ಕೈಗೆಟುವ ಬೆಲೆಯಲ್ಲಿ ಸಿಗುತ್ತಂತೆ ಜಿಯೋ EV ಸೈಕಲ್‌

ರಾಜ್ಯ

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಜಿಯೋ, ಈಗ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಬಟ್ಟೆಯಿಂದ ಪೆಟ್ರೋಲ್ ವರೆಗೆ ಜಿಯೋ ಬ್ರ್ಯಾಂಡ್ ಇಲ್ಲದ ಕ್ಷೇತ್ರವೆ ಇಲ್ಲ. ಈಗ ಜಿಯೋ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಷೇತ್ರಕ್ಕೂ ಪ್ರವೇಶಿಸಲು ಯೋಜಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಿಲಯನ್ಸ್ ಜಿಯೋ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಪ್ರವೇಶಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ, ಈ ವರ್ಷದ ಅಂತ್ಯದವರೆಗೆ ಜಿಯೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಇ-ಬೈಕ್ ದೈನಂದಿನ ಪ್ರಯಾಣಕ್ಕೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ. ಆದರೆ ರಿಲಯನ್ಸ್ ಈ ಬಗ್ಗೆ ಯಾವುದೆ ಅಧಿಕೃತ ಪ್ರಕಟಣೆ ಮಾಡಿಲ್ಲ. ಆದರೆ ಕೆಲವು ವೈಶಿಷ್ಟ್ಯಗಳು ಮತ್ತು ಬೆಲೆಯ ವಿವರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಜಿಯೋ ಎಲೆಕ್ಟ್ರಿಕ್ ಸೈಕಲ್ ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಸೈಕಲ್ 400 ಕಿಲೋಮೀಟರ್ ವರೆಗೆ ಹೋಗಬಹುದು. ಇದಲ್ಲದೆ ಈ ಸೈಕಲ್‌ಗೆ ತೆಗೆಯಬಹುದಾದ ಬ್ಯಾಟರಿ ಮತ್ತು ಸವಾರಿಗೆ ಸುಗಮ ವೇಗವರ್ಧನೆಯನ್ನು ನೀಡುವ ಸಾಧ್ಯತೆಯಿದೆ.

ಅದೆ ರೀತಿ ಇದು ಎಲ್‌ಇಡಿ ಲೈಟ್, ಡಿಜಿಟಲ್ ಇನ್’ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್, ಬ್ಲೂಟೂತ್ ಮತ್ತು ಸಂಪರ್ಕ ಹೊಂದಿರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *