ತಾಂಡಾದ ಯುವಕರು ಕೆಎಎಸ್, ಐಎಎಸ್ ಅಧಿಕಾರಿಗಳಾಗಲಿ: ಸಿದ್ದಲಿಂಗ ಶ್ರೀ

ತಾಲೂಕು

ಸುದ್ದಿ ಸಂಗ್ರಹ ಶಹಾಬಾದ

ಸಮಾಜ ಸಂಘಟನೆಯಲ್ಲಿ ವಯಕ್ತಿಕ ಹಿತಾಸಕ್ತಿ, ರಾಜಕೀಯ ರಹಿತವಾದಾಗ ಮಾತ್ರ ಸಮಾಜದ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ತಾಂಡಾದ ಯುವಕರು ಕೆಎಎಸ್, ಐಎಎಸ್ ಅಧಿಕಾರಿಗಳಾದಾಗ ಸಂತ ಸೇವಾಲಾಲ್ ಮಹಾರಾಜರಿಗೆ ಸಂತೃಪ್ತಿಯಾಗುತ್ತದೆ ಎಂದು ರಾವೂರ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ನಗರದ ರೈಲು ನಿಲ್ದಾಣದ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ ಮಹಾರಾಜರ 286ನೇ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ರಾಜಕೀಯ ಮತ್ತು ವೈಯಕ್ತಿಕ ದ್ವೇಷಗಳನ್ನು ಸಮಾಜದ ಹೊರಗೆ ಇಡಬೇಕು. ಸಮಾಜದ ಉನ್ನತಿಗಾಗಿ ದುಡಿಯಬೇಕು ಎಂದರು.

ಸದ್ಗುರು ಸೇವಾಲಾಲ ಬಂಜಾರಾ ಶಕ್ತಿಪೀಠ ಗೊಬ್ಬುರವಾಡಿಯ ಬಳಿರಾಮ ಮಹಾರಾಜರು ಮಾತನಾಡಿ, ಪಂಚ ವರ್ಣಗಳ ಪೂಜೆ ಮಾಡುತ್ತ, ಪ್ರಕೃತಿ ಮತ್ತು ಅರಣ್ಯ ರಕ್ಷಣೆಯಿಂದ ಮನುಕುಲ ಉಳಿಯಲು ಸಾಧ್ಯ ಎಂದು ಸೇವಾಲಾಲ ಮಹಾರಾಜರು ಹೇಳಿರುವ ಭವಿಷ್ಯದ ಮಾತುಗಳು ಇಂದು ಸತ್ಯವಾಗುತ್ತಿವೆ ಎಂದರು.

ಉಪನ್ಯಾಸ ನೀಡದ ಬಾಬು ಜಾಧವ ಮಾತನಾಡಿ, 17ನೇ ಶತಮಾನದಲ್ಲಿ ಸಂತ ಸೇವಾಲಾಲರು ಸುಶಿಕ್ಷಿತ ಸಮಾಜ ಗೌರವಕ್ಕೆ ಪಾತ್ರರಾಗುತ್ತಾರೆ, ಅನ್ನಕ್ಕೆ ಕೊರತೆ ಇರುವದಿಲ್ಲ ಎಂದು ಪ್ರತಿಪಾದಿಸಿದ್ದು, ಬಂಜಾರ ಸಮಾಜದ‌ ಕಲೆ, ಸಂಸ್ಕೃತಿಯನ್ನು ಲಿಪಿ‌ ಇಲ್ಲದೆ ಇದ್ದರು, ಇಲ್ಲಿಯವರೆಗೆ ಉಳಿದುಕೊಂಡು ಬಂದಿರುವದು ಸೇವಾಲಾಲ್ ಮಹಾರಾಜರ ದೂರದೃಷ್ಠಿ ಕಾರಣವಾಗಿದೆ ಎಂದರು.

ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿ.ಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಸಮಿತಿಯ ಗೌರವ ಅಧ್ಯಕ್ಷ ನಾಮದೇವ ರಾಠೋಡ ಮಾತನಾಡಿದರು. ಬಾಬು ಎಂ.ಜಾಧವ್ ಉಪನ್ಯಾಸ ನೀಡಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ತಹಸೀಲ್ದಾರ್ ಜಗದೀಶ ಚೌರ
ಉದ್ಘಾಟಿಸಿದರು.ಕುಮಾರ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.

ಮುಗಳನಾಗಾಂವ ಸಂಸ್ಥಾನ ಮಠದ ಜೇಮ್‌ಸಿಂಗ್ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಿಐ ನಟರಾಜ ಲಾಡೆ, ಜಿ.ಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಸೈನಿಕ ರಾಠೋಡ, ಪ್ರಮುಖರಾದ ಡಾ.ಎಂ.ಎ ರಶೀದ, ಕೀಶನ್ ನಾಯಕ, ಸುರೇಶ ನಾಯಕ, ದಿಲೀಪ ಚವ್ಹಾಣ, ನರಸಿಂಗ್ ರಾಠೋಡ, ದೇವರಾಜ ರಾಠೋಡ, ವಿಜಯಕುಮಾರ ಮುಟ್ಟತ್ತಿ, ಮೃತ್ಯುಂಜಯ ಸ್ವಾಮಿ ಹಿರೇಮಠ, ನಿಂಗಣ್ಣ ಪೂಜಾರಿ, ಜಗದೇವ ಸುಬೇದಾರ, ದಶರಥ ಕೋಟನೂರ, ವಿಕ್ರಮ, ಸೂರ್ಯಕಾಂತ ಕೋಬಾಳ, ಹಾಶಮ್ ಖಾನ್, ಸಾಹೇಬಗೌಡ ಬೊಗುಂಡಿ, ಶರಣು ಪಗಲಾಪುರ, ನಾರಾಯಣ ರಾಠೋಡ, ಮಾಣಿಕಗೌಡ ಪಾಟೀಲ, ರಾಜೇಶ ಯನಗುಂಟಿಕರ್, ಹಣಮಂತ ಪವಾರ ಸೇರಿದಂತೆ ಅನೇಕರು ಇದ್ದರು,

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕುಮಾರ್ ಎನ್ ಚವ್ಹಾಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಚಂದು ಜಾಧವ್ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ ಟಿ.ಚವ್ಹಾಣ ವಂದಿಸಿದರು.

ಮೆರವಣಿಗೆ: ನಗರದ ರೈಲು ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಸೇವಾಲಾಲ ಮಹಾರಾಜರ ಮೂರ್ತಿ ಹಾಗೂ ವಿವಿಧ ಸಮಾಜದ ಮಹನೀಯರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.

Leave a Reply

Your email address will not be published. Required fields are marked *