ಕಲಬುರಗಿ: ಐತಿಹಾಸಿಕ, ಭೌಗೋಳಿಕೆ, ಸಾಹಿತ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ವಿಷಯ, ಮಾಹಿತಿ ದೊರೆಯಬೇಕಾದರೆ ಪುಸ್ತಕ ಅಧ್ಯಯನ ಅಗತ್ಯ. ದೇಶದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಒದಗಿಸಿ, ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲು ಸೂಕ್ತ ಮಾಹಿತಿ ಅಗತ್ಯವಾಗಿದೆ. ಮುದ್ರಣ ಶಾಶ್ವತ ದಾಖಲೆಯಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನರೋಣಾ ಗ್ರಾಮದ ಎಸ್.ಡಿ ಮಠಪತಿ ಪ್ರಿಂರ‍್ಸ್ನಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ಅಂತರಾಷ್ಟ್ರೀಯ ಮುದ್ರಕರ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಸಮಾಜ ಸೇವಕ ದಯಾನಂದ ಆರ್ ಮಠಪತಿ ಮಾತನಾಡಿ, ಜೋನ್ಸ್ ಗುಟೆನಬರ್ಗ್ ಅವರು ಮುದ್ರಣ ಯಂತ್ರ ಸಂಶೋಧನೆ ಮಾಡಿದ್ದಾರೆ. ಹಿಂದಿನ ಕಾಲದಲ್ಲಿ ಮುದ್ರಣ ಕಾರ್ಯ ಬಹಳ ಕಷ್ಟಕರವಾಗಿತ್ತು. ಪ್ರತಿಯೊಂದು ಅಕ್ಷರ ಜೋಡಿಸಿ ಮುದ್ರಣ ಮಾಡಲು ಸಾಕ್ಷಷ್ಟು ಸಮಯ, ತಾಳ್ಮೆ, ಪರಿಶ್ರಮ ಬೇಕಾಗುತ್ತಿತ್ತು. ಆದರೆ ಈಗ ಕಂಪ್ಯೂಟರ ವ್ಯಾಪಕ ಬಳಕೆ, ಡಿಜಿಟಲ್ ಕ್ರಾಂತಿಯಿಂದಾಗಿ ಮುದ್ರಣ ಕಾರ್ಯ ಸರಳ ಮತ್ತು ವೇಗವಾಗಿದೆ. ಪ್ರಸ್ತುತ ಸಂದರ್ಭಗಳಲ್ಲಿ ಇದು ಅನಿವಾರ್ಯ ಕೂಡಾ ಹೌದು. ಮದ್ರಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವ ಬಳಗದ ಸೇವೆ ಅಮೋಘವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಚಿಂತಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಮಹಾನಂದ ಡಿ.ಮಠಪತಿ, ಜಗದೀಶ್ ಮಠಪತಿ, ಭಾಗ್ಯಶ್ರೀ ಎಸ್.ಮಠಪತಿ, ಶಾಂಭವಿ ಎಸ್ ಮಠಪತಿ ಸೇರಿದಂತೆ ಅನೇಕರು ಇದ್ದರು.