ಕಲಬುರಗಿ: ದಕ್ಷಿಣ ವಲಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಬಸಯ್ಯ ಎಸ್ ಸ್ವಾಮಿ ಮತ್ತು ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜು ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶಕುಮಾರ ಜಾಮಗೊಂಡ ಅವರಿಗೆ ಗೆಳೆಯರ ಬಳಗದ ವತಿಯಿಂದ ರವಿವಾರ ನಗರದ ಕಸ್ತೂರಿ ನಗರದಲ್ಲಿ ಸತ್ಕರಿಸಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕ ಎಚ್.ಬಿ ಪಾಟೀಲ, ಆಳಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ತಾಲೂಕಾ ಕೃಷಿ ಸಹಾಯಕರ ಸಂಘದ ಮಾಜಿ ಕಾರ್ಯದರ್ಶಿ ಶಿವಯೋಗೆಪ್ಪಾ ಎಸ್ ಬಿರಾದಾರ, ಪ್ರಮುಖರಾದ ಶರಣು ಕಾಂದೆ, ಚನ್ನಪ್ಪ ಕಾಂದೆ, ದೌಲತರಾವ ಕೌವಲಗಿ ಸೇರಿದಂತೆ ಅನೇಕರು ಇದ್ದರು.