ಸರ್ ಸಿ.ವಿ ರಾಮನ್ ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ಪ್ರತೀಕ: ಸುಗುಣಾ ಕೊಳಕೂರ
ಚಿತ್ತಾಪುರ: ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಸರ್ ಸಿ.ವಿ ರಾಮನ್. ಇವರು ಪ್ರತಿಯೊಬ್ಬ ಭಾರತೀಯರ ಹೆಮ್ಮೆ ಎಂದು ವಿಜ್ಞಾನ ಶಿಕ್ಷಕಿ ಸುಗುಣಾ ಕೊಳಕೂರ ಹೇಳಿದರು. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 28 ಫೆಬ್ರುವರಿ 1928 ರಂದು ಭೌತಶಾಸ್ತ್ರದ ಅತಿದೊಡ್ಡ ಆವಿಷ್ಕಾರವಾದ ರಾಮನ್ ಪರಿಣಾಮ ಜಗತ್ತಿಗೆ ಪರಿಚಯಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. […]
Continue Reading