ದೇವಿ ಪುರಾಣ ಆಲಿಸಿದರೆ ಚಿಂತೆಗಿಲ್ಲ ಜಾಗ: ಸಿದ್ದಸೋಮೇಶ್ವರ ಶಿವಾಚಾರ್ಯರು

ಚಿತ್ತಾಪುರ: ದೇವಿ ಪುರಾಣ ಆಲಿಸುವುದರಿಂದ ನಮ್ಮ ಜೀವನದ ಚಿಂತೆ ದೂರವಾಗಿ ಶಾಂತಿ ಮತ್ತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಗುಂಡೆಪಲ್ಲಿಯ ಸೋಮೇಶ್ವರ ಮಠದ ಸಿದ್ದಸೋಮೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ದಿಗ್ಗಾಂವ ಪಂಚಗೃಹ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿರುವ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನ ಇತಿಹಾಸವನ್ನು ಹೇಳಿಕೊಡುವ ದೇವಿ ಪುರಾಣ ತುಂಬಾ ವಿಶೇಷವಾಗಿದೆ. ಬೇರೆ ಎಲ್ಲಾ ಪುರಾಣಕ್ಕು ದೇವಿ ಪುರಾಣಕ್ಕು ತುಂಬಾ ವ್ಯತ್ಯಾಸವಿದೆ, ದೇವಿ ಪುರಾಣ ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ ಇಷ್ಟೊಂದು ವಿಶೇಷವಾಗಿದೆ […]

Continue Reading

ವಾಡಿ: ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಮನವಿ

ವಾಡಿ: ಪಟ್ಟಣದ ಆದಾನಿ ಒಡೆತನದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲು ಆಗಮಿಸಿದ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರಿಗೆ ಪಟ್ಟಣದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಮೂಲಭೂತ ಸೌಕರ್ಯ ಒದಗಿಸುವಂತೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮನವಿ ಸಲ್ಲಿಸಿದರು. ವಾರ್ಡ್‌ ಸಂಖ್ಯೆ ಒಂದರ ಬಸವನ‌ ಖಣಿಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಇರುವ ಪುರಸಭೆ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸದೆ ಇರುವುದು ದುರಾದೃಷ್ಟ, ಬಹುತೇಕ ಕಡೆ ಸ್ಥಳೀಯರಿಗೆ ವಾಸಿಸುವ ಹಕ್ಕು ಪತ್ರ ಕೂಡಾ ಕೊಟ್ಟಿಲ್ಲ, ಅಲ್ಲಿನ ನಿವಾಸಿಗಳು ತೆರಗೆ […]

Continue Reading

ಕರೆಂಟ್‌ಗೂ ಟೋಲ್ ಮಾದರಿ ಶುಲ್ಕ: ಸ್ಮಾರ್ಟ್ ಮೀಟರ್ ಹೆಸರಲ್ಲಿ ಜನರಿಂದ ಲೂಟಿ

ಬೆಂಗಳೂರು: ಸ್ಮಾರ್ಟ್ ಮೀಟರ್ ವಿರುದ್ಧ ಬೆಂಗಳೂರಿನ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಕರೆಂಟ್ ಬಿಲ್ ಹೆಚ್ಚು ಬರುತ್ತಿದ್ದು, ಅದರ ಜೊತೆಗೆ ಮತ್ತೆ ಈಗ ಲೂಟಿ ಮಾಡುವ ಪ್ಲ್ಯಾನ್ ಎಂದು ಕಿಡಿಕಾರಿದ್ದಾರೆ. ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ವ್ಯವಸ್ಥೆ ಇಂಧನ ಇಲಾಖೆ ಜಾರಿಗೊಳಿಸಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸ್ಮಾರ್ಟ್ ಮೀಟರ್ ಅಳವಡಿಕೆ ಸಂಬಂಧ 2024ರ ಮಾ.6 ರಂದು ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಹಂತಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ […]

Continue Reading

ಅತ್ತಿಗೆಯನ್ನು ಮಂಚಕ್ಕೆ ಕರೆದ ಮೈದುನ: ಒಪ್ಪದಿದ್ದಕ್ಕೆ ಎಲ್ಲೆಂದರಲ್ಲಿ ಕಚ್ಚಿದ ಕಾಮುಕ

ಧಾರವಾಡ: ಅತ್ತಿಗೆ ಎಂದರೆ ತಾಯಿ ಸಮಾನ ಅಂತಾರೆ. ಹೀಗಾಗಿ ಅತ್ತಿಗೆಗೆ ಯಾವಾಗಲೂ ತಾಯಿಯ ಸ್ಥಾನಮಾನ ನೀಡಲಾಗುತ್ತದೆ. ಅದಕ್ಕಾಗಿಯೆ ಅವರ ಬಗ್ಗೆ ಯಾವಾಗಲೂ ಗೌರವದ ಭಾವನೆ ಇರಬೇಕು. ಆದರೆ ಇಲ್ಲೊರ್ವ ವ್ಯಕ್ತಿ, ಅಣ್ಣನ ಹೆಂಡತಿ‌ ಮೇಲೆ ಕಣ್ಣು ಹಾಕಿ ಲೈಂಗಿಕವಾಗಿ ಸಹಕರಿಸುವಂತೆ ಕರೆದಿದ್ದಾನೆ. ಆದರೆ ಇದಕ್ಕೆ ನಿರಾಕರಿಸಿದ ಅತ್ತಿಗೆ ಮೇಲೆ ಮೈದುನ ಎಲ್ಲೆಂದರಲ್ಲಿ ಕಚ್ಚಿ ಮೃಗದ ವರ್ತನೆ ತೋರಿದ್ದಾನೆ‌. ಈ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸ ಕಟ್ಟಿ ಗ್ರಾಮದಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ […]

Continue Reading

3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ 6.6 ಕೋಟಿಗೆ ಮಾರಿದ ಅಕ್ಷಯಕುಮಾರ

ಮುಂಬೈ: ಬಾಲಿವುಡ್ ನಟ ಅಕ್ಷಯಕುಮಾರ ಅವರು ಮುಂಬೈನಲ್ಲಿರುವ ಎರಡು ಅಪಾರ್ಟ್‌ಮೆಂಟ್‌ ಅನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. 3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ ಅನ್ನು 6.6 ಕೋಟಿಗೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ. ಮುಂಬೈನಲ್ಲಿ ಬೊರಿವಲಿಯಲ್ಲಿ ಎರಡು ಅಪಾರ್ಟ್‌ಮೆಂಟ್‌ ಮಾರಾಟ ಮಾಡುವ ಮೂಲಕ 6.6 ಕೋಟಿ ರೂ. ಗಳಿಸಿದ್ದಾರೆ. ಇವುಗಳಲ್ಲಿ ಒಂದು 5.35 ಕೋಟಿಗೆ ಮಾರಾಟವಾಗಿದೆ. ಮತ್ತೊಂದು 1.25 ಕೋಟಿಗೆ ಮಾರಾಟವಾಗಿದೆ. ಮೂಲಗಳ ಪ್ರಕಾರ, 5.35 ಕೋಟಿಗೆ ಮಾರಾಟವಾಗಿರುವ ಅಪಾರ್ಟ್‌ಮೆಂಟ್‌ ಅನ್ನು ನವೆಂಬರ್‌ 2017ರಲ್ಲಿ 2.82 ಕೋಟಿಗೆ […]

Continue Reading

ಕ್ಷಯರೋಗ ಮುಕ್ತ ಭಾರತಕ್ಕೆ ಸಮುದಾಯದ ಸಹಕಾರ ಅಗತ್ಯ

ಕಲಬುರಗಿ: ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ವಿಶೇಷವಾಗಿ ರಾತ್ರಿ ವೇಳೆ ಜ್ವರ ಬರುವುದು, ತೂಕ ಇಳಿಕೆ, ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಇದರ ಬಗ್ಗೆ ನಿರ್ಲಕ್ಷ ಮಾಡದೆ ತಕ್ಷಣವೇ ಟಿ.ಬಿ ಕಾಯಿಲೆಯ ಪರೀಕ್ಷೆ ಮಾಡಿಸಿಕೊಂಡು, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು. 2030ಕ್ಕೆ ಕ್ಷಯರೋಗ ಮುಕ್ತ ಭಾರತಕ್ಕೆ ಸಮುದಾಯದ ಸಹಕಾರ ಅಗತ್ಯ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ […]

Continue Reading

ಭೀಮೇಶ್ವರ ಟ್ರಸ್ಟ್ ವತಿಯಿಂದ ಹಣ್ಣು, ಖಜೂರಿ ವಿತರಣೆ

ತೆಂಗಳಿ: ರಂಜಾನ್ ಹಬ್ಬದ ಪ್ರಯುಕ್ತ ಉಪವಾಸ ವೃತ ಮಾಡುವ ಮುಸ್ಲಿಂ ಬಾಂಧವರಿಗೆ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ರವಿವಾರ ಹಣ್ಣು ಮತ್ತು ಖಜೂರಿ ವಿತರಿಸಲಾಯಿತು. ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ಹಣ್ಣು ಮತ್ತು ಖಜೂರಿ ವಿತರಿಸಲಾಯಿತು. ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ವಾಲಿ ಮಾತನಾಡಿ, ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಉಪವಾಸ ವೃತ ಕೈಗೊಳ್ಳುತ್ತಾರೆ. ಈ ವರ್ಷವು ಉಪವಾಸ ವೃತ ಆರಂಭಿಸಲಾಗಿದೆ. ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ ಎಂದರು. ತೆಂಗಳಿ […]

Continue Reading

ಜೀವನ ಸಾಗಿಸಲು ನಿಸರ್ಗ, ಹವಾಮಾನ ತುಂಬಾ ಅವಶ್ಯಕ: ಎಚ್.ಬಿ ಪಾಟೀಲ

ಕಲಬುರಗಿ: ಯಾವುದೆ ಜೀವಿಯು ಜನಿಸಿ, ಬೆಳವಣಿಗೆ ಹೊಂದಿ, ತನ್ನ ಜೀವನ ಸಾಗಿಸಲು ನಿಸರ್ಗ, ಹವಾಮಾನ ಅತ್ಯಂತ ಅವಶ್ಯಕವಾಗಿದೆ. ಉತ್ತಮವಾದ ನಿಸರ್ಗ, ಪರಿಸರವಿದ್ದರೆ ಎಲ್ಲಾ ಜೀವರಾಶಿಗಳು ಸದೃಢವಾಗಿ, ದೀರ್ಘಕಾಲವಾಗಿ ಜೀವಿಸಲು ಸಾಧ್ಯವಾಗಿದೆ. ನಿಸರ್ಗದಲ್ಲಿ ಏನಾದರೂ ಏರುಪೇರಾದರೆ, ಎಲ್ಲಾ ಜೀವರಾಶಿಗಳಿಗೂ ತೊಂದರೆಯಿದ್ದು, ನಿಸರ್ಗವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆ ಮತ್ತು ಶಿವಾ ವಿದ್ಯಾ ಮಂದಿರ’ದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಹವಾಮಾನ ದಿನಾಚರಣೆ’ […]

Continue Reading

ಜೀವ ಸಂಕುಲದ ಉಳಿವಿಗೆ ಉತ್ತಮ ಹವಾಮಾನ ಅಗತ್ಯ

ಕಲಬುರಗಿ: ಯಾವುದೆ ಜೀವಿಯು ಜನಿಸಿ, ಬೆಳವಣಿಗೆ ಹೊಂದಿ, ತನ್ನ ಜೀವನ ಸಾಗಿಸಬೇಕಾದರೆ ನಿಸರ್ಗ, ಹವಾಮಾನ ಅತ್ಯಂತ ಅವಶ್ಯಕವಾಗಿದೆ. ಉತ್ತಮವಾದ ನಿಸರ್ಗ, ಪರಿಸರವಿದ್ದರೆ ಎಲ್ಲಾ ಜೀವರಾಶಿಗಳು ಸದೃಢವಾಗಿ, ದೀರ್ಘಕಾಲ ಜೀವಿಸಲು ಸಾಧ್ಯವಾಗಿದೆ. ನಿಸರ್ಗದಲ್ಲಿ ಏನಾದರೂ ಏರುಪೇರಾದರೆ, ಎಲ್ಲಾ ಜೀವರಾಶಿಗಳಿಗೂ ತೊಂದರೆಯಿದ್ದು, ನಿಸರ್ಗವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆ ಮತ್ತು ಶಿವಾ ವಿದ್ಯಾ ಮಂದಿರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಹವಾಮಾನ ದಿನಾಚರಣೆ’ […]

Continue Reading

ವಾಡಿ ಬಿಜೆಪಿ ಕಛೇರಿಯಲ್ಲಿ ಬಲಿದಾನ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹುತಾತ್ಮರ ದಿನದ ಅಂಗವಾಗಿ ಮುಖಂಡರು, ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಗೌರವ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಭಗತ್ ಸಿಂಗ್ ಹಾಗೂ ಅವರ ಸಹಚರರಾದ ಶಿವರಾಮ್ ರಾಜಗುರು, ಸುಖದೇವ್ ಥಾಪರ್ , ತಮ್ಮ ಧೈರ್ಯಶಾಲಿ, ತಾಯ್ನಾಡಿನ ಸೇವೆಗಾಗಿನ ಸಾಹಸ ಜೀವನದಿಂದ ಇಡೀ ದೇಶದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು. ಏಪ್ರಿಲ್ 8, 1929 ರಂದು, ಅವರು ಇಂಕ್ವಿಲಾಬ್ ಜಿಂದಾಬಾದ್ […]

Continue Reading