ಜಮೀನಿನಲ್ಲಿ ರೈತನಿಗೆ ಸಿಕ್ಕಿತು 36 ಸಾವಿರ ಕೋಟಿ ಮೌಲ್ಯದ ಚಿನ್ನ: ಕ್ಷಣಾರ್ಧದಲ್ಲಿ ಬದಲಾಯಿತು ಅನ್ನದಾತನ ಬದುಕು

ಅಂತಾರಾಷ್ಟ್ರೀಯ

ಅದೃಷ್ಟ ಹೇಗೆ ಒಲಿದು ಬರುತ್ತದೆ ಎಂಬುದು ಯಾರಿಂದಲೂ ಹೇಳಲು ಅಸಾಧ್ಯ. ಇತ್ತೀಚೆಗೆ ರೈತನೋರ್ವ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ 36 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಧಿ ಸಿಕ್ಕಿದೆ.

ಕ್ಷಣಾರ್ಧದಲ್ಲಿ ರೈತನ ಜೀವನವೆ ಬದಲಾಗಿದೆ. ಇಂತಹ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿನ್ನದ ನಿಧಿ ಸಿಕ್ಕಿರುವದು ಫ್ರಾನ್ಸ್‌ನಲ್ಲಿ, ಈ ಸುದ್ದಿಯಿಂದ ಕೋಲಾಹಲ ಸೃಷ್ಟಿಯಾಗಿದೆ. ಫ್ರಾನ್ಸ್ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಯುನಿಯನ್ ರಿಯೋ ವರದಿ ಪ್ರಕಾರ, ಫ್ರಾನ್ಸ್‌ನ ಪುಟ್ಟ ಗ್ರಾಮವಾದ ಆವೆರ್ಗ್ನೆಯಲ್ಲಿ 36 ಸಾವಿರ ಕೋಟಿ ರೂ ಮೌಲ್ಯದ ನಿಧಿ ಸಿಕ್ಕಿದೆ. ಆವೆರ್ಗ್ನೆಯ ನಿವಾಸಿಯಾಗಿರುವ 52 ವರ್ಷದ ರೈತ ಮೈಕೆಲ್ ಡುಪಾಂಟ್ ಇಂದು ಸಾವಿರಾರು ಕೋಟಿಯ ಒಡೆಯನಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡಿರುವ ಮೈಕೆಲ್ ಡುಪಾಂಟ್, ಇತ್ತೀಚೆಗೆ ತಮ್ಮ ಜಮೀನಿನಲ್ಲಿ ಅಗೆಯುವ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಹೊಳೆಯುವ ವಸ್ತುವೊಂದು ಕಾಣಿಸಿದೆ. ಮೊದಲು ನುಣುಪಾಗಿರುವ ಕಲ್ಲು ಎಂದು ಮೈಕೆಲ್ ಡುಪಾಂಟ್ ಭಾವಿಸಿದ್ದರು. ನಂತರ ಮತ್ತಷ್ಟು ಅಗೆದಾಗ ಅದು ಚಿನ್ನ ಎಂದು ಗೊತ್ತಾಗಿದೆ.

ನಂತರ ನಿಧಿಯನ್ನು ಹೊರಗೆ ತೆಗೆದು ಪರಿಶೀಲಿಸಿದಾಗ ಸುಮಾರು 100 ಕೆಜಿಗೂ ಅಧಿಕ ಚಿನ್ನ ಪತ್ತೆಯಾಗಿದೆ. ಇಟ್ಟಿಗೆ ಮಾದರಿಯ ಚಿನ್ನದ ಗಟ್ಟಿಗಳು ಮತ್ತು ಪ್ರಾಚೀನ ಕಾಲದ ಹಳೆಯ ನಾಣ್ಯಗಳು ಸೇರಿವೆ ಎಂದು ವರದಿಯಾಗಿದೆ. ಕೃಷಿ ಜಮೀನಿನಲ್ಲಿ ಪತ್ತೆಯಾಗಿರುವ ಪ್ರಾಚೀನ ಕಾಲದ ಚಿನ್ನದ ಮೌಲ್ಯ ಸುಮಾರು 4.2 ಬಿಲಿಯನ್ ಯುರೋ (36,000 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ.

ಎಲ್ಲಾ ಚಿನ್ನ ರೈತನಿಗೆ ಸಿಗುತ್ತಾ ?
36 ಸಾವಿರ ಕೋಟಿ ರೂ. ಮೌಲ್ಯದ ಚಿನ್ನ ಖಾಸಗಿ ಜಮೀನಿನಲ್ಲಿ ಸಿಕ್ಕಿದೆ. ಹಾಗಾಗಿ ಈ ಎಲ್ಲಾ ನಿಧಿ ರೈತ ಮೈಕೆಲ್ ಡುಪಾಂಟ್ ಅವರಿಗೆ ಸಿಗುತ್ತಾ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಫ್ರಾನ್ಸ್ ಕಾನೂನುಗಳ ಪ್ರಕಾರ, ಇಂತಹ ನಿಧಿ ಮೇಲೆ ಸರ್ಕಾರ ಹಕ್ಕು ಹೊಂದಿರುತ್ತದೆ. ನಿಧಿ ಸಿಕ್ಕಿರುವ ಭೂಮಿ ಖಾಸಗಿಯಾಗಿದ್ದರೆ ಅದರ ಮಾಲೀಕನಿಗೆ ಪಾಲು ನೀಡಲಾಗುತ್ತದೆ. ಆದರೆ ಎಷ್ಟು ಪಾಲು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ಜನರ ಪ್ರತಿಕ್ರಿಯೆ ಏನು ?
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಬರಹಗಳಡಿ ವೈರಲ್ ಆಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು, ಮೈಕೆಲ್ ಡುಪಾಂಟ್ ರೈತ ಓರ್ವ ಅದೃಷ್ಟವಂತ. ಸಿಕ್ಕಿರುವ ನಿಧಿಯಲ್ಲಿನ ಸಿಂಹಪಾಲು ಮೈಕೆಲ್ ಡುಪಾಂಟ್ ಅವರಿಗೆ ಸೇರಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಇದು ಸುಳ್ಳು ಸುದ್ದಿ ಎಂದು ವಾದಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ನಿಧಿ ಸಿಕ್ಕರೆ ಸರ್ಕಾರವೆ ವಶಕ್ಕೆ ಪಡೆದುಕೊಳ್ಳುತ್ತವೆ. ಆದರೆ ರೈತನಿಗೆ ಇದು ಒಳ್ಳೆಯ ಸುದ್ದಿ ಎಂದು ಬಹುತೇಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೊಂದಿಷ್ಟು ಆ ನಿಧಿಯ ಫೋಟೋ ಸಿಕ್ಕರೆ ಅಪ್ಲೋಡ್ ಮಾಡಿ, ನೋಡಿ ಕಣ್ತುಂಬಿಕೊಳ್ಳುತ್ತೆವೆ ಎಂದು ಕಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *