ಶುದ್ಧವಾಗಿ ಮಾತನಾಡಲು, ಬರೆಯಲು, ಓದಲು ವ್ಯಾಕರಣ ಅಗತ್ಯ

ಕಲಬುರಗಿ: ಯಾವುದೆ ಒಂದು ಭಾಷೆಯ ಜೀವಂತಿಗೆಗೆ, ಬೆಳವಣಿಗೆಯಾಗಲು, ಶುದ್ಧವಾಗಿ ಮಾತನಾಡಲು, ಬರೆಯಲು, ಓದಲು ವ್ಯಾಕರಣ ಅಗತ್ಯ. ಇದು ಭಾಷೆಗೆ ಅಲಂಕಾರ, ಮೆರಗು ತರುತ್ತದೆ ಎಂದು ಇಂಗ್ಲೀಷ್ ಶಿಕ್ಷಕ ದತ್ತು ಹಡಪದ ಹೇಳಿದರು. ನಗರದ ಆಳಂದ ರಸ್ತೆಯ, ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ವ್ಯಾಕರಣ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ವ್ಯಾಕರಣವು ಭಾಷೆಯ ಬೆಳವಣಿಗೆಗೆ ಸಹಾಯಕವಾಗಿದೆ. ಉತ್ತಮ […]

Continue Reading

ಸ್ಥೂಲಕಾಯದಿಂದ ಅನೇಕ ಕಾಯಿಲೆಗಳು ಬರಲು ಸಾಧ್ಯ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ದೈಹಿಕ ಶ್ರಮ ಇಲ್ಲದಿರುವಿಕೆ, ಫಾಸ್ಟ್ ಪುಡ್, ಎಣ್ಣೆಯಲ್ಲಿ ಕರಿದ, ಹುರಿದ ಆಹಾರದ ಸೇವೆನ, ಒತ್ತಡ ಸೇರಿದಂತೆ ವಿವಿಧ ಕಾರಣಗಳಿಂದ ಬೊಜ್ಜು, ಸ್ಥೂಲಕಾಯ ಉಂಟಾಗುತ್ತದೆ. ಇದರಿಂದ ಬಿಪಿ, ಮಧುಮೇಹ, ಹೃದಯಘಾತ ಸೇರಿದಂತೆ ಇನ್ನಿತರರ ಕಾಯಿಲೆಗಳು ಬರುತ್ತಿವೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಮಂಗಳವಾರ ಜರುಗಿದ ‘ವಿಶ್ವ ಸ್ಥೂಲಕಾಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಶ್ರಮದ ಕೆಲಸ […]

Continue Reading

ಪಂಡಿತ ಡಾ.ಪುಟ್ಟರಾಜ ಗವಾಯಿಗಳ 111ನೇ ಜನ್ಮದಿನೋತ್ಸವ 

ಕಲಬುರಗಿ: ನಗರದ ಶಹಾಬಜಾರ ನಾಕಾ ಸಮೀಪವಿರುವ ಸುರಚಿತ್ರ ಮೆಲೋಡಿಸ್,  ಕರೊಕೆ ಸಂಗೀತ ತರಬೇತಿ ಕೇಂದ್ರ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಪಂಡಿತ ಡಾ.ಪುಟ್ಟರಾಜ ಗವಾಯಿಗಳ 111ನೇ ಜನ್ಮದಿನೋತ್ಸವ ಜರುಗಿತು. ಖ್ಯಾತ ಗಾಯಕಿ ಚಿತ್ರಲೇಖಾ ಬಿ ಗೊಲ್ಡಸ್ಮಿತ್ ಅವರು  ಪುಷ್ಪ ಹಾಗೂ ಸ್ವರ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ,  ಸದಸ್ಯರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ನಾಗೇಶ ತಿಮಾಜಿ ಬೆಳಮಗಿ, ಶ್ರೀಮಂತ ಕೋಟನೂರ, ಬಸವರಾಜ ಮುಲಗೆ, ಹಣಮಂತ ಮೇದಾ, ಯಲ್ಲಪ್ಪ ಬಿ.ಕಡಕೋಳ, […]

Continue Reading

ಅಳಿವಿನಂಚಿನ ವನ್ಯಜೀವಿಗಳ ಉಳಿಸುವ ಕಾರ್ಯವಾಗಲಿ: ಎಚ್.ಬಿ ಪಾಟೀಲ

ಕಲಬುರಗಿ: ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯವನ್ನು ನಾಶಮಾಡಿ ಅಲ್ಲಿನ ಅನೇಕ ವನ್ಯಜೀವಿಗಳನ್ನು ಬೇಟೆಯಾಡಿ ನಾಶಮಾಡುತ್ತಿದ್ದಾನೆ. ಇದರಿಂದ ಕೆಲವು ಸಂತತಿ ನಾಶಹೊಂದಿದ್ದು, ಮತ್ತೆ ಕೆಲವು ಅಳಿವುನಂಚಿನಲ್ಲಿವೆ. ಅರಣ್ಯ ಸಂಪತ್ತು, ಪ್ರಾಣಿ ಸಂಕುಲದ ರಕ್ಷಣೆ ಅಗತ್ಯವಾಗಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ವನ್ಯಜೀವಿ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಪರಿಸರದ ಜೈವಿಕ ವ್ಯವಸ್ಥೆಯ ಸರಪಣಿಯಲ್ಲಿ ಒಂದು ಯಾವುದೆ ಜೀವಿಯ […]

Continue Reading

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ದೇವಿಂದ್ರರೆಡ್ಡಿ ದುಗನೂರ ಆಯ್ಕೆ

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್ -1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಘಟಕದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವಿಂದ್ರರೆಡ್ಡಿ ದುಗನೂರ ಆಯ್ಕೆಯಾಗಿದ್ದಾರೆ ಎಂದು ಚಿತ್ತಾಪುರ ಪ್ರಾದೇಶಿಕ ಕ್ಷೇತ್ರ ಚುನಾವಣಾಧಿಕಾರಿ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳು ಆಯ್ಕೆ ದಿಗ್ಗಾಂವ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ದೇವಿಂದ್ರಪ್ಪ ಎನ್ ದೊರೆ (ಉಪಾಧ್ಯಕ್ಷರು), ಅಲ್ಲೂರು(ಬಿ) ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ವೆಂಕಟಪ್ಪ (ಪ್ರಧಾನ ಕಾರ್ಯದರ್ಶಿ), ಚಿತ್ತಾಪುರ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ರಮೇಶ ಸಾಲೂಟಗಿ (ಖಜಾಂಚಿ), ಕೊಂಚೂರ […]

Continue Reading

ಕೈಗೆಟುವ ಬೆಲೆಯಲ್ಲಿ ಸಿಗುತ್ತಂತೆ ಜಿಯೋ EV ಸೈಕಲ್‌

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಜಿಯೋ, ಈಗ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಬಟ್ಟೆಯಿಂದ ಪೆಟ್ರೋಲ್ ವರೆಗೆ ಜಿಯೋ ಬ್ರ್ಯಾಂಡ್ ಇಲ್ಲದ ಕ್ಷೇತ್ರವೆ ಇಲ್ಲ. ಈಗ ಜಿಯೋ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಷೇತ್ರಕ್ಕೂ ಪ್ರವೇಶಿಸಲು ಯೋಜಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಿಲಯನ್ಸ್ ಜಿಯೋ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಪ್ರವೇಶಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ, ಈ ವರ್ಷದ ಅಂತ್ಯದವರೆಗೆ ಜಿಯೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಇ-ಬೈಕ್ ದೈನಂದಿನ ಪ್ರಯಾಣಕ್ಕೆ ತುಂಬಾ ಉಪಯುಕ್ತವಾಗಿದೆ […]

Continue Reading

ಅಂಬೇಡ್ಕರ್ ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ಶಂಕರ ಅಳ್ಳೊಳ್ಳಿ ಆಯ್ಕೆ

ಸುದ್ದಿ ಸಂಗ್ರಹ ಶಹಾಬಾದಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾಗಿ ಶಂಕರ ಅಳ್ಳೊಳ್ಳಿ ಅವರನ್ನು ಆಯ್ಕೆ ಮಾಡಲಾಯಿತು. ಪಟ್ಟಣದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜಯಂತೋತ್ಸವ ಸಮಿತಿಯ 2023-24ನೇ ಸಾಲಿನ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು ಮತ್ತು ಹಿರಿಯ ಮುಖಂಡ ಸುರೇಶ ಮೆಂಗನ್ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ನಾಗರಾಜ ಸಿಂಘೆ, ಮುಖಂಡರಾದ ಕೃಷ್ಣಪ್ಪ […]

Continue Reading

ರೈತ ಕೃಷಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ವಿಧಾನಸೌಧ ಚಲೋ

ಸುದ್ದಿ ಸಂಗ್ರಹ ಶಹಾಬಾದ ಸರ್ಕಾರ ತರುತ್ತಿರುವ ರೈತ ಕೃಷಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರೈತ ಸಂಘಟನೆಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಘಟನೆಯು ಮನವಿ ಪತ್ರ ಸಲ್ಲಿಸಲಾಗಿದೆೆ. ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ದಿನಕ್ಕೆ 600 ರೂ 200 ದಿನಗಳಿಗೆ ಕೆಲಸ ಕೊಡಬೇಕುರು, ಬೇಸಿಗೆ ಕಾಲದಲ್ಲಿ ನೀರಿನ ವ್ಯವಸ್ಥೆ, ತಂಗಲು ನೆರಳಿನ ವ್ಯವಸ್ಥೆ ಮಾಡಬೇಕು ಮತ್ತು ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಕೊಡಬೇಕು ಎಂದು ಎಐಕೆಕೆಎಮ್’ಎಸ್ ಜಿಲ್ಲಾಧ್ಯಕ್ಷ ಕಾಮ್ರೆಡ್ ಗಣಪತರಾವ್ ಕೆ ಮಾನೆ ಹೇಳಿದರು. ನಗರದ […]

Continue Reading

ಪರೋಪಕಾರ ಕಾರ್ಯ ಕೈಗೊಳ್ಳಿ: ತೆಂಗಳಿ ಶ್ರೀ

ಚಿತ್ತಾಪುರ: ಭಗವಂತ ಕರುಣಿಸಿದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಪ್ರತಿಯೊಬ್ಬರೂ ಕೈಲಾದಷ್ಟು ಸಮಾಜೋಪಯೋಗಿ, ಪರೋಪಕಾರಿ ಕಾರ್ಯ ಮಾಡಬೇಕು’ ಎಂದು ತೆಂಗಳಿ – ಮಂಗಲಗಿಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು. ಸಮೀಪದ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಶುಕ್ರವಾರ ರಾತ್ರಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆತ್ತವರ ಸೇವೆ ಮಾಡುವುದು ದೇವರ ಪೂಜೆಗಿಂತ ಶ್ರೇಷ್ಠ ಎಂದರು. ಅನಿಶ್ಚಿತ ಬದುಕಿನಲ್ಲಿ ಶಾಶ್ವತವಾಗಿ ಉಳಿಯಲು ಎಲ್ಲರೂ ಸದ್ಗುಣ, ಸತ್ಯ, ಪ್ರಾಮಾಣಿಕತೆ, ಸಮಾನ […]

Continue Reading

ದೇಶದ ನಾಗರಿಕರ ರಕ್ಷಣೆ ಅಗತ್ಯ

ಕಲಬುರಗಿ: ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡಬೇಕು. ಭೂಕಂಪ, ನೆರೆ ಹಾವಳಿ, ಸಾಂಕ್ರಾಮಿಕ ಕಾಯಿಲೆಗಳ ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಚನ್ನಬಸಪ್ಪ ಸಿ ಗಾರಂಪಳ್ಳಿ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ನಾಗರಿಕ ರಕ್ಷಣೆ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೇಶವಾಸಿಗಳು ಕಷ್ಟದ ಸ್ಥಿತಿಯಲ್ಲಿ ಸರ್ಕಾರದ ನೆರವಿನ ಜೊತೆ ಸಹಾಯ ಹಸ್ತ ಚಾಚಬೇಕು ಎಂದರು. […]

Continue Reading