ಅಕ್ರಮ ಸಾಗಾಟ: ಅಕ್ಕಿ ಸಹಿತ ವಾಹನ ಜಪ್ತಿ

ಚಿತ್ತಾಪುರ: ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿಯನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಶ್ರೀಶೈಲ ಅಂಬಾಟಿ ಮತ್ತು ಸಿಬ್ಬಂದಿ ದಾಳಿ ಮಾಡಿ ಅಕ್ಕಿ ಸಹಿತ ವಾಹನ ಜಪ್ತಿ ಮಾಡಿದರು. 50 ಕೆ.ಜಿ ತೂಕದ 49 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 83,300 ಮೌಲ್ಯದ 24 ಕ್ವಿಂಟಾಲ್ 50 ಕೆ.ಜಿ ಅಕ್ಕಿ ವಶಕ್ಕೆ ಪಡೆಯಲಾಗಿದೆ. ವಾಹನ ಜಪ್ತಿ ಮಾಡಿಕೊಂಡು ಹೈದರಾಬಾದ್‌ ಮೂಲಕ ಶಾಣುನಾಯಕ ಲಕ್ಷ್ಮಣನಾಯಕ ಹಾಗೂ ಮಶಾಕ ಸಲೀಂ ದಂಡೋತಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಫುಡ್ […]

Continue Reading

ಚಿತ್ತಾಪುರ: ಜು.10 ರಂದು ಗುರುವಂದನೆ

ಚಿತ್ತಾಪುರ: ಪಟ್ಟಣದ ಶ್ರೀ ಸಿದ್ಧವೀರೇಶ್ವರ ಪೆದ್ದು ಮಠದಲ್ಲಿ ಜು.10 ರಂದು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಶರಣು ಊಡಗಿ ತಿಳಿಸಿದ್ದಾರೆ. ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯರು ಶ್ರೀ ಸಿದ್ಧವೀರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಕರ್ತೃ ಗದ್ದುಗೆ, ಶಿವಲಿಂಗಕ್ಕೆ ರುದಾಭಿಷೇಕ,‌ ವಿಶೇಷ ಪೂಜೆ, ಬಿಲ್ವಾರ್ಚನೆ ನಡೆಯಲಿದೆ. ನಂತರ ಸಿದ್ಧವೀರ ಶ್ರೀಗಳಿಗೆ ಗುರುಪಾದ ಪೂಜೆ, ಗುರುವಂದನೆ ಜರುಗಲಿದೆ. ಹಲವು ಕಲಾವಿದರು ಹಾಗೂ ಭಕ್ತರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ

Continue Reading

SSLC ತೇರ್ಗಡೆಗೆ 33 ಅಂಕ ಸಾಕು: ಇನ್ನುಮುಂದೆ ಪ್ರಥಮ ಭಾಷೆ 125ರ ಬದಲು 100ಕ್ಕೆ

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮಕ್ಕಳು ಇನ್ನುಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದ್ದಾರೆ. ಸಿಬಿಎಸ್‌ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಂತರಿಕ ಅಂಕಗಳು ಸೇರಿ ಒಟ್ಟಾರೆ ಶೇ 33 ಅಂಕ ಪಡೆದರೆ ತೇರ್ಗಡೆಯಾಗುತ್ತಾರೆ. ಪ್ರತಿ ವಿಷಯಕ್ಕೆ 20 ಆಂತರಿಕ ಅಂಕಗಳಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಎರಡು ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗುತ್ತಾರೆ. ಇದೆ ಮಾದರಿ ಎಸ್‌ಎಸ್‌ಎಲ್‌ಸಿಯಲ್ಲೂ ಅಳವಡಿಸಲು […]

Continue Reading

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು, ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಫಿಕ್ಸ್

ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ ಯುವಜನರ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿದೆ. ಹೊರಗೆ ನೋಡಲು ಆರೋಗ್ಯವಾಗಿ ಕಾಣಿಸಿಕೊಂಡರು ಕೂಡ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವಿಗೀಡಾಗುತ್ತಿರುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಹೃದಯಾಘಾತವಲ್, ಇದೊಂದು ಹಠಾತ್ ಹೃದಯ ಸ್ತಂಭನ (SCA- Sudden Cardiac Arrest ) ಎಂಬ ಸೈಲಂಟ್​ ಕಿಲ್ಲರ್​. ವಿಶ್ವದ ಹೃದಯ ಕಾಯಿಲೆಗಳಲ್ಲಿ ಭಾರತವು ಶೇ.60 ರಷ್ಟು ಪಾಲು ಹೊಂದಿದೆ. ಆದರೆ ನಮ್ಮ ಜನಸಂಖ್ಯೆಯು ವಿಶ್ವದ ಶೇ.20 ಮಾತ್ರ. […]

Continue Reading

ದ್ವೇಷ ತೊರೆದು ಸಕಾರಾತ್ಮಕ ಜೀವನ ಸಾಗಿಸಲು ಕ್ಷಮಾಗುಣ ಅಗತ್ಯ: ಎಚ್.ಬಿ ಪಾಟೀಲ್

ಕಲಬುರಗಿ: ದ್ವೇಷದಿಂದ ಯಾವ ಸಾಧನೆಯೂ ಸಾಧ್ಯವಿಲ್ಲ, ಜನರಲ್ಲಿ ಸಹಾನುಭೂತಿ ಬೆಳೆಸಲು ಮತ್ತು ದ್ವೇಷವನ್ನು ತೊರೆದು ಸಕಾರಾತ್ಮಕ ಜೀವನವನ್ನು ಸಾಗಿಸಲು ಕ್ಷಮಾಗುಣ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಜಾಗತಿಕ ಕ್ಷಮೆ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಯಾರಾದರು ನಮ್ಮನ್ನು ಮಾನಸಿಕವಾಗಿ ನೋಯಿಸಿದರೆ, ಆ ಆಘಾತದಿಂದ ಚೇತರಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಅವರನ್ನು ಕ್ಷಮಿಸುವುದು. […]

Continue Reading

ಹಠಾತ್ ಹೃದಯಾಘಾತ ಅಧ್ಯಯನ ವರದಿ ಬಿಡುಗಡೆ: ಹಠಾತ್ ಸಾವಿಗೆ ಈ 6 ಅಂಶಗಳೆ ಕಾರಣ-ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತದ ಪ್ರಕರಣಗಳಿಗೆ ಕೋವಿಡ್ ಲಸಿಕೆಗೆ ನೇರ ಸಂಬಂಧವಿಲ್ಲ ಎಂಬ ತಜ್ಞರ ವರದಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಡಾ. ಕೆ.ಎಸ್ ರವೀಂದ್ರನಾಥ ನೇತೃತ್ವದ 12 ತಜ್ಞರ ತಂಡವು ಈ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದೆ ಎಂದು ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಹೃದಯಾಘಾತ ಸಾವಿನ ವರದಿ ಬಿಡುಗಡೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವ್ಯಾಯಾಮ ಕೊರತೆ, […]

Continue Reading

ರಸ್ತೆಯಲ್ಲಿ ಬಿಟ್ಟು ಕಾರಿನಲ್ಲಿ ತೆರಳಿದ ಮಾಲೀಕನ ಹಿಂಬಾಲಿಸಿದ ನಾಯಿ, ಮನಕಲುಕುವ ವಿಡಿಯೋ

ಫರೀದಾಬಾದ್: ನಾಯಿ ಮರಿಯನ್ನು ತಂದು ಮುದ್ದಾಗಿ ಸಾಕುತ್ತಾರೆ. ಆದರೆ ನಾಯಿಗೆ ವಯಸ್ಸಾದರೆ, ಆರೋಗ್ಯ ಹದಗೆಟ್ಟಿದ್ದರೆ, ನಾಯಿ ಮಾತು ಕೇಳದಿದ್ದರೆ ಕೆಲವರು ಸಾಕಿದ ನಾಯಿಯನ್ನು ರಸ್ತೆಯಲ್ಲಿ ಬಿಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮಾಲೀಕ ಸಾಕಿದ ನಾಯಿಯನ್ನು ಮನೆಯಿಂದ ಹಲವು ಕಿಲೋಮೀಟರ್ ದೂರದವರೆಗೆ ಕಾರಿನಲ್ಲಿ ಕರೆದುಕೊಂಡು ಬಂದು ಮಾರುಕಟ್ಟೆ ಬಳಿ ಕಾರಿನಿಂದ ಕೆಳಗಿಳಿಸಿ, ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ತೆರಳಿದ್ದಾನೆ. ಮಾಲೀಕನ ಕಾರು ತೆರಳುತ್ತಿರುವುು ಗಮನಿಸಿದ ನಾಯಿ ಕಾರನ್ನು ಹಿಂಬಾಲಿಸಿದೆ. ಹಲವು ಕಿಲೋಮೀಟರ್ ವರೆಗೆ ನಾಯಿ ಕಾರು ಹಿಂಬಾಲಿಸಿ ಬಸವಳಿದ ಘಟನೆ […]

Continue Reading

ಒಂದು ಗೋಡೆಗೆ ಬಣ್ಣ ಬಳಿಯಲು 443 ಕಾರ್ಮಿಕರು, 24 ಲೀ. ಪೇಂಟ್, 3.38 ಲಕ್ಷ ರೂ. ಬಿಲ್: ಮಧ್ಯಪ್ರದೇಶ ಶಾಲೆಯ ಗೋಲ್ ಮಾಲ್

ಶಾದೋಲ್‌: ಮಧ್ಯಪ್ರದೇಶದ ಶಾದೋಲ್‌ ಜಿಲ್ಲೆಯ ಶಾಲೆಗೆ 24 ಲೀಟರ್‌ ಬಣ್ಣ ಬಳಿಯಲು ವೆಚ್ಚ ಮಾಡಿದ್ದು ಬರೋಬ್ಬರಿ 3.38 ಲಕ್ಷ ರೂ. ಅಷ್ಟೇ ಅಲ್ಲದೇ ಬಣ್ಣ ಹಚ್ಚಲು 443 ಕೂಲಿಯಾಳುಗಳನ್ನು ಬಳಸಿಕೊಳ್ಳಲಾಗಿದೆ. ಇಂತಹ ಹಗರಣ ಬೆಳಕಿಗೆ ಬಂದಿದ್ದು ಈ ಬಿಲ್‌ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದಮೇಲೆ ಎನ್ನುವುದು ವಿಶೇಷ. ಈಗ ಶಿಕ್ಷಣಾಧಿಕಾರಿಗಳು ಹಗರಣದ ತನಿಖೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದರೆ ಅಲ್ಲಿನ ಮುಖ್ಯೋಪಾಧ್ಯಾಯರು ಮಾಧ್ಯಮಗಳಿಂದ ದೂರ ಓಡಿದ್ದಾರೆ. ಎರಡು ಶಾಲೆಗಳಿಗೆ ಬಣ್ಣ ಬಳಿಯಲು 215 ಮೇಸ್ತ್ರಿಗಳು ಹಾಗೂ […]

Continue Reading

ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲದೆ ಸ್ವತಃ ನೊಗ-ನೇಗಿಲು ಹೊತ್ತ ವೃದ್ಧ ದಂಪತಿಯ ನೆರವಿಗೆ ಧಾವಿಸಿದ ಸಚಿವ

ಮುಂಬೈ: ಸಾಲ ಮಾಡಿಕೊಂಡ ಕಾರಣ ಎತ್ತು, ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲದೆ, ಕಾರ್ಮಿಕರಿಗೆ ಕೂಲಿ ನೀಡಲು ಸಾಧ್ಯವಾಗದ ಕಾರಣ ಸ್ವತಃ ನೊಗ-ನೇಗಿಲು ಹೊತ್ತ ವೃದ್ಧ ದಂಪತಿಯ ವಿಡಿಯೊ ಇತ್ತೀಚೆಗೆ ವೈರಲ್‌ ಆಗಿತ್ತು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿ ದೇಶವೇ ಮರುಗಿತ್ತು. ಬೆಳೆ ನಾಶವಾದ ಹಿನ್ನೆಲೆಯಲ್ಲಿ ಸಾಲ ಮಾಡಿದ್ದರಿಂದ ಅನಿವಾರ್ಯವಾಗಿ 75 ವರ್ಷದ ಪತಿ ನೊಗ ಹೊತ್ತಿದ್ದರೆ, 65 ವರ್ಷದ ಪತ್ನಿ ನೇಗಿಲು ಹಿಡಿದು ನೆಲ ಹದ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಇದೀಗ ಸಚಿವರೊಬ್ಬರು ಈ […]

Continue Reading

ಸಹಕಾರಿ ಚಳುವಳಿಯ ಯಶಸ್ವಿಗೆ ಜನರ ಸಕ್ರಿಯ ಭಾಗವಹಿಸುವಿಕೆ ಅಗತ್ಯ

ಕಲಬುರಗಿ: ಭಾರತದಲ್ಲಿ ಸಹಕಾರಿ ಚಳುವಳಿ ಆರಂಭವಾಗಿ ಶತಮಾನ ಕಳೆದರು ಕೂಡಾ ಅದರ ತತ್ವ, ಆಶಯ ಜನಸಾಮಾನ್ಯರಿಗೆ ಮುಟ್ಟುತ್ತಿಲ್ಲ. ‘ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ’ ಎಂಬ ಸಹಕಾರದ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅವುಗಳ ಸದುಪಯೋಗ ಪಡೆದುಕೊಂಡು ಸಹಕಾರಿ ಚಳುವಳಿಯ ಯಶಸ್ವಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ಜಿಲ್ಲೆಯ ಶಹಾಬಾದ ತಾಲೂಕಿನ ಭಂಕೂರ್‌ನ ಕೆರಿಯಮ್ಮ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ […]

Continue Reading