ಸಾಧನೆಗೆ ಪ್ರೋತ್ಸಾಹಿಸುವುದು ಅಗತ್ಯ: ಕೋಳ್ಕೂರ

ಸುದ್ದಿ ಸಂಗ್ರಹ ಕಲಬುರಗಿಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಲಿ, ಅವರಿಗೆ ಗುರುತಿಸಿ, ಪ್ರೋತ್ಸಾಹಿಸುವುದು ಅಗತ್ಯ. ಇದರಿಂದ ಸಾಧನೆಗೆ ಮತ್ತಷ್ಟು ಸ್ಪೂರ್ತಿ ನೀಡಿದಂತಾಗುತ್ತದೆ ಎಂದು ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳ್ಕೂರ ಹೇಳಿದರು. ಜಿಲ್ಲೆಯ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜರುಗಿದ ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ದೊಡ್ಡಮಬಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಎಲ್ಲಾ ಮೂಲಭೂತ […]

Continue Reading

ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ

ಸುದ್ದಿ ಸಂಗ್ರಹ ಚಿತ್ತಾಪುರಸಮೀಪದ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ 2025-26ನೇ ಸಾಲಿನ ಹತ್ತನೇ ವಾರ್ಷಿಕ ಪರೀಕ್ಷೆ -1 ರಲ್ಲಿ 86 ಪ್ರತಿಶತ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಕುಳಿತ 182 ವಿದ್ಯಾರ್ಥಿಗಳಲ್ಲಿ 156 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಅದರಲ್ಲಿ 3 ಡಿಸ್ಟಿಂಕ್ಷನ್, 56 ಪ್ರಥಮ ಸ್ಥಾನ, 50 ದ್ವಿತೀಯ ಸ್ಥಾನ, 47 ತೃತೀಯ ಸ್ಥಾನ ಪಡೆದಿದ್ದಾರೆ. ಅಕ್ಷತಾ ತಂದೆ ಖಂಡೆಪ್ಪ- 553 (88.48), ಮೇಘನಾ ತಂದೆ ಶಿವಕುಮಾರ್ – 535 (85.60), ರಾಕೇಶ್ ತಂದೆ ಮಹಾದೇವಪ್ಪ – […]

Continue Reading

ಟೆಂಗಳಿ ಸರ್ಕಾರಿ ಪ್ರೌಢ ಶಾಲೆಗೆ ಶೇ.90 ಫಲಿತಾಂಶ

ಕಾಳಗಿ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ, ಪರೀಕ್ಷೆಯಲ್ಲಿ ತಾಲೂಕಿನ ಟೆಂಗಳಿ ಸರಕಾರಿ ಪ್ರೌಢಶಾಲೆ ಶೇ.90 ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾಗಿದ್ದ 49 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಶಾಲೆಯಲ್ಲಿ ಭಾಗ್ಯಶ್ರೀ 544 (ಶೇ.87) ಅಂಕ ಪಡೆದು ಅಗ್ರಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ, ಮಹೇಶ್, ಪ್ರಿಯಾ ತಲಾ 518 (ಶೇ.83) ಅಂಕ ಪಡೆದರೆ ಮತ್ತು ನಿಖಿಲ್ ಶೇ.80 ರಷ್ಟು ಅಂಕ ಪಡೆದು ಶಾಲೆಯ ಗೌರವ […]

Continue Reading

ಹವಾಮಾನ ವೈಪರಿತ್ಯ: ಆಕಾಶದಲ್ಲೇ 40 ನಿಮಿಷ ಗಿರಕಿ ಹೊಡೆದ Fly 91 ವಿಮಾನ

ಸುದ್ದಿ ಸಂಗ್ರಹ ಹುಬ್ಬಳ್ಳಿಪ್ಲೈ 91 (Fly 91) ವಿಮಾನಕ್ಕೆ ಮತ್ತೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಾಗಿದೆ. ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆಗಸದಲ್ಲಿಯೇ ಹಲವು ಸುತ್ತು ಹೊಡೆದು 40 ನಿಮಿಷ ತಡವಾಗಿ ವಿಮಾನ ಲ್ಯಾಂಡ್‌ ಆಗಿದೆ. ಏ.25 ರಂದು ಶನಿವಾರ ಹೈದ್ರಾಬಾದ್‌ನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಪ್ಲೈ 91 ಸಂಸ್ಥೆಯ ಐಸಿ 3401 ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ ಎದುರಾಗಿತ್ತು. ಮಧ್ಯಾಹ್ನ 3:13ಕ್ಕೆ ಹೈದರಾಬಾದ್‌ ಬಿಟ್ಟಿದ್ದ ವಿಮಾನ ಸಂಜೆ 4:30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಆಕಾಶದಲ್ಲಿ ಹಲವು […]

Continue Reading

4 ಬಾರಿ ಟ್ರಂಪ್‌ ಹತ್ಯೆಗೆ ಯತ್ನ: ಯಾವಾಗ ಏನಾಗಿತ್ತು ?

ಸುದ್ದಿ ಸಂಗ್ರಹ ವಾಷಿಂಗ್ಟನ್‌ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಮತ್ತೆ ಹತ್ಯೆಗೆ ಯತ್ನ ನಡೆದಿದೆ. ಹಿಲ್ಟನ್ ಹೋಟೆಲ್‌ನ ಘಟನೆ ಸೇರಿ ಒಟ್ಟು 4 ಬಾರಿ ಅಪರಿಚಿತರು ಹತ್ಯೆಗೆ ಯತ್ನ ನಡೆಸಿದ್ದರು. ವಾಷಿಂಗ್ಟನ್ ಡಿ.ಸಿಯ ಪ್ರತಿಷ್ಠಿತ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷ ಟ್ರಂಪ್ ಅವರು ಭಾಷಣ ಮಾಡಲು ವೇದಿಕೆಗೆ ಸಿದ್ಧರಾಗುತ್ತಿದ್ದಂತೆಯೇ, ಹೋಟೆಲ್‌ನ ಹೊರಗೆ ಸತತವಾಗಿ 5 ರಿಂದ 8 ಬಾರಿ ಗುಂಡಿನ ಸದ್ದು ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಕ್ಷಣಾರ್ಧದಲ್ಲಿ […]

Continue Reading

ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 1 ಕೋಟಿ ರೂ. ಮೌಲ್ಯದ ಔಷಧಿ, ಮಾತ್ರೆಗಳು ಭಸ್ಮ

ಸುದ್ದಿ ಸಂಗ್ರಹ ಹಾವೇರಿ ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 1 ಕೋಟಿ ರೂ. ಮೌಲ್ಯದ ಔಷಧಿ, ಮಾತ್ರೆ ಹಾಗೂ ಉಪಕರಣಗಳು ಸುಟ್ಟು ಭಸ್ಮವಾಗಿವೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಆಸ್ಪತ್ರೆಯ 2ನೇ ಮಹಡಿ ಹೊತ್ತಿ ಉರಿದಿದೆ. ಏಕಾಏಕಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 40 ಲಕ್ಷ ರೂ. ಮೌಲ್ಯದ ಔಷಧಿ, 50 ಲಕ್ಷ ರೂ. ಮೌಲ್ಯದ ಮಾತ್ರೆಗಳು, ವೈದ್ಯಕೀಯ ಉಪಕರಣಗಳು ಸೇರಿದಂತೆ ಸುಮಾರು ಒಂದು ಕೋಟಿ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ […]

Continue Reading

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸಲು ತುರ್ತು ಅನುದಾನ ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು ?

ಸುದ್ದಿ ಸಂಗ್ರಹ ಬೆಂಗಳೂರುಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸಲು ತುರ್ತು ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಿಗೆ 45 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಬೇಸಿಗೆಯಿಂದಾಗಿ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಪೂರೈಸಲು ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾವಾರು ಅನುದಾನ ವಿವರ 1. ಬಾಗಲಕೋಟೆ – 1.5 ಕೋಟಿ 2. ಬೆಂಗಳೂರು – […]

Continue Reading

ಹೆಬ್ಬಾಳ ಸರ್ಕಾರಿ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

ಸುದ್ದಿ ಸಂಗ್ರಹ ಕಾಳಗಿ2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಸಾಧನೆಗೈದಿದ್ದಾರೆ. ಶಾಲೆಯಿಂದ ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ 28 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ‌. ಇದರಲ್ಲಿ ಒರ್ವ ವಿದ್ಯಾರ್ಥಿ ಡಿಸ್ಟಿಂಕ್ಷನ್, 13 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ, 9 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಮತ್ತು 5 ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಮುಖ ವಿದ್ಯಾರ್ಥಿಗಳ ಸಾಧನೆಶುಭಲಕ್ಷ್ಮಿ ಸಿದ್ದಣ್ಣ 571 (91.36) ಅಂಕ ಗಳಿಸಿ ಶಾಲೆಗೆ […]

Continue Reading

ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ, ಉದ್ಯೋಗವಕಾಶ: ಹಳ್ಳಿ

ಸುದ್ದಿ ಸಂಗ್ರಹ ಶಹಾಬಾದ್ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಕ್ಷೇತ್ರವು ಜ್ಞಾನಾರ್ಜನೆ, ಉದ್ಯೋಗವಕಾಶ ಮತ್ತು ಸೃಜನಶೀಲತೆಗೆ ಅಪಾರ ಅವಕಾಶ ಒದಗಿಸುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮರಿಯಪ್ಪಾ ಹಳ್ಳಿ ಹೇಳಿದರು. ನಗರದ ಕೂಡಲಸಂಗಮ ಶಿಕ್ಷಣ ಸಂಸ್ಥೆಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 5ನೇ ದಿನದ ವಿಶೇಷ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಎ.ಐ ಯುಗದಲ್ಲಿ ಮಾಧ್ಯಮಗಳ ಮೂಲಕ ನೈಜ-ವೃತ್ತಿಪರ ಕೋರ್ಸ್’ಗಳ ಮಾಹಿತಿ ಮತ್ತು […]

Continue Reading

ಶಹಾಬಾದ್: ಎಮ್‌ಸಿಸಿ ಶಾಲೆಗೆ ಶೇ.97.83 ಫಲಿತಾಂಶ

ಸುದ್ದಿ ಸಂಗ್ರಹ ಶಹಾಬಾದ್ನಗರದ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್’ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆಯ ಸಾಧನೆ ಮಾಡುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಶಾಲೆಯ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 64 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 27 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 17 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಒಟ್ಟು 138 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 135 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ‌.97.83 ಫಲಿತಾಂಶ ಬಂದಿದೆ. ಜೋಯಾ ಮಲಿಕ್ 603 (96.48), ಸಮೃದ್ಧಿ ಸುಗಂಧಿ 599 […]

Continue Reading