ಕಲಬುರಗಿ: ರುದ್ರಾಕ್ಷಿ ಪವಿತ್ರ ವಸ್ತುವಾಗಿದ್ದು, ಇದನ್ನು ಧರಿಸುವುದರಿಂದ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಯೋಜನ ಪಡೆಯಬಹುದು, ರಕ್ತದೊತ್ತಡ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ಇದರಲ್ಲಿದೆ. ಇದು ಆಧ್ಯಾತ್ಮಿಕ ಪ್ರಗತಿಗೆ ಸಹಾಯ ಮಾಡುತ್ತದೆ ಎಂದು ಗದ್ದುಗೆ ಮಠದ ಪೂಜ್ಯ ಚರಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಬಿಲಗುಂದಿ ಪೆಟ್ರೋಲ್ ಪಂಪ್ ಎದುರುಗಡೆಯ ಬಡೆಪೂರ ಕಾಲೋನಿಯ ಭಕ್ತರ ಮನೆಗಳಿಗೆ ಹೋಗಿ ರುದ್ರಾಕ್ಷಿ ಧಾರಣೆ ಕಾರ್ಯಕ್ರಮ ಮತ್ತು ಸದ್ಭಾವನ ಪಾದಯಾತ್ರೆ ಪ್ರಾರಂಭಿಸಿ ಮಾತನಾಡಿದ ಅವರು, ಧ್ಯಾನ ಮತ್ತು ಪ್ರಾರ್ಥನೆಗಳಿಗೆ ರುದ್ರಾಕ್ಷಿ ಬಳಸಲಾಗುತ್ತದೆ. ನಕರಾತ್ಮಕ ಶಕ್ತಿಗಳಿಂದ ರಕ್ಷಿಸುವುದಲ್ಲದೆ ವೈಜ್ಞಾನಿಕವಾಗಿ ಅನೇಕ ಲಾಭ ಇದರಲ್ಲಿದೆ ಎಂದರು.
ರುದ್ರಾಕ್ಷಿ ಧಾರಣೆ ಕಾರ್ಯಕ್ರಮದ ಪ್ರಾರಂಭದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯಾದ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಸದ್ಭಾವನಾ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ ಆಸಕ್ತರಿಗೆ ಸನಾತನ ಧರ್ಮದ ಭಗವಾ ಟೋಪಿ ಮತ್ತು ಟವೆಲ್ ಹಾಕುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸುಭಾಷ ನರೋಣ, ರೇವಣಸಿದ್ದಪ್ಪ ಗೌನಳ್ಳಿ, ರಾಜಶೇಖರ ಹರಸೂರ, ಶರಣು ಡೋಣಿ, ಗೌಡಪ್ಪಗೌಡ ಪಾಟೀಲ ಮತ್ತು ಎಲ್ಲಾ ಸದಸ್ಯರಿಗೆ ಚರಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ರುದ್ರಾಕ್ಷಿ ಧಾರಣೆ ಮಾಡಲಾಯಿತು.
ಸದ್ಭಾವನಾ ಪಾದಯಾತ್ರೆಯಲ್ಲಿ ಸಿದ್ರಾಮ ದೇವರು ಕಾರಭೋಸಗಾ, ಚಂದ್ರಶೇಖರ ಪಾಟೀಲ ಓಕಳಿ, ಎಸ್.ಆರ್ ಪಾಟೀಲ ಕೋಡ್ಲಿ, ರವಿಶಂಕರ ಪಾಟೀಲ, ಶ್ರೀನಿವಾಸ ಸರಡಗಿ, ಶಿವಲಿಂಗ ಶಿರವಾಳ, ಸುಭಾಷ ನರೋಣ, ರೇವಣಸಿದ್ದಪ್ಪ ಗೌನಳ್ಳಿ, ರಾಜಶೇಖರ ಹರಸೂರ, ಶರಣು ಡೋಣಿ, ಗೌಡಪ್ಪಗೌಡ ಪಾಟೀಲ, ಪುನೀತಕುಮಾರ ಹಿರೇಮಠ ಸೇರಿದಂತೆ ಅನೇಕರು ಇದ್ದರು.