ಅಂಬೇಡ್ಕರ್ ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ಶಂಕರ ಅಳ್ಳೊಳ್ಳಿ ಆಯ್ಕೆ

ಪಟ್ಟಣ

ಸುದ್ದಿ ಸಂಗ್ರಹ ಶಹಾಬಾದ
ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾಗಿ ಶಂಕರ ಅಳ್ಳೊಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜಯಂತೋತ್ಸವ ಸಮಿತಿಯ 2023-24ನೇ ಸಾಲಿನ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು ಮತ್ತು ಹಿರಿಯ ಮುಖಂಡ ಸುರೇಶ ಮೆಂಗನ್ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ನಾಗರಾಜ ಸಿಂಘೆ, ಮುಖಂಡರಾದ ಕೃಷ್ಣಪ್ಪ ಕರಣಿಕ, ಸಮಾಜ ಸೇವಕ ವಿಜಯಕುಮಾರ ಹಳ್ಳಿ, ಮಹಾದೇವ ತರನಳ್ಳಿ, ರಾಜೇಶ ಯನಗುಂಟಿಕರ್, ಭರತ ಧನ್ನಾ, ಭೀಮಾಶಂಕರ ಕಾಂಬಳೆ, ಬಸವರಾಜ ಮಯೂರ, ಪಿ.ಎಸ್ ಮೇತ್ರಿ, ಶಿವಶಾಲ ಪಟ್ಟಣಕರ್, ಮಲ್ಲಣ್ಣ ಮಸ್ಕಿ, ಸುಭಾಷ ಸಾಕ್ರೆ, ನರಸಿಂಹಲು ರಾಯಚೂರಕರ್, ಸತೀಶ ಕೋಬಾಳ, ವಸಂತ ಕಾಂಬಳೆ, ಸಂದೀಪ ಕಟ್ಟಿ, ಮೋಹನ ಹಳ್ಳಿ, ಸ್ನೇಹಿಲ್ ಜಾಯಿ, ಜೈ ಭೀಮ, ಮಚ್ಛಿಂದರ ಜೋಗಿ, ಮನೋಹರ ಕೊಳ್ಳೂರ, ಪುನೀತ ಹಳ್ಳಿ, ಸುನೀಲ ಮೆಂಗನ್, ರಾಕೇಶ ಜಾಯಿ, ಮಲ್ಲಿಕಾರ್ಜುನ ದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಡಾ.ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *