ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯ್ತಿ ಪಾಸ್‌ ವಿತರಣೆ ಮಾಡಲು ಮಹ್ಮದ್ ಇಬ್ರಾಹಿಂ ಆಗ್ರಹ 

ಚಿತ್ತಾಪುರ: ಹಿರಿಯ ನಾಗರಿಕರಿಗೆ ಪಡಿತರ ಚೀಟಿ ಕಾರ್ಡಗಾಗಿ ಇ-ಶ್ರಮ ಕಾರ್ಡ ಇರದೆ ಇರುವವರಿಗೆ ಯಾವುದಾದರೊಂದು ವ್ಯವಸ್ಥೆ ಕಲ್ಪಿಸಬೇಕು. ರೈಲ್ವೆಗಳಲ್ಲಿ ಪ್ರಯಾಣಿಸಲು ಶೇ.50 ರಷ್ಟು ರಿಯಾಯ್ತಿ ದರದಲ್ಲಿ ಪಾಸ್ ಮುಂದುವರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಹೊಂಗಿರಣ ತಾಲೂಕಾ ಹಿರಿಯ ನಾಗರಿಕರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಮ್ ಒತ್ತಾಯಿಸಿದರು.  ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಗುರುವಾರ ತಹಸೀಲ್ದಾ‌ರರಿಗೆ ಸಲ್ಲಿಸಿ  ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ 60 ವರ್ಷ […]

Continue Reading

ಬಿಜೆಪಿ ಕಛೇರಿಯಲ್ಲಿ ಮಾಜಿ ಶಾಸಕ ದಿ.ವಾಲ್ಮೀಕ ನಾಯಕರ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಪಕ್ಷದ ಧೀಮಂತ ನಾಯಕ ಮಾಜಿ ಶಾಸಕ ದಿ ವಾಲ್ಮೀಕ ನಾಯಕ ಅವರ 4ನೇ ಪುಣ್ಯಸ್ಮರಣೆ ಪ್ರಯುಕ್ತ ಮುಖಂಡರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಾಲ್ಮೀಕ ನಾಯಕ ಅವರು ನಮ್ಮಂತ ಸಾಮಾನ್ಯ ಕಾರ್ಯಕರ್ತರ ದೊಡ್ಡ ಶಕ್ತಿಯಾಗಿದ್ದರು. ಪಕ್ಷದ ತತ್ವ, ಸಿದ್ಧಾಂತಕ್ಕೆ ಕೊನೆವರೆಗೂ ಉಸಿರಾಗಿ ನಡೆದುಕೊಂಡಿದ್ದರು ಎಂದರು. ಅವರ ದೇಶಪ್ರೇಮ ಹಾಗೂ ಸಮಾಜವನ್ನು ಸಂಘಟಿಸುವ ಶಕ್ತಿ ಇಂದಿನ ಎಲ್ಲಾ ಯುವಕರಿಗೆ ಮಾದರಿಯಾಗಿದೆ. ಸರ್ವ […]

Continue Reading

ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ

ಫ್ಲೋರಿಡಾ: 286 ದಿನಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಮರಳಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸುದೀರ್ಘ ಬಾಹ್ಯಾಕಾಶ ನಡಿಗೆ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಪೂರೈಸಿದ್ದಾರೆ. ಈ ಮೂಲಕ ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಒಟ್ಟಾರೆ ಬಾಹ್ಯಾಕಾಶ ನಡಿಗೆ ಪೂರೈಸಿದ ಗಗಯಾತ್ರಿಗಳ ಸಾರ್ವಕಾಲಿಕ ದಾಖಲೆ […]

Continue Reading

ನಿಸ್ವಾರ್ಥ ಸೇವೆಯಿಂದ ಭಗವಂತನ ಅನುಗ್ರಹ: ತೆಂಗಳಿ ಶ್ರೀ

ಚಿತ್ತಾಪುರ: ಜೀವಿತ ಅವಧಿಯಲ್ಲಿ ಆದರ್ಶ ಬದುಕು ನಡೆಸಿದಾಗ ಜನ್ಮ ಸಾರ್ಥಕವಾಗುತ್ತದೆ. ಆಧ್ಯಾತ್ಮದ ವಿಷಯದಲ್ಲಿ ನಿಸ್ವಾರ್ಥ ಸೇವೆ, ಭಕ್ತಿ ಮತ್ತು ನಿಷ್ಠೆ ಹೊಂದಿದಾಗ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ತೆಂಗಳಿ – ಮಂಗಲಗಿಯ ಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಡಾ. ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು. ಸಮೀಪದ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಐತಿಹಾಸಿಕ ಪರಂಪರೆಯಲ್ಲಿ ದೇವಸ್ಥಾನ, ಮಠ ಮಂದಿರಗಳಿಗೆ ವಿಶೇಷ ಸ್ಥಾನವಿದೆ. […]

Continue Reading

ವಿಜೃಂಭಣೆಯಿಂದ ಜರುಗಿದ ಶರಣಬಸವೇಶ್ವರ ಭವ್ಯ ರಥೋತ್ಸವ

ಕಲಬುರಗಿ: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ 6ಕ್ಕೆ ಸಾವಿರಾರು ಭಕ್ತವೃಂದದ ಜೈಘೋಷದೊಂದಿಗೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು. ಶರಣಬಸವೇಶ್ವರ ದೇವಾಲಯ ಸಂಕೀರ್ಣದಲ್ಲಿ ರಥೋತ್ಸವದ ಸಮಯದಲ್ಲಿ ವರ್ಷಕ್ಕೊಮ್ಮೆ ಪ್ರದರ್ಶಿಸಲಾಗುವ ಪ್ರಸಾದ ಬಟ್ಟಲನ್ನು ರಥೋತ್ಸವದ ಆರಂಭವನ್ನು ಸೂಚಿಸಲು 8ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಹಾಗೂ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಪ್ರದರ್ಶಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು […]

Continue Reading

ಶ್ರೀ ಶರಣಬಸವೇಶ್ವರ ಜಾತ್ರೆ: ಅನ್ನ ದಾಸೋಹ

ಕಲಬುರಗಿ: ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿ ಕ್ರಾಸ್’ನಲ್ಲಿ ‘ಸಿದ್ದಲಿಂಗೇಶ್ವರ ಗೆಳೆಯರ ಬಳಗ’ದ ವತಿಯಿಂದ  ಬುಧವಾರ ಅನ್ನ ದಾಸೋಹ ಜರುಗಿತು. ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ದಾಸೋಹ ಸಮಿತಿಯವರಿಗೆ ಗೌರವಿಸಲಾಯಿತು, ಅವರ ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹಿಸಲಾಯಿತು. ಸಿದ್ಧಲಿಂಗೇಶ್ವರ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯವಾಗಿದೆ. ಸಮಾಜ ಸೇವಕರಾದ ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್ ಬಿರಾದಾರ, ದಾಸೋಹ ಸಮಿತಿಯ ಜಗನ್ನಾಥ ಕೋರೆ, ಶಿವು ಸದಾಲಪುರ, ಅರ್ಪಿತ ಹತಗುಂದಿ, ಸಂಗಮೇಶ ಬಿರಾದಾರ, ಜಗು ಬಬಲಾದ, […]

Continue Reading

ಹೊತ್ತಿ ಉರಿದ KKRTC ಬಸ್: ಪ್ರಯಾಣಿಕರು ಪಾರು

ಔರಾದ್: ತಾಲ್ಲೂಕಿಗೆ ಸಮೀಪದ ಕಪ್ಪೆಕೇರಿ ಬಳಿ ಬುಧವಾರಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ. ಬೀದರ್ ಕಡೆಯಿಂದ ಬರುತ್ತಿದ್ದ ಔರಾದ್ ಘಟಕದ ಬಸ್‌ ಕಪ್ಪೆಕೇರಿ ಬಳಿ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಭಯಭೀತರಾದ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿಯುತ್ತಿದ್ದಂತೆ ಹೊಗೆ ಬೆಂಕಿಯಾಗಿ ಇಡೀ ಬಸ್ ಧಗ ಧಗನೇ ಹೊತ್ತಿ ಉರಿದಿದೆ. ತಕ್ಷಣ ಸ್ಥಳಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಬಸ್ಸಿನಲ್ಲಿದ್ದ 25 […]

Continue Reading

ಪೊಲೀಸ್ ಠಾಣೆಯಲ್ಲಿ ಜೂಜಾಟ ಪ್ರಕರಣ: ಐವರು ಅಧಿಕಾರಿಗಳು ಅಮಾನತು

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್‌ ಠಾಣೆಯೊಳಗೆ ಜೂಜಾಟದಲ್ಲಿ ತೊಡಗಿದ್ದ ಎಎಸ್‌ಐ ಮಹಿಮೂದ್’ಮಿಯಾ, ಹೆಡ್‌ ಕಾನ್ಸ್‌ಟೇಬಲ್‌ಗಳಾದ ನಾಗರಾಜ, ಸಾಯಿಬಣ್ಣಾ, ಇಮಾಮ್, ಕಾನ್ಸ್‌ಟೇಬಲ್ ನಾಗಭೂಷಣ ಅವರನ್ನು ಅಮಾನತುಗೊಳಿಸಿ ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ. ಜೊತೆಗೆ ವಾಡಿ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರಿಗೂ ನೋಟಿಸ್ ಜಾರಿ ಮಾಡಿದ್ದು, ಕಾರಣ ನೀಡುವಂತೆ ಎಸ್‌ಪಿ ಕೇಳಿದ್ದಾರೆ.

Continue Reading

8ನೇ ಕ್ಲಾಸ್ ಓದಿದವನು ಲೋಕಾಯುಕ್ತ ಅಂತ ಹೇಳಿಕೊಂಡು ಮಹಿಳಾ ಆಧಿಕಾರಿಗೆ ಬ್ಲ್ಯಾಕ್‌ಮೇಲ್

ಚಿಕ್ಕಬಳ್ಳಾಪುರ: 8ನೇ ತರಗತಿ ಓದಿದ ಯುವಕನೊರ್ವ ನಾನು ಲೋಕಾಯುಕ್ತ ಅಧಿಕಾರಿ ಅಂತ ಹೇಳಿಕೊಂಡು ಮಹಿಳಾ ಅಧಿಕಾರಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಅದರ ಪರಿಣಾಮ ಈಗ ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಯಾಗಿಯಾಗಿದ್ದಾನೆ. ಚನ್ನಕೇಶವ ರೆಡ್ಡಿ (24) ಬಂಧಿತ ಆರೋಪಿ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿರುವುಮುನೆಪ್ಪಗಾರಿಪಲ್ಲಿಯ ನಿವಾಸಿ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತೆ ಗೀತಾ ಮೊಬೈಲ್ ನಂಬರ್‌ಗೆ ಕರೆ ಮಾಡಿ ತಾನು ಬೆಂಗಳೂರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿ, ನಿಮ್ಮ ನಗರಸಭೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಿರಿ, ನಿಮ್ಮ ಮೇಲೆ ಲೋಕಾಯುಕ್ತ ಕೇಂದ್ರ […]

Continue Reading

ಮದುವೆಗೆ ಹೆಣ್ಣು ಸಿಗದೆ ಖಿನ್ನತೆ: ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣಬಿಟ್ಟ ಯುವಕ

ಚಾಮರಾಜನಗರ: ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಟಿಸಿ ಹುಂಡಿ ಬಳಿ ನಡೆದಿದೆ. ಮಸಣಶೆಟ್ಟಿ (27) ಸಾವನ್ನಪ್ಪಿದ ಯುವಕ. ಹೆಣ್ಣು ಸಿಗದೆ ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯುತ್ ಕಂಬ ಏರಿದ್ದ. ಕಂಬದಿಂದ ಕೆಳಗಿಳಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಇಳಿಯುವ ವೇಳೆ ಆಯತಪ್ಪಿ ವಿದ್ಯುತ್ ವೈರ್ ತಗುಲಿ ಯುವಕ ಸಾವನ್ನಪ್ಪಿದ್ದಾನೆ. ಮದುವೆಗೆ ಹೆಣ್ಣು ಸಿಕ್ಕಿಲ್ಲವೆಂದು ಮಸಣಶೆಟ್ಟಿ ಕುಡಿತದ ದಾಸನಾಗಿದ್ದ. ಮಸಣಶೆಟ್ಟಿಯದ್ದು […]

Continue Reading