ಸೆ.22 ರಿಂದ ಜಿಎಸ್‌ಟಿಯಲ್ಲಿ 2‌ ಸ್ಲ್ಯಾಬ್ ಜಾರಿ, ಯಾವ ವಸ್ತುಗಳ ಬೆಲೆ ಇಳಿಕೆ ? ಯಾವುದು ಏರಿಕೆ ?

ನವದೆಹಲಿ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್‌ ಸಿಹಿಸುದ್ದಿ ನೀಡಿದೆ, 8 ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಇನ್ನುಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದೆ ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ.

ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್’ಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ಎರಡರ ಜೊತೆಗೆ ಐಷರಾಮಿ ವಸ್ತುಗಳಿಗೆ 40% ಜಿಎಸ್‌ಟಿಯ ಸ್ಲ್ಯಾಬ್ ಅನ್ವಯವಾಗಲಿದೆ.

ದೆಹಲಿಯಲ್ಲಿ ಎರಡು ದಿನಗಳ ಕಾಲ ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯುತ್ತಿದ್ದು ಮೊದಲ ದಿನದ ಸಭೆಯ ಬಳಿಕ ಬುಧವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿ, ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿ ಸ್ಲ್ಯಾಬ್‌ ಬದಲಾವಣೆ ಮಾಡಲಾಗಿದೆ. ದಿನ ಬಳಕೆ ವಸ್ತುಗಳು, ಆರೋಗ್ಯ ವಲಯ ಸೇರಿ ಹಲವು ವಲಯಗಳಿಗೆ ಅನುಕೂಲವಾಗಲಿದೆ. ಸಾಕಷ್ಟು ಚರ್ಚೆ ಬಳಿಕ ನಿರ್ಧಾರಕ್ಕೆ ಬರಲಾಗಿದ್ದು ಎಲ್ಲರೂ ಒಮ್ಮತದಿಂದ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ನಾನು ಜಿಎಸ್‌ಟಿ ಕೌನ್ಸಿಲ್’ನ ಎಲ್ಲಾ ಸದಸ್ಯರಿಗೂ ಅಭಾರಿಯಾಗಿದ್ದೆನೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಈ ದೀಪಾವಳಿಗೆ ಜನರಿಗೆ ಗಿಫ್ಟ್‌ ನೀಡಲಾಗುವುದು ಎಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ತಿಳಿಸಿದ್ದರು. ಆದರೆ ದೀಪಾವಳಿಗೂ ಮೊದಲೇ ದಸರಾ ಸಮಯದಲ್ಲಿ ಹೊಸ ಪರಿಷ್ಕೃತ ದರ ಜಾರಿಯಾಗಲಿದೆ.

ಸರ್ಕಾರಗಳು ಈ ವಸ್ತುಗಳ ಮೇಲೆ ಯಾವುದೆ ಹೆಚ್ಚುವರಿ ಸುಂಕ, ಸೆಸ್‌ ವಿಧಿಸುವುದಿಲ್ಲ ಎಂದು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದೆ. 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ ಸ್ಲ್ಯಾಬ್‌ನ ಅಡಿ ವಸ್ತುಗಳಿಗೆ 5% , 12%, 18%, 28 % ತೆರಿಗೆ ವಿಧಿಸಲಾಗುತ್ತಿತ್ತು.

ದುಬಾರಿಯಾದ ವಸ್ತುಗಳು
ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು: ಸಿಗರೇಟ್, ಸಿಗಾರ್, ಗುಟ್ಕಾ, ಪಾನ್ ಮಸಾಲ, ತಂಬಾಕು ಆಧಾರಿತ ಅಗೆಯುವ ವಸ್ತುಗಳು.

ಈ ವಸ್ತುಗಳು ಆರೋಗ್ಯದ ಮೇಲೆ ಬೀರುವ ಪರಿಣಾಮದಿಂದಾಗಿ 96% ವರೆಗೆ ವಿವಿಧ ಸೆಸ್

ಸಕ್ಕರೆ-ಸಿಹಿಗೊಳಿಸಿದ ಪಾನೀಯಗಳು: ಕಾರ್ಬೊನೇಟೆಡ್ ಪಾನೀಯಗಳು, ಎನರ್ಜಿ ಡ್ರಿಂಕ್ ಮತ್ತು ಕೆಫೀನ್ ಹೊಂದಿರುವ ಪಾನೀಯಗಳು.‌

ಈ ಹಿಂದೆ 28% ತೆರಿಗೆ ವಿಧಿಸಲಾಗಿದ್ದ ಪಾನೀಯಗಳು ಈಗ ಆಯ್ದ ವಸ್ತುಗಳ ಮೇಲೆ 40% ಸ್ಲ್ಯಾಬ್ ಜೊತೆಗೆ 12% ಸೆಸ್ ಅನ್ನು ವಿಧಿಸಲಾಗಿದೆ.

ಜೂಜು ಮತ್ತು ಬೆಟ್ಟಿಂಗ್: ಲಾಟರಿ ಟಿಕೆಟ್‌ಗಳು, ಕ್ಯಾಸಿನೊ ಸೇವೆಗಳು ಮತ್ತು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ಸೆಸ್ ಇಲ್ಲದೆ 40% ತೆರಿಗೆ

ಐಷಾರಾಮಿ ವಾಹನಗಳು: 1,500 ಸಿಸಿ ಎಂಜಿನ್‌ಗಿಂತ ಹೆಚ್ಚಿನ ಸಾಮರ್ಥ್ಯದ ಎಸ್‌ಯುವಿಗಳಂತಹ ಉನ್ನತ ದರ್ಜೆಯ ಕಾರುಗಳು ಮತ್ತು 4 ಮೀಟರ್‌ಗಿಂತ ಉದ್ದದ ವಾಹನಗಳು 40% ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ, ಜೊತೆಗೆ 22% ಪರಿಹಾರ ಸೆಸ್ ಕೂಡ ಸೇರುತ್ತದೆ.

ಸಂಸ್ಕರಿಸಿದ ಜಂಕ್ ಫುಡ್‌ಗಳು: ಹೆಚ್ಚಿನ ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಅಂಶವಿರುವ ಫಾಸ್ಟ್ ಫುಡ್ ಮತ್ತು ಪ್ಯಾಕ್ ಮಾಡಿದ ತಿಂಡಿಗಳಂತಹ ವಸ್ತುಗಳು ಸಹ 40% ಏರಿಕೆ.

Leave a Reply

Your email address will not be published. Required fields are marked *