ಹಂಪಿ ಉತ್ಸವ ಯುವ ಕವಿಗೋಷ್ಠಿಗೆ ವಿಜಯಭಾಸ್ಕರರೆಡ್ಡಿ ಆಯ್ಕೆ

ತಾಲೂಕು

ಸೇಡಂ: ವಿಜಯನಗರ ಜಿಲ್ಲೆಯಲ್ಲಿ ಫೆ.28 ರಂದು ನಡೆಯುವ ಪ್ರಖ್ಯಾತ ಹಂಪಿ ಉತ್ಸವದ ಯುವ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕವಿ, ಪತ್ರಕರ್ತ ವಿಜಯಭಾಸ್ಕರರೆಡ್ಡಿ ಅವರು ಆಯ್ಕೆಯಾಗಿದ್ದಾರೆ.

ಫೆ.28 ರಿಂದ ಮಾ.2 ವರೆಗೆ ನಡೆಯಲಿರುವ ಹಂಪಿ ಉತ್ಸವದಲ್ಲಿ ಮಾರ್ಚ್ 2 ರಂದು ಬೆಳಿಗ್ಗೆ 10.30 ಕ್ಕೆ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜರುಗಲಿರುವ ಯುವ ಕವಿ ಗೋಷ್ಠಿಯಲ್ಲಿ ವಿಜಯಭಾಸ್ಕರರೆಡ್ಡಿ ತಮ್ಮ ಕವಿತೆ ವಾಚಿಸಲಿದ್ದಾರೆ. ವಿಮರ್ಶಕ ಡಾ.ವೆಂಕಟಗಿರಿ ದಳವಾಯಿ ಉದ್ಘಾಟಿಸಲಿದ್ದಾರೆ, ಸಾಹಿತಿ ಎಸ್.ವಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

Your email address will not be published. Required fields are marked *