ವಾಡಿ ಬಿಜೆಪಿ ಕಛೇರಿಯಲ್ಲಿ ಬಲಿದಾನ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹುತಾತ್ಮರ ದಿನದ ಅಂಗವಾಗಿ ಮುಖಂಡರು, ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಗೌರವ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಭಗತ್ ಸಿಂಗ್ ಹಾಗೂ ಅವರ ಸಹಚರರಾದ ಶಿವರಾಮ್ ರಾಜಗುರು, ಸುಖದೇವ್ ಥಾಪರ್ , ತಮ್ಮ ಧೈರ್ಯಶಾಲಿ, ತಾಯ್ನಾಡಿನ ಸೇವೆಗಾಗಿನ ಸಾಹಸ ಜೀವನದಿಂದ ಇಡೀ ದೇಶದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು. ಏಪ್ರಿಲ್ 8, 1929 ರಂದು, ಅವರು ಇಂಕ್ವಿಲಾಬ್ ಜಿಂದಾಬಾದ್ […]

Continue Reading

ಜಲ ಸಂರಕ್ಷಣೆ ರಾಷ್ಟ್ರೀಯ ಆಂದೋಲನ, ಪ್ರತ್ಯೇಕ ಪಠ್ಯವಾಗಲಿ

ಕಲಬುರಗಿ: ಜಲ ಎಂಬುದು ಕೇವಲ ಎರಡು ಅಕ್ಷರದ ಶಬ್ದವಲ್ಲ, ಅದು ಸಕಲ ಜೀವಿಗಳ ಉಸಿರು, ಅಸ್ತಿತ್ವಕ್ಕೆ ಕಾರಣವಾಗಿದೆ. ವಿವಿಧ ಕಾರಣಗಳಿಂದ ಜಲ ಸಂಪತ್ತಿನ ಕೊರತೆಯಾಗುವುದರ ಜೊತೆಗೆ ಪರಿಸರ ಅಸಮತೋಲನವಾಗುತ್ತಿದೆ. ಜಲ ಸಂರಕ್ಷಣೆ ಸರ್ಕಾರ, ಕೆಲವು ವ್ಯಕ್ತಿ, ಸಂಘ-ಸAಸ್ಥೆಗಳ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಜಲ ಸಂರಕ್ಷಣೆಯ ಕಾರ್ಯ ರಾಷ್ಟಿçÃಯ ಆಂದೋಲನದ ರೂಪದಲ್ಲಿ ಜರುಗುವುದರ ಜೊತೆ ಪ್ರತ್ಯೇಕ ಪಠ್ಯವಾಗಬೇಕಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ ಪಾಟೀಲ ಮಾರ್ಮಿಕವಾಗಿ ಹೇಳಿದರು. ನಗರದ ಹಳೆ ಜೇವರ್ಗಿ ರಸ್ತೆಯ ಪಿ&ಟಿ ಕ್ವಾಟರ್ಸ್ […]

Continue Reading

ಕನಿಷ್ಠ ಬೆಲೆ ನೀಡಿ ನೀರಿನ ಬಾಟಲಿ ಹಿಂಪಡೆಯಲು ನಿಯಮ ರೂಪಿಸಿ: ಈಶ್ವರ ಖಂಡ್ರೆ

ಬೆಂಗಳೂರು: ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಸೂಚನೆ ನೀಡಿದ್ದಾರೆ. ತತ್ಸಂಬಂಧ ನಿಯಮ ರೂಪಿಸಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಅವರು, ಬಾಟಲಿಗಳ ಮೂಲಕ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ […]

Continue Reading

ಸಮಾಜಮುಖಿ ಕಾವ್ಯ, ಸಾಹಿತ್ಯ ಸಾರ್ವಕಾಲಿಕ

ಕಲಬುರಗಿ: ಕಲ್ಪನೆ ಆಧಾರಿತ, ವಾಸ್ತವಿಕತೆಗೆ ದೂರವಿರುವ, ಪ್ರಸ್ತುತವೆನಿಸದ ಸಾಹಿತ್ಯದಿಂದ ಸಮಾಜಕ್ಕೆ ಪ್ರಯೋಜನೆಯಾಗಲಾರದು. ಬದಲಿಗೆ ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವುಗಳಿಗೆ ಪರಿಹಾರ ಸೂಚಿಸುವ, ಸಮಾಜವನ್ನು ತಿದ್ದಿ, ಸರಿದಾರಿಗೆ ತರುವ ಸಾಹಿತ್ಯ ರಚನೆಯಾದರೆ ಅದಕ್ಕೆ ಹೆಚ್ಚಿನ ಬೆಲೆ ಬರುತ್ತದೆ ಮತ್ತು ಅಂತಹ ಕಾವ್ಯ, ಸಾಹಿತ್ಯ ಸಾರ್ವಕಾಲಿಕವಾಗಲು ಸಾಧ್ಯವಾಗುತ್ತದೆ ಎಂದು ಹಿರಿಯ ಕವಯತ್ರಿ ಸುರೇಖಾ ಹಿರೆನೂರ್ ಅಭಿಪ್ರಾಯಪಟ್ಟರು. ನಗರದ ಆದರ್ಶ ನಗರದಲ್ಲಿರುವ ದಿ ರಾಷ್ಟ್ರೀಯ ಕಂಪ್ಯೂಟರ ಸಾಕ್ಷರತಾ ಸಮಿತಿಯ ಎನ್’ಟಿಟಿಸಿ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ […]

Continue Reading

ಅರಣ್ಯ ಸಂರಕ್ಷಣೆ ಸರ್ವರ ಜವಾಬ್ದಾರಿ: ಪೀರಪ್ಪ ಕಟ್ಟಿ

ಚಿತ್ತಾಪುರ: ಅರಣ್ಯ ಸಂಪತ್ತು ಕಾಪಾಡುವುದರ ಜೊತೆಗೆ ಉಳಿದ ಪ್ರದೇಶದಲ್ಲಿಯೂ ಗಿಡ-ಮರಗಳನ್ನು ಬೆಳೆಸುವದು ಅರಣ್ಯ ಇಲಾಖೆ, ಕೆಲವು ಸಂಘ-ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳ ಕಾರ್ಯವಾಗದೆ, ಸರ್ವರ ಜವಾಬ್ದಾರಿಯಾಗಿದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಪೀರಪ್ಪ ಕಟ್ಟಿ ಅಭಿಮತಪಟ್ಟರು. ತಾಲೂಕಿನ ಮಾಡಬೂಳ ಸಸ್ಯ ಕ್ಷೇತ್ರದಲ್ಲಿ ಅರಣ್ಯ ಇಲಾಖೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜರುಗಿದ ‘ವಿಶ್ವ ಅರಣ್ಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ, […]

Continue Reading

ದಿ.ವಾಲ್ಮೀಕ ನಾಯಕರ ಪುಣ್ಯಸ್ಮರಣೆ ನಿಮಿತ್ಯ ಅನುಗ್ರಹ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ

ವಾಡಿ: ಮಾಜಿ ಶಾಸಕ ದಿ.ವಾಲ್ಮೀಕ ನಾಯಕರ ಪುಣ್ಯಸ್ಮರಣೆ ನಿಮಿತ್ಯ ಕಲಬುರಗಿಯ ಅನುಗ್ರಹ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು, ಯುವ ಮುಖಂಡ ವಿಠಲ ವಾಲ್ಮೀಕ ನಾಯಕ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಮಾಜಿ ಶಾಸಕ ದಿ.ವಾಲ್ಮೀಕ ನಾಯಕರ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ವಾಲ್ಮೀಕ ನಾಯಕರ ಅಭಿಮಾನಿ ಬಳಗ ಹಾಗೂ ಕಲಬುರಗಿಯ ಪ್ರತಿಷ್ಠಿತ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 276 ಜನರಿಗೆ ನೇತ್ರ ತಪಾಸಣೆ ಮಾಡಲಾಯಿತು. ಅದರಲ್ಲಿ 41 ಜನರು ಶಸ್ತ್ರಚಿಕಿತ್ಸೆಗೆ […]

Continue Reading

ರಾಜ್ಯದ ಈ ಜಿಲ್ಲೆಗಳಲ್ಲಿ ವರ್ಷಧಾರೆ: ಬೇಸಿಗೆಯಲ್ಲಿ ತಂಪೆರೆದ ವರುಣ

ಬೆಂಗಳೂರು: ಬೇಸಿಗೆಯಲ್ಲಿ ರಾಜ್ಯದ ವಿವಿಧೆಡೆ ವರ್ಷಧಾರೆಯಾಗಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಸುಮಾರು 10 ನಿಮಿಷಗಳ ಕಾಲ ಮಳೆಯಾಗಿದೆ, ಜನರು ಹರ್ಷಗೊಂಡಿದ್ದಾರೆ. ಹೊಸಪೇಟೆಯಲ್ಲೂ ಮೇಘರಾಜ ತಂಪು ಸೂಸಿದ್ದಾನೆ. ವರ್ಷದ ಮೊದಲ ಮಳೆಯಲ್ಲಿ ಮಕ್ಕಳು ಖುಷಿಯಿಂದ ಆಟವಾಡಿದ್ದಾರೆ. ಹಾವೇರಿಯಲ್ಲಿ ಮಳೆಯಿಂದ ಸಾಕಷ್ಟು ಅವಾಂತರವಾಗಿದೆ. ಬಾಲಕರ ಹಾಸ್ಟೆಲ್‌ಗೆ ನೀರು ನುಗ್ಗಿದೆ. ದಾವಣಗೆರೆ, ಬಾಗಲಕೋಟೆಯಲ್ಲೂ ಕೆಲವೆಡೆ ತುಂತುರು ಮಳೆಯಾಗಿದೆ. ದಾವಣಗೆರೆಯಲ್ಲಿ ವರ್ಷಧಾರೆಯಾಗಿದೆ, ತುಂತುರು ಮಳೆಯಿಂದ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಜಿಲ್ಲೆಯ ಹೆಬ್ಬಾಳ, ಅನಗೋಡು ಸೇರಿದಂತೆ ಹಲವು ಕಡೆ […]

Continue Reading

ಪಕ್ಷಿಗಳಿಂದ ನಿಸರ್ಗ, ಪರಿಸರ ಸಮತೋಲನ ಸಾಧ್ಯ: ಎಚ್.ಬಿ ಪಾಟೀಲ

ಕಲಬುರಗಿ: ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ಮೂಲಕ ಪರಿಸರ, ನಿಸರ್ಗ ಸಮತೋಲವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ ಹಾಗೂ ಪಕ್ಷಿಪ್ರೇಮಿ ಎಚ್.ಬಿ ಪಾಟೀಲ ಹೇಳಿದರು. ನಗರದ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ‘ವಿಶ್ವ ಗುಬ್ಬಚ್ಚಿ ದಿನಾಚರಣೆ’ ಪ್ರಯುಕ್ತ ಗುಬ್ಬಚ್ಚಿ, ಪಕ್ಷಿಗಳ ರಕ್ಷಣೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುಬ್ಬಚ್ಚಿ ಸೇರಿದಂತೆ ವಿವಿಧ ಪಕ್ಷಿಗಳು ಕೀಟ, ಹುಳ-ಹುಪ್ಪಟಿಗಳನ್ನು ಭಕ್ಷಿಸುವ ಮೂಲಕ ಮಣ್ಣು ಮತ್ತು […]

Continue Reading

ಪಕ್ಷಿಗಳಿಂದ ನಿಸರ್ಗದ ಸಮತೋಲನ ಸಾಧ್ಯ

ಕಲಬುರಗಿ: ಗುಬ್ಬಚ್ಚಿ ಸೇರಿದಂತೆ ವಿವಿಧ ಪಕ್ಷಿಗಳು ಕೀಟ, ಹುಳ-ಹುಪ್ಪಟಿಗಳನ್ನು ಭಕ್ಷಿಸುವ ಮೂಲಕ ಮಣ್ಣು ಮತ್ತು ಬೆಳೆಗಳನ್ನು ರಕ್ಷಿಸುತ್ತವೆ. ಇದರಿಂದ ಮಣ್ಣು ಸತ್ವಯುತವಾಗಿ, ಪರಾಗಸ್ಪರ್ಷ ಕ್ರಿಯೆ ಜರುಗುವುದರಿಂದ ಉತ್ತಮ ಇಳುವರಿ ಸಾಧ್ಯ. ಜೊತೆಗೆ ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ಮೂಲಕ ಪರಿಸರ, ನಿಸರ್ಗ ಸಮತೋಲವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ ಹಾಗೂ ಪಕ್ಷಿಪ್ರೇಮಿ ಎಚ್.ಬಿ ಪಾಟೀಲ ಹೇಳಿದರು. ನಗರದ ಸಂತೋಷ ಕಾಲೋನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ ಅಕಾಡೆಮಿ’ಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ […]

Continue Reading

ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯ್ತಿ ಪಾಸ್‌ ವಿತರಣೆ ಮಾಡಲು ಮಹ್ಮದ್ ಇಬ್ರಾಹಿಂ ಆಗ್ರಹ 

ಚಿತ್ತಾಪುರ: ಹಿರಿಯ ನಾಗರಿಕರಿಗೆ ಪಡಿತರ ಚೀಟಿ ಕಾರ್ಡಗಾಗಿ ಇ-ಶ್ರಮ ಕಾರ್ಡ ಇರದೆ ಇರುವವರಿಗೆ ಯಾವುದಾದರೊಂದು ವ್ಯವಸ್ಥೆ ಕಲ್ಪಿಸಬೇಕು. ರೈಲ್ವೆಗಳಲ್ಲಿ ಪ್ರಯಾಣಿಸಲು ಶೇ.50 ರಷ್ಟು ರಿಯಾಯ್ತಿ ದರದಲ್ಲಿ ಪಾಸ್ ಮುಂದುವರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಹೊಂಗಿರಣ ತಾಲೂಕಾ ಹಿರಿಯ ನಾಗರಿಕರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಮ್ ಒತ್ತಾಯಿಸಿದರು.  ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಗುರುವಾರ ತಹಸೀಲ್ದಾ‌ರರಿಗೆ ಸಲ್ಲಿಸಿ  ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ 60 ವರ್ಷ […]

Continue Reading