ರೈತ ಕೃಷಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ವಿಧಾನಸೌಧ ಚಲೋ

ಪಟ್ಟಣ

ಸುದ್ದಿ ಸಂಗ್ರಹ ಶಹಾಬಾದ

ಸರ್ಕಾರ ತರುತ್ತಿರುವ ರೈತ ಕೃಷಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರೈತ ಸಂಘಟನೆಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಘಟನೆಯು ಮನವಿ ಪತ್ರ ಸಲ್ಲಿಸಲಾಗಿದೆೆ.

ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ದಿನಕ್ಕೆ 600 ರೂ 200 ದಿನಗಳಿಗೆ ಕೆಲಸ ಕೊಡಬೇಕುರು, ಬೇಸಿಗೆ ಕಾಲದಲ್ಲಿ ನೀರಿನ ವ್ಯವಸ್ಥೆ, ತಂಗಲು ನೆರಳಿನ ವ್ಯವಸ್ಥೆ ಮಾಡಬೇಕು ಮತ್ತು ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಕೊಡಬೇಕು ಎಂದು ಎಐಕೆಕೆಎಮ್’ಎಸ್ ಜಿಲ್ಲಾಧ್ಯಕ್ಷ ಕಾಮ್ರೆಡ್ ಗಣಪತರಾವ್ ಕೆ ಮಾನೆ ಹೇಳಿದರು.

ನಗರದ ಭಂಕೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರ ಮಧ್ಯೆ ಎಐಕೆಕೆಎಮ್’ಎಸ್ (ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ) ಮಾರ್ಚ್ 10 ರಂದು ನಡೆಯುವ ರೈತ ಕಾರ್ಮಿಕರ ರಾಜ್ಯಮಟ್ಟದ ವಿಧಾನಸೌಧ ಚಲೋ ಹೋರಾಟ ಕುರಿತು ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ರೈತರಿಗೆ ಸುಸ್ಥಿರ ಬದುಕು ಕೊಡುತ್ತೆವೆ, ದುಪ್ಪಟ್ಟು ಆದಾಯ ಮಾಡುತ್ತೆವೆ ಎಂದು ಭರವಸೆಯ ಮಳೆ ಸುರಿಸಿದ ಸರ್ಕಾರದ ಹೊಸ ಕೃಷಿ ನೀತಿಗಳನ್ನು ತಂದು ರೈತರ ಬದುಕು ಬರಡಾಗಿಸಿದೆ. ಹೀಗಾಗಿ ಒಂದು ಕಡೆ ರೈತರ ಆತ್ಮಹತ್ಯೆಗೆ ಹೊಗುತ್ತಿದ್ದಾರೆ ಇನ್ನೊಂದು ಕಡೆ ಬೀಜ, ಗೊಬ್ಬರ, ಕೀಟನಾಶಕಗಳಂತಹ ಕೃಷಿ ಒಳಸುರಿಗಳ ಬೆಲೆ ಗಗನಕ್ಕೆರಿದೆ ಮತ್ತು ರೈತ ಬೆಳೆಯುವ ಬೆಳೆಯ ಬೆಲೆ ಪಾತಾಳ ಸೇರುತ್ತಿದೆ. ರೈತರ ಬೆನ್ನೆಲುಬನ್ನು ಮುರಿಯುತ್ತಿದೆ ಇಂದಿನ ಸರ್ಕಾರ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಸಮಿತಿಯ ಮುಖಂಡರಾದ ಭಾಗಣ್ಣ ಬುಕ್ಕಾ, ನೀಲಕಂಠ ಹುಲಿ, ಸ್ವಾಮಿ, ಸಿದ್ದಮ್ಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *