ರೈತಪರ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು
ಕಲ್ಬುರ್ಗಿ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾದ ಪ್ರದೇಶ 3.07 ಲಕ್ಷ ಎಕ್ಟರ್ ಹಾಳಾಗಿದ್ದು, ಮೊದಲ ಕಂತಿನಲ್ಲಿ ಮುಂಗಾರಿನ ಬೆಳಗೆ ಪರಿಹಾರವಾಗಿ 268 ಕೋಟಿ ರೂಪಾಯಿಗಳು ಎರಡನೇ ಕಂತಿನಲ್ಲಿ ಸುಮಾರು 250 ಕೋಟಿ ರೂಪಾಯಿ ಮಂಜೂರು ಮಾಡಿಸಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆಜಿ ರವರಿಗೆ ಸಮಸ್ತ ಜಿಲ್ಲೆಯ ರೈತರ ಪರವಾಗಿ ಕಾಂಗ್ರೆಸ್ ಸರ್ಕಾರದ ರೈತರ ಬಗೆಗಿನ ಸತ್ಕಾಳಜಿಗೆ ಅಭಿನಂದನೆಗಳು.
ನಮ್ಮ ಚಿತಾಪುರ ತಾಲೂಕಿನಲ್ಲಿ 23.225 ಹೆಕ್ಟರ್ ಬಳೆ ಹಾನಿಯಾಗಿದ್ದು ಮೊದಲ ಕಂತಿನಲ್ಲಿ 20.58 ಕೋಟಿ ಬಿಡುಗಡೆಯಾಗಿದ್ದು ಕನಿಷ್ಠ ಒಂದು ಹೇಕ್ಟರ್ ಬೆಳೆ ಹಾಳಾದ ಪ್ರತಿ ರೈತರ ಖಾತೆಗೆ 8,500 ರೂಪಾಯಿ ಹತ್ತು ದಿನಗಳಲ್ಲಿ ರೈತಾಪಿ ಗಳ ಖಾತೆಗೆ ಜಮೆ ಆಗಲಿದೆ. ಎರಡನೆಯ ಕಂತಾಗಿ ಇನ್ನೂ ಹೆಚ್ಚುವರಿ ಹಣ ಬಿಡುಗಡೆ ಆಗಲಿದೆ. ಜಿಲ್ಲೆಯಲ್ಲಿ ಅತಿಯಾದ ಮಳೆ ಹಾನಿಯಿಂದ ಸಂತ್ರಸ್ತ ಪ್ರದೇಶಕ್ಕೆ ಖುದ್ದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕಲ್ಬುರ್ಗಿ ಉಸ್ತುವಾರಿ ಮಂತ್ರಿ ಪ್ರಿಯಾಂಕ ಖರ್ಗೆ ಅವರು ವಿಮಾನಯಾನ ಮೂಲಕ ಸಮೀಕ್ಷೆ ಕಾರ್ಯ ಮಾಡಿರುವುದು ಈ ಹಿನ್ನೆಲೆಯಲ್ಲಿ ರೈತರ ಹಾನಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಸರ್ಕಾರ ಆ ನಿಟ್ಟಿನಲ್ಲಿ ಪರಿಹಾರ ವನ್ನು ಬಿಡುಗಡೆಗೊಳಿಸಿರುವದು ಈ ಭಾಗಕ್ಕೆ ಅದರಲ್ಲೂ ಈ ಭಾಗದ ರೈತರ ಮೊಗದಲ್ಲಿ ಸಂತಸ ತಂದಂತಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಸದಸ್ಯರಾದ ಶರಣು ಡೋಣಗಾಂವ ಅವರು ಹರ್ಷ ವ್ಯಕ್ತಪಡಿಸಿದರು.