ಕಲಬುರಗಿ: ನಗರದ ಶಹಾಬಜಾರ ನಾಕಾ ಸಮೀಪವಿರುವ ಸುರಚಿತ್ರ ಮೆಲೋಡಿಸ್, ಕರೊಕೆ ಸಂಗೀತ ತರಬೇತಿ ಕೇಂದ್ರ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಪಂಡಿತ ಡಾ.ಪುಟ್ಟರಾಜ ಗವಾಯಿಗಳ 111ನೇ ಜನ್ಮದಿನೋತ್ಸವ ಜರುಗಿತು.
ಖ್ಯಾತ ಗಾಯಕಿ ಚಿತ್ರಲೇಖಾ ಬಿ ಗೊಲ್ಡಸ್ಮಿತ್ ಅವರು ಪುಷ್ಪ ಹಾಗೂ ಸ್ವರ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸದಸ್ಯರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ನಾಗೇಶ ತಿಮಾಜಿ ಬೆಳಮಗಿ, ಶ್ರೀಮಂತ ಕೋಟನೂರ, ಬಸವರಾಜ ಮುಲಗೆ, ಹಣಮಂತ ಮೇದಾ, ಯಲ್ಲಪ್ಪ ಬಿ.ಕಡಕೋಳ, ನಿಂಗಮ್ಮ ವೈ.ಕಡಕೋಳ, ಅಂಬರೀಶ್ ಸೇರಿದಂತೆ ಅನೇಕರು ಇದ್ದರು.