ಮಹಾ ಶಿವರಾತ್ರಿ ಆತ್ಮಾವಲೋಕನದ ಸಂದೇಶ ವಾಹಕ

ಕಲಬುರಗಿ: ಪರಮಾತ್ಮನ ಬೆಳಕು ಕಾಣುವುದೇ ನಮ್ಮ ಭಕ್ತಿಯ ಉದ್ದೇಶವಾಗಿರಬೇಕು. ಇಂತಹ ಅಂಶಗಳು ನಮ್ಮಲ್ಲಿ ಮೂಡಿದಾಗ ಆಗ ಭಕ್ತಿಯು ಸಾರ್ಥಕತೆಯನ್ನು ಪಡೆಯುತ್ತದೆಯೆಂಬ ಮೇರು ಸಂದೇಶವು ಶಿವರಾತ್ರಿ ಹೊಂದಿದೆ. ಇದು ಆತ್ಮಾವಲೋಕನದ ಸಂದೇಶದ ವಾಹಕದಂತೆ ಕಾರ್ಯನಿರ್ವಹಿಸುತ್ತದೆ ಎಂದು ಪೂಜ್ಯ ನಾಗೇಶ ಮಹಾರಾಜ ಗುಜರಾತಿ ಹೇಳಿದರು. ನಗರದ ಆಳಂದ ನಾಕಾ ಸಮೀಪದ ಐತಿಹಾಸಿಕ ಬಹು ಪುರಾತನ ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ‘ದೇವಸ್ಥಾನ ಸಮಿತಿ’, ‘ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ಸಂಯುಕ್ತ ಆಶ್ರಯದಲ್ಲಿ […]

Continue Reading

ದೇಶಿ ಆಹಾರದಲ್ಲಿದೆ ಆರೋಗ್ಯದ ಗುಟ್ಟು

ಕಲಬುರಗಿ: ವಿದೇಶ ಫಾಸ್ಟ್, ಜಂಕ್ ಪುಢ್ ಆಹಾರ ಸೇವನೆ ಮಾಡದೆ, ದೇಶಿಯ ಸಾವಯುವ ಆಹಾರ, ಸಿರಿಧಾನ್ಯಗಳ ಆಹಾರ ಉಪಯೋಗಿಸಬೇಕು. ದೇಶಿಯ ಆಹಾರದಲ್ಲಿದೆ ನಮ್ಮ ಆರೋಗ್ಯದ ಗುಟ್ಟು ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ ನಿಂಗಪ್ಪ ಹೇಳಿದರು. ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ಅವರ ಹೊಲದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಕನ್ನಡ ಜಾನಪದ ಪರಿಷತ್ ಇವುಗಳ ವತಿಯಿಂದ ಬುಧವಾರ ಜರುಗಿದ ‘ಸಿಹಿತೆನೆ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು […]

Continue Reading

ರಕ್ತದಾನದಿಂದ ಆರೋಗ್ಯ ವೃದ್ಧಿ: ಮಾಲಗತ್ತಿ ಶ್ರೀ

ಸುದ್ದಿ ಸಂಗ್ರಹ ಶಹಾಬಾದ ರಕ್ತದಾನ ಮಾಡುವದರಿಂದ ಜೀವ ಉಳಿಸಿದ ಭಾವನೆ ಜೊತೆಗೆ ದಾನಿಯ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮಾಲಗತ್ತಿಯ ಹಿರೋಡೇಶ್ವರ ದೇವಸ್ಥಾನದ ಪೂಜ್ಯ ಚನ್ನಬಸವ ಶರಣರು ಹೇಳಿದರು. ತಾಲೂಕಿನ ಸುಕ್ಷೇತ್ರ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ನಿಮಿತ್ಶ ಶಹಾಬಾದ ತಾಲೂಕ ಪತ್ರಕರ್ತರು ಹಾಗೂ ಕಲಬುರಗಿಯ ಜೀವನ ಆಧಾರ ಮೆಡಿಕಲ್ ಫೌಂಡೇಷನ್ ಮತ್ತು ರಕ್ತ ನಿಧಿಕೇಂದ್ರದ ಸಹಯೋಗದೊಂದಿಗೆ ಉಚಿತ ಆರೋಗ್ಯತಪಾಸಣೆ, ಔಷಧ ವಿತರಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರೋಗ ಬರುವ ಮುನ್ನ ಆಗಾಗ್ಗೆ […]

Continue Reading

ವಾಡಿ ಭಕ್ತರ ಮೇಲೆ ಪ್ರಯಾಗರಾಜ್ ಪವಿತ್ರ ಜಲದ ಸಿಂಚನ

ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಪುಣ್ಯಭೂಮಿ ಪ್ರಯಾಗರಾಜ್’ದ ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ಶಿವಪೂರದ ಶಿವಲಿಂಗ ಮಹಾಸ್ವಾಮಿಗಳು ಭಕ್ತರ ಮೇಲೆ ಸಿಂಪಡಿಸುವ ಮೂಲಕ ಪುಣ್ಯಕ್ಷೇತ್ರದ ವಾತವರಣ ಸೃಷ್ಟಿಸಿದರು. ಮಹಾಶಿವರಾತ್ರಿ ಪ್ರಯುಕ್ತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ವೀರೇಶ್ವರ ಶರಣರ ಪುರಾಣ ಸಂದರ್ಭವಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪುರಾಣದ ಪೂರ್ವದಲ್ಲಿ ಪುರಾಣಕಾರ ಶಿವಲಿಂಗ ಮಹಾಸ್ವಾಮಿಗಳು ಪ್ರಯಾಗರಾಜ್’ಗೆ ತೆರಳಿ ಪುಣ್ಯ ಸ್ನಾನ ಮಾಡಿದ ಅಲ್ಲಿನ ಭಕ್ತಿ ವಾತವರಣವನ್ನು ಪುರಾಣದಲ್ಲಿ ಅನಾವರಣ ಗೊಳಿಸಿದರು. ಪಟ್ಟಣದ ಭಕ್ತರು ಪ್ರಯಾಗರಾಜ್’ದಿಂದ […]

Continue Reading

ಪ್ರತಿಯೊಬ್ಬರಲ್ಲಿ ಸಾಮರಸ್ಯ ಮನೋಭಾವ ಬೆಳೆಯಲಿ: ಎಚ್.ಬಿ ಪಾಟೀಲ

ಕಲಬುರಗಿ: ದೇಶದಲ್ಲಿರುವ ಪ್ರತಿಯೊಬ್ಬರು ನಾವೆಲ್ಲರು ಭಾರತಾಂಬೆಯ ಮಕ್ಕಳು ಒಂದೆ ಎಂಬ ಸಾಮರಸ್ಯ ಭಾವದಿಂದ ಬದುಕುವುದು ಪ್ರಸ್ತುತ ದಿನಗಳಲ್ಲಿ ಅತ್ಯವಶ್ಯಕ ಎಂದು ಉಪನ್ಯಾಸಕ ಹಾಗೂ ಸಮಾಜ ಸೇವಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಖಾದ್ರಿ ದರ್ಗಾದ ಹಜರತ್ ಸೈಯದ್ ಷಾ ಹುಸನೋದ್ದಿನ್ ಖಾದ್ರಿ ಉರಫತ್ ನೂರಾನಿ ಬಾಬಾರವರ 19ನೇ ಉರುಸ್, ಕೋಮು ಸಾಮರಸ್ಯ ಕಾರ್ಯಕ್ರಮ ಹಾಗೂ ವಿವಿಧ ಸಮುದಾಯ ಮುಖಂಡರಿಗೆ ಸೋಮವಾರ ರಾತ್ರಿ ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವರೆಲ್ಲರೂ ಒಂದೆಯಾಗಿದ್ದು, […]

Continue Reading

ಹಂಪಿ ಉತ್ಸವ ಯುವ ಕವಿಗೋಷ್ಠಿಗೆ ವಿಜಯಭಾಸ್ಕರರೆಡ್ಡಿ ಆಯ್ಕೆ

ಸೇಡಂ: ವಿಜಯನಗರ ಜಿಲ್ಲೆಯಲ್ಲಿ ಫೆ.28 ರಂದು ನಡೆಯುವ ಪ್ರಖ್ಯಾತ ಹಂಪಿ ಉತ್ಸವದ ಯುವ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕವಿ, ಪತ್ರಕರ್ತ ವಿಜಯಭಾಸ್ಕರರೆಡ್ಡಿ ಅವರು ಆಯ್ಕೆಯಾಗಿದ್ದಾರೆ. ಫೆ.28 ರಿಂದ ಮಾ.2 ವರೆಗೆ ನಡೆಯಲಿರುವ ಹಂಪಿ ಉತ್ಸವದಲ್ಲಿ ಮಾರ್ಚ್ 2 ರಂದು ಬೆಳಿಗ್ಗೆ 10.30 ಕ್ಕೆ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜರುಗಲಿರುವ ಯುವ ಕವಿ ಗೋಷ್ಠಿಯಲ್ಲಿ ವಿಜಯಭಾಸ್ಕರರೆಡ್ಡಿ ತಮ್ಮ ಕವಿತೆ ವಾಚಿಸಲಿದ್ದಾರೆ. ವಿಮರ್ಶಕ ಡಾ.ವೆಂಕಟಗಿರಿ ದಳವಾಯಿ ಉದ್ಘಾಟಿಸಲಿದ್ದಾರೆ, ಸಾಹಿತಿ ಎಸ್.ವಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

Continue Reading

ಪುರಸಭೆ ಅಧ್ಯಕ್ಷ ಸ್ಥಾನ ಬಂಜಾರ ಸಮಾಜಕ್ಕೆ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ

ಚಿತ್ತಾಪುರ: ಪುರಸಭೆಯ ಇತಿಹಾಸದಲ್ಲಿ ಇದುವರೆಗೆ ಬಂಜಾರ ಸಮಾಜಕ್ಕೆ ಅಧ್ಯಕ್ಷರಾಗಲು ಅವಕಾಶ ಸಿಕ್ಕಿಲ್ಲ, ಹೀಗಾಗಿ ಈ ಬಾರಿ ಬೇಬಿಬಾಯಿ ಸುಭಾಷ್ ಜಾಧವ ಅವರಿಗೆ ಪುರಸಭೆ ಅಧ್ಯಕ್ಷರಾಗಲು ಅವಕಾಶ ಮಾಡಿಕೊಡಬೇಕು ಎಂದು ಸಮಾಜದಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸೋಮವಾರ ಭೇಟಿ ಮಾಡಿ ಮನವಿ‌ ಮಾಡಲಾಯಿತು. ಚಿತ್ತಾಪುರ ಪುರಸಭೆ ಇತಿಹಾಸದಲ್ಲಿಯೇ ಇದುವರೆಗೆಬಂಜಾರ ಸಮುದಾಯದವರು ಪುರಸಭೆಅಧ್ಯಕ್ಷರಾಗಿಲ್ಲ, ಆದಕಾರಣ ಈ ಬಾರಿ ನಮ್ಮಸಮಾಜಕ್ಕೆ ಅವಕಾಶ ಮಾಡಿಕೊಡಿ ಎಂದುಬಂಜಾರ ಸಮಾಜದ ಕಾಂಗ್ರೆಸ್ ಪಕ್ಷದ ಮುಖಂಡರುಮನವಿ ಮಾಡಿದರು. […]

Continue Reading

ತಾಂಡಾದ ಯುವಕರು ಕೆಎಎಸ್, ಐಎಎಸ್ ಅಧಿಕಾರಿಗಳಾಗಲಿ: ಸಿದ್ದಲಿಂಗ ಶ್ರೀ

ಸುದ್ದಿ ಸಂಗ್ರಹ ಶಹಾಬಾದ ಸಮಾಜ ಸಂಘಟನೆಯಲ್ಲಿ ವಯಕ್ತಿಕ ಹಿತಾಸಕ್ತಿ, ರಾಜಕೀಯ ರಹಿತವಾದಾಗ ಮಾತ್ರ ಸಮಾಜದ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ತಾಂಡಾದ ಯುವಕರು ಕೆಎಎಸ್, ಐಎಎಸ್ ಅಧಿಕಾರಿಗಳಾದಾಗ ಸಂತ ಸೇವಾಲಾಲ್ ಮಹಾರಾಜರಿಗೆ ಸಂತೃಪ್ತಿಯಾಗುತ್ತದೆ ಎಂದು ರಾವೂರ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ನಗರದ ರೈಲು ನಿಲ್ದಾಣದ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ ಮಹಾರಾಜರ 286ನೇ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ರಾಜಕೀಯ ಮತ್ತು ವೈಯಕ್ತಿಕ ದ್ವೇಷಗಳನ್ನು ಸಮಾಜದ ಹೊರಗೆ ಇಡಬೇಕು. ಸಮಾಜದ ಉನ್ನತಿಗಾಗಿ ದುಡಿಯಬೇಕು ಎಂದರು. […]

Continue Reading

ರಾಷ್ಟ್ರದ ಅಭಿವೃದ್ಧಿಗೆ ಮುದ್ರಣದ ಕೊಡುಗೆ ಅನನ್ಯ

ಕಲಬುರಗಿ: ಐತಿಹಾಸಿಕ, ಭೌಗೋಳಿಕೆ, ಸಾಹಿತ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ವಿಷಯ, ಮಾಹಿತಿ ದೊರೆಯಬೇಕಾದರೆ ಪುಸ್ತಕ ಅಧ್ಯಯನ ಅಗತ್ಯ. ದೇಶದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಒದಗಿಸಿ, ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲು ಸೂಕ್ತ ಮಾಹಿತಿ ಅಗತ್ಯವಾಗಿದೆ. ಮುದ್ರಣ ಶಾಶ್ವತ ದಾಖಲೆಯಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನರೋಣಾ ಗ್ರಾಮದ ಎಸ್.ಡಿ ಮಠಪತಿ ಪ್ರಿಂರ‍್ಸ್ನಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ […]

Continue Reading

ಸುಕ್ಷೇತ್ರಗಳ ದರ್ಶನದಿಂದ ಅಧ್ಯಾತ್ಮಿಕ ಜ್ಞಾನ, ನೆಮ್ಮದಿ ದೊರೆಯಲು ಸಾಧ್ಯ

ಚಿತ್ತಾಪುರ: ದೇಶ ಸುತ್ತು-ಕೋಶ ಓದು ಎಂಬ ಮಾತಿನಂತೆ, ಇತಿಹಾಸ, ಸಂಸ್ಕೃತಿ, ಕಲೆ, ಪರಂಪರೆ ಅರಿಯಲು ಅಧ್ಯಯನ ಮಾಡುವದರ ಜೊತೆಗೆ ಐತಿಹಾಸಿಕ ಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡುವುದರಿಂದ ಆಧ್ಯಾತ್ಮಿಕ ಜ್ಞಾನ ಮತ್ತು ಮನಸಿಗೆ ನೆಮ್ಮದಿ ದೊರೆಯಲು ಸಾಧ್ಯವಿದೆ ಎಂದು ಸಮಾಜ ಸೇವಕ ನರಸಪ್ಪ ಬಿರಾದಾರ ದೇಗಾಂವ ಮತ್ತು ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು. ತಾಲೂಕಿನ ಸುಕ್ಷೇತ್ರ ನಾಲವಾರನ ಕೋರಿಸಿದ್ದೇಶ್ವರ ಮಠಕ್ಕೆ ‘ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿಗೆ ಕೋರಿಸಿದ್ದೇಶ್ವರ […]

Continue Reading