ಸ್ಥೂಲಕಾಯದಿಂದ ಅನೇಕ ಕಾಯಿಲೆಗಳು ಬರಲು ಸಾಧ್ಯ: ಡಾ.ಅನುಪಮಾ ಕೇಶ್ವಾರ

ಜಿಲ್ಲೆ

ಕಲಬುರಗಿ: ದೈಹಿಕ ಶ್ರಮ ಇಲ್ಲದಿರುವಿಕೆ, ಫಾಸ್ಟ್ ಪುಡ್, ಎಣ್ಣೆಯಲ್ಲಿ ಕರಿದ, ಹುರಿದ ಆಹಾರದ ಸೇವೆನ, ಒತ್ತಡ ಸೇರಿದಂತೆ ವಿವಿಧ ಕಾರಣಗಳಿಂದ ಬೊಜ್ಜು, ಸ್ಥೂಲಕಾಯ ಉಂಟಾಗುತ್ತದೆ. ಇದರಿಂದ ಬಿಪಿ, ಮಧುಮೇಹ, ಹೃದಯಘಾತ ಸೇರಿದಂತೆ ಇನ್ನಿತರರ ಕಾಯಿಲೆಗಳು ಬರುತ್ತಿವೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.

ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಮಂಗಳವಾರ ಜರುಗಿದ ‘ವಿಶ್ವ ಸ್ಥೂಲಕಾಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಶ್ರಮದ ಕೆಲಸ ಅಥವಾ ವ್ಯಾಯಾಮ, ಕಸರತ್ತು ಮಾಡಬೇಕು. ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರ ಸೇವಿಸಬೇಕು. ತರಕಾರಿ, ಸಮತೋಲಿತ ಆಹಾರದ ಸೇವನೆ ಅಗತ್ಯ. ಹೆಚ್ಚಿನ ಆಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬು ಬೊಜ್ಜು, ಸ್ಥೂಲಕಾಯ ಬರುತ್ತದೆ. ಆದ್ದರಿಂದ ಒಂದೇ ಸಲಕ್ಕೆ ಹೊಟ್ಟೆ ಭಾರವೆನಿಸುವಂತೆ ಆಹಾರ ಸೇವಿಸುವ ಬದಲು, ಸ್ವಲ್ಪ ಪ್ರಮಾಣ ಅಥವಾ ದೇಹದ ಅಗತ್ಯಕ್ಕೆ ತಕ್ಕಂತೆ ಆಹಾರದ ಸೇವನೆ ಮಾಡುವದು ಉತ್ತಮ. ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯ ವ್ಯಕ್ತಿಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಚ್.ಬಿ ಪಾಟೀಲ, ಚಿಂತಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಸಿಬ್ಬಂದಿಗಳಾದ ಗುರುರಾಜ ಕೈನೂರ, ಜಗನ್ನಾಥ ಗುತ್ತೇದಾರ, ನಾಗೇಶ್ವರಿ ಮುಗಳಿವಾಡಿ, ರೇಷ್ಮಾ ನಕ್ಕುಂದಿ, ಸಂಗಮ್ಮ ಅತನೂರ್, ಮಂಗಲಾ ಚಂದಾಪುರೆ, ಚಂದ್ರಕಲಾ ಮಠಪತಿ, ನಾಗಮ್ಮ ಚಿಂಚೋಳಿ, ಸಿದ್ರಾಮ, ಆಶಾ ಕಾರ್ಯಕರ್ತೆಯರು, ಬಡಾವಣೆಯ ಮಹಿಳೆಯರು, ನಾಗರಿಕರು ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *