ಹಠಾತ್ ಹೃದಯಾಘಾತ ಅಧ್ಯಯನ ವರದಿ ಬಿಡುಗಡೆ: ಹಠಾತ್ ಸಾವಿಗೆ ಈ 6 ಅಂಶಗಳೆ ಕಾರಣ-ದಿನೇಶ್ ಗುಂಡೂರಾವ್

ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತದ ಪ್ರಕರಣಗಳಿಗೆ ಕೋವಿಡ್ ಲಸಿಕೆಗೆ ನೇರ ಸಂಬಂಧವಿಲ್ಲ ಎಂಬ ತಜ್ಞರ ವರದಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.

ಡಾ. ಕೆ.ಎಸ್ ರವೀಂದ್ರನಾಥ ನೇತೃತ್ವದ 12 ತಜ್ಞರ ತಂಡವು ಈ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಹೃದಯಾಘಾತ ಸಾವಿನ ವರದಿ ಬಿಡುಗಡೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವ್ಯಾಯಾಮ ಕೊರತೆ, ಒಬೆಸಿಟಿ, ಧೂಮಪಾನ ಮಾಡುವುದು ಹಠಾತ್ ಹೃದಯಾಘಾತಕ್ಕೆ ಪ್ರಮುಖ ಕಾರಣಗಳು. ಕೋವಿಡ್ ಲಸಿಕೆ ಪಡೆದವರು ಹೃದಯಾಘಾತದಿಂದ ಸಾವನ್ನಪ್ಪಿಲ್ಲ. ಮಧುಮೇಹ, ಒಬೆಸಿಟಿ, ಒತ್ತಡ, ಫ್ಯಾಟ್‌ನೆಸ್ ಹಾಗೂ ಧೂಮಪಾನ ಮಾಡಿದವರು ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಕೋವಿಡ್ ಬಳಿಕ ಬೇರೆ ಔಷಧಿಗಳನ್ನು ಸೇವಿಸಿರುವವರಲ್ಲಿಯೂ ಅಪಾಯ ಹೆಚ್ಚಾಗಿರುವುದಾಗಿ ತಜ್ಞರ ಅಭಿಪ್ರಾಯವಾಗಿದೆ. ಮೊಬೈಲ್ ಬಳಕೆಯು ಕೂಡ ಜೀವಶೈಲಿಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸಚಿವರು ಎಚ್ಚರಿಸಿದರು. ಎಂಆರ್‌ಎನ್‌ಎ ವ್ಯಾಕ್ಸಿನ್ ಬಗ್ಗೆ ಕಾಳಜಿ, ಆದರೆ ಭಾರತದಲ್ಲಿ ಬಳಕೆ ಇಲ್ಲ. ವಿಶ್ವದ ಕೆಲವೆಡೆ MRNA ಲಸಿಕೆಯಿಂದ ಹೃದಯ ಸ್ನಾಯುಗಳ ಉರಿಯೂತ (ಹೃದಯದ ಸೊಜುಗೆ) ಸಮಸ್ಯೆ ಕಂಡುಬಂದರೂ, ಭಾರತದಲ್ಲಿ ಈ ಲಸಿಕೆಯನ್ನು ಬಳಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಹಠಾತ್ ಮರಣಕ್ಕೆ ನಿಯಂತ್ರಣ: ಹೊಸ ನಿಯಮ, ಕಟ್ಟುನಿಟ್ಟಾದ ಕ್ರಮ

45 ವರ್ಷದೊಳಗಿನವರಲ್ಲಿ ಹಠಾತ್ ಹೃದಯಾಘಾತದ ಪ್ರಮಾಣ ಹೆಚ್ಚಾಗಿದೆ. ಇದರ ಬೆನ್ನಲ್ಲೇ ‘ಅಧಿಸೂಚಿತ ಕಾಯ್ದೆ’ ರೂಪಿಸಲು ಚಿಂತನೆ ನಡೆಸಲಾಗಿದೆ. ಆಸ್ಪತ್ರೆ ಹೊರಗೆ ಸಂಭವಿಸುವ ಸಾವಿನ ಪ್ರಕರಣಗಳನ್ನು ದಾಖಲಿಸುವುದು ಕಡ್ಡಾಯವಾಗಲಿದೆ. ಮರಣೋತ್ತರ ಪರೀಕ್ಷೆ ಕಡ್ಡಾಯವಾಗಲಿದೆ. ಹೃದಯಸಂಬಂಧಿ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಿರ್ಧಾರ ಮಾಡಲಾಗಿದೆ. ಇನ್ನು ಮಕ್ಕಳಲ್ಲಿ ಹೃದಯ ತಪಾಸಣೆ ಕಡ್ಡಾಯ ಮಾಡಲಾಗುತ್ತದೆ. ಹುಟ್ಟಿನಿಂದಲೇ ಹೃದಯ ಸಮಸ್ಯೆಗಳು ಪ್ರಾರಂಭವಾಗುವ ಸಾಧ್ಯತೆ ಇರುವ ಕಾರಣ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವರ್ಷಕ್ಕೆ ಒಂದು ಬಾರಿ ಹೃದಯ ಪರೀಕ್ಷೆ ಕಡ್ಡಾಯ ಮಾಡಲಾಗುತ್ತದೆ. ಪಠ್ಯಪುಸ್ತಕಗಳಲ್ಲಿ ಹೃದಯ ಆರೋಗ್ಯ ಕುರಿತು ಪಾಠ ಸೇರಿಸಲು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆ ವ್ಯಾಪಕ ವಿಸ್ತರಣೆ ಮಾಡಲಾಗುತ್ತದೆ. ಈ ಯೋಜನೆಯನ್ನು ಎಲ್ಲಾ ತಾಲೂಕು ಆಸ್ಪತ್ರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ AED (Automatic External Defibrillator) ಅಳವಡಿಸಲು ಕ್ರಮವಹಿಸಲಾಗುವುದು. ಗೃಹ ಆರೋಗ್ಯ ಯೋಜನೆಗೆ ಹೃದಯ ತಪಾಸಣೆ ಸೇರಿಸಲು ನಿರ್ಧಾರ ಮಾಡಲಾಗುತ್ತದೆ. ಖಾಸಗಿ ಕಂಪನಿಗಳಲ್ಲೂ ವಾರ್ಷಿಕ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದರು.

ಧೂಮಪಾನ ಮೌಲ್ಯಮಾಪನ: 50%ಕ್ಕಿಂತ ಹೆಚ್ಚು ಹೃದಯಾಘಾತಗಳು ಧೂಮಪಾನಿಗಳಲ್ಲಿ ಕಂಡುಬಂದಿದೆ. ಧೂಮಪಾನ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಪ್ರಮುಖ ಕಾರಣವೆಂಬುದಾಗಿ ತಜ್ಞರ ವರದಿಯಲ್ಲಿ ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ನಿಷೇಧ ಜಾರಿಯಲ್ಲಿದ್ದು, ಅದರ ಕಡ್ಡಾಯವಾಗಿ ಪಾಲಿಸುವುದನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಜಯದೇವ ಹೇದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಮಾತನಾಡಿ, ರಾಜ್ಯದಲ್ಲಿ ‘250 ಜನರ ಮೇಲೆ ಅಧ್ಯಯನ ನಡೆಸಿದ್ದು, 98% ಜನ ವ್ಯಾಕ್ಸಿನ್ ಪಡೆದಿದ್ದರು. ಆದರೆ ಮಧುಮೇಹ, ಒತ್ತಡ, ಧೂಮಪಾನ ಹಾಗೂ ಒಬೆಸಿಟಿಯಂತಹ ಜೀವಶೈಲಿಯ ಸಂಗತಿಗಳು ಪ್ರಮುಖ ಕಾರಣಗಳಾಗಿವೆ. ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೆ ನೇರ ಸಂಬಂಧ ಇಲ್ಲ’ ಎಂದು ಮಾಹಿತಿ ನೀಡಿದರು.

ಅತಿಹೆಚ್ಚು ಹೃದಯಾಘಾತ ಆಗಿದ್ದು ಯಾರಿಗೆ ?

  • ಮಧುಮೇಹ
  • ಒಬೆಸಿಟಿ (ಅತಿಯಾದ ಬೊಜ್ಜು)
  • ದಪ್ಪಗೆ ಇದ್ದರವರಲ್ಲಿ ಹಾರ್ಟ್ ಅಟ್ಯಾಕ್ ಕಂಡು ಬಂದಿದೆ
  • ಕೋವಿಡ್‌ ಬಂದಾಗ ಬೇರೆ ಬೇರೆ ಔಷಧಿ ತೆಗೆದು ಕೊಂಡಿರುವ ಪರಿಣಾಮ
  • ಅತಿಯಾದ ಮೊಬೈಲ್ ಬಳಕೆಯು ಕಾರಣವಾಗಿದೆ
  • ಜನರ ಬದುಕಿನ ಶೈಲಿಗೆ ಅಟ್ಯಾಕ್ ಕಾರಣವಾಗಿದೆ

Leave a Reply

Your email address will not be published. Required fields are marked *