ವಾಡಿ ಭಕ್ತರ ಮೇಲೆ ಪ್ರಯಾಗರಾಜ್ ಪವಿತ್ರ ಜಲದ ಸಿಂಚನ

ಪಟ್ಟಣ

ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಪುಣ್ಯಭೂಮಿ ಪ್ರಯಾಗರಾಜ್’ದ ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ಶಿವಪೂರದ ಶಿವಲಿಂಗ ಮಹಾಸ್ವಾಮಿಗಳು ಭಕ್ತರ ಮೇಲೆ ಸಿಂಪಡಿಸುವ ಮೂಲಕ ಪುಣ್ಯಕ್ಷೇತ್ರದ ವಾತವರಣ ಸೃಷ್ಟಿಸಿದರು.

ಮಹಾಶಿವರಾತ್ರಿ ಪ್ರಯುಕ್ತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ವೀರೇಶ್ವರ ಶರಣರ ಪುರಾಣ ಸಂದರ್ಭವಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಪುರಾಣದ ಪೂರ್ವದಲ್ಲಿ ಪುರಾಣಕಾರ ಶಿವಲಿಂಗ ಮಹಾಸ್ವಾಮಿಗಳು ಪ್ರಯಾಗರಾಜ್’ಗೆ ತೆರಳಿ ಪುಣ್ಯ ಸ್ನಾನ ಮಾಡಿದ ಅಲ್ಲಿನ ಭಕ್ತಿ ವಾತವರಣವನ್ನು ಪುರಾಣದಲ್ಲಿ ಅನಾವರಣ ಗೊಳಿಸಿದರು.

ಪಟ್ಟಣದ ಭಕ್ತರು ಪ್ರಯಾಗರಾಜ್’ದಿಂದ ತಂದಂತಹ ಪವಿತ್ರ ಜಲಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರ ಮೇಲೆ ಬಿಲ್ವಪತ್ರೆ, ವೀಳ್ಯದೆಲೆ ಮೂಲಕ ಮಂತ್ರಾಕ್ಷರದಿಂದ ಶ್ರೀಗಳು ಸಿಂಪಡಿಸಿದರು.
ಭಕ್ತರ ಹರ್ಷೋದ್ಗಾರದಿಂದ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಂತೆ ಸಂಭ್ರಮಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ವೀರಶೈವ ಸಮಾಜದ ಅಧ್ಯಕ್ಷ ಶರಣಗೌಡ ಚಾಮನೂರ, ಸಿದ್ದಣ್ಣ ಕಲ್ಲಶೆಟ್ಟಿ, ಅಣ್ಣಾರಾವ ಪಸಾರ, ಭೀಮಶಾ ಜೀರೋಳ್ಳಿ, ಪರುತಪ್ಪ ಕರದಳ್ಳಿ, ಸಿದ್ಧಲಿಂಗ ಬಾಳಿ,
ಮಲ್ಲಣ್ಣ ಗೌಡ ಗೌಡಪ್ಪನೂರ, ಸಿದ್ರಾಮಪ್ಪ ಮಹಾಗಾಂವ, ಬಸವರಾಜ ಶೆಟಗಾರ, ಶಿವಶಂಕರ ಕಾಶೆಟ್ಟಿ, ಬಸವರಾಜ ಕಿರಣಗಿ, ವೀರಣ್ಣಗೌಡ ಮೆಲಸಿಮಿ,
ದೊಪದ್, ಚಂದ್ರಶೇಖರ ಪಾಟೀಲ ಬಣಮಗಿ ಚಂದ್ರಶೇಖರ ಗೊಳೆದ್, ಸಿದ್ರಾಮ ಮಹಗಾಂವ,‌
ರಾಜಶೇಖರ ದೂಪದ್ , ರವಿ ಸಿಂದಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸಂಚಾಲಕರಾದ ವೀರಣ್ಣ ಯಾರಿ ಸ್ವಾಗತಿಸಿ, ನಿರೂಪಿಸಿದರು.

Leave a Reply

Your email address will not be published. Required fields are marked *