿದ್ದಕ್ಕಾಗಿ ಕಲಬುರಗಿ ನಗರ ಪೊಲಿಸ್ ಆಯುಕ್ತರಿಂದ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಇಂದು (ಸೋಮವಾರ) ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳು ಮತ್ತು ಶಿಕ್ಷಕರಿಂದ […]

Continue Reading