ಕಲಬುರಗಿ: ನಮ್ಮ ದೇಶ ಸೇರಿದಂತೆ ಇಡಿ ವಿಶ್ವದಲ್ಲಿ ಉಂಟಾದ ದೂರ ಸಂಪರ್ಕ ಕ್ಷೇತ್ರದಲ್ಲಿನ ಕ್ರಾಂತಿಯಿಂದಾಗಿ, ಪ್ರಸ್ತುತವಾಗಿ ಜಗತ್ತೆ ಒಂದು ಚಿಕ್ಕ ಗ್ರಾಮವೆಂಬ ಪರಿಕಲ್ಪನೆ ಮೂಡಲು ಸಾಧ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಸಾಧ್ಯವಾಗಿದ್ದು, ದೂರಸಂಪರ್ಕ ಕ್ಷೇತ್ರದ ಕ್ರಾಂತಿಯಿಂದಾಗಿ ರಾಷ್ಟ್ರ ತೀವ್ರಗತಿಯಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಿದ್ದು, ಅಪಾರವಾದ ಕೊಡುಗೆ ನೀಡಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಮತಪಟ್ಟರು.
ನಗರದ ಜೆ.ಆರ್ ನಗರದಲ್ಲಿನ ‘ಶ್ರೇಯಸ್ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಏರ್ಪಡಿಲಾಗಿದ್ದ ‘ಅಂತಾರಾಷ್ಟ್ರೀಯ ದೂರಸಂಪರ್ಕ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಅನಕೂಲವಾಗಲಿ ಎಂಬ ಉದ್ದೇಶದಿಂದ ದೂರಸಂಪರ್ಕ ಕೇತ್ರದಲ್ಲಿ ದಿನನಿತ್ಯಲೂ, ನಿರಂತರವಾಗಿ ಹೊಸ ಸಂಶೋಧನೆಗಳು ಜರುಗುತ್ತಿವೆ. ಅದರಲ್ಲಿ ಯುವಕರು ಮೊಬೈಲ್ ಹಾಗೂ ಇಂಟರನೆಟ್ ಬಳಕೆಯನ್ನು ದುರುಪಯೋಗ ಪಡಿಸಿಕೊಳ್ಳದೆ ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಪ್ರಾಚೀನ ಕಾಲದಲ್ಲಿ ಸಂಪರ್ಕ ಸಾಧಿಸುವದು ತುಂಬಾ ಕಷ್ಟದಾಯಕವಾಗಿತ್ತು. ಅನೇಕ ಕ್ರಾಂತಿಕಾರಕ ಸಂಶೋಧನೆಗಳ ಮೂಲಕ ಸಾಕಷ್ಟು ಸಾಧನೆಗಳನ್ನು ಮಾಡಲಾಗಿದೆ. ದೂರಸಂಪರ್ಕ ಮಾಧ್ಯಮಗಳಾದ ಆಕಾಶವಾಣಿ, ದೂರದರ್ಶನ, ಕಂಪ್ಯೂಟರ್, ಇಂಟರನೆಟ್, ಮೊಬೈಲ್, ಪತ್ರಿಕೆಗಳಿಂದ ಅನೇಕ ಮಹತ್ವಪೂರ್ಣ ಮಾಹಿತಿ, ವಿಷಯಗಳು ದೊರೆಯುತ್ತಿದ್ದು, ಇವೆಲ್ಲವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ನಿಲೊಫರ್ ಶೇಖ್, ಪೂಜಾ ಹೂಗಾರ, ಮುಸ್ಕಾನ್ ಶೇಖ್, ಪೃತ್ವಿ ಕೋರವಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.