ಶರಣ ಹಡಪದ ಅಪ್ಪಣ್ಣನವರ ಕೊಡುಗೆ ಅನನ್ಯ     

ಕಲಬುರಗಿ: ಹಡಪದ ಅಪ್ಪಣ್ಣನವರು ಹನ್ನೆರಡನೇ ಶತಮಾನದ ಪ್ರಮುಖ ವಚನಕಾರರು ಮತ್ತು ಬಸವಣ್ಣನವರ ನಿಕಟವರ್ತಿ. ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದವರು ಎಂದು ಶರಣ ಚಿಂತಕ ದತ್ತು ಹಡಪದ ಹೇಳಿದರು.  ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ಶರಣ ಹಡಪದ ಅಪ್ಪಣ್ಣನವರ 891ನೇ ಜಯಂತಿಯಲ್ಲಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.          ಉಪನ್ಯಾಸಕ […]

Continue Reading

ಗುರುವಿನ ಸ್ಥಾನ ಎಲ್ಲದಕ್ಕಿಂತಲೂ ದೊಡ್ಡದು: ಸಿದ್ದಲಿಂಗ ಶ್ರೀ

ಚಿತ್ತಾಪುರ: ಭೂಮಿಯ ಮೇಲಿನ ಎಲ್ಲಾ ವೃತ್ತಿಗಳಲ್ಲಿ ಗುರುವಿನ ಸ್ಥಾನ ತುಂಬಾ ದೊಡ್ಡದು ಎಂದು ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯಾರು ಜನರ ಅಂಧಕಾರ, ಮೌಢ್ಯತೆ ದೂರ ಮಾಡುತ್ತಾರೋ, ಯಾರು ಉತ್ತಮ ಜೀವನಕ್ಕೆ ಸೂಕ್ತ ಮಾರ್ಗದರ್ಶನ ನೀಡುವರೋ ಅವರು ನಿಜವಾದ ಗುರುಗಳು. ಶಿವಾಜಿಗೆ ಗುರು ರಾಮದಾಸರ ಮಾರ್ಗದರ್ಶನದ ಪ್ರಭಾವ ಬೀರಿತ್ತು. […]

Continue Reading

ವಾಡಿ: ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಹನ್ನೆರಡನೆ ಶತಮಾನದ ಕ್ರಾಂತಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರು ಮುಂಚೂಣಿಯಲ್ಲಿದ್ದರು. ಶರಣ ಕಾಯಕ ಬದುಕು ಯುವ ಪೀಳಿಗೆಗೆ ದಾರಿದೀಪವಾಗಬೇಕು. ಶರಣರು ಯಾತಕ್ಕಾಗಿ ಹೋರಾಟ ಮಾಡಿದರು, ಅದರ ಉದ್ದೇಶ ಬಗ್ಗೆ ಇಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ಅವರ ವಚನವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಇವೆಲ್ಲವೂ ಸಾಧ್ಯವಾಗುವುದು. ಕಾಯಕ ನಿಷ್ಠೆಗೆ ಹೆಸರಾದ ಹಡಪದ […]

Continue Reading

ಬಿಗ್ ಬಾಸ್​ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವವರ ಹೆಸರು ರಿವೀಲ್ ಮಾಡಿದ ಪ್ರಥಮ್

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ವೇದಿಕೆ ಸಜ್ಜಾಗುತ್ತಿದೆ. ಕೆಲವೇ ತಿಂಗಳುಗಳಲ್ಲಿ ಶೋ ಆರಂಭವಾಗಲಿದೆ. ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ಟೀಮ್ ಈ ಬಾರಿಯೂ ಕಿಚ್ಚ ಸುದೀಪ್ ಅವರೆ ನಿರೂಪಕರಾಗಿ ಬಿಗ್ ಬಾಸ್ ಮುನ್ನಡೆಸಲಿದ್ದಾರೆ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ತೆರೆಮರೆಯಲ್ಲಿ ಬಿಗ್ ಬಾಸ್ 12 ಕೆಲಸಗಳು ಶುರುವಾಗಿದೆ. ಈಗಾಗಲೆ ಕೆಲ ಕಂಟೆಸ್ಟೆಂಟ್​ಗಳ ಹೆಸರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಆರಂಭವಾಗುವಾಗ ಶೋಗೆ ಸ್ಪರ್ಧಿಗಳನ್ನು ಯಾರು ಆಯ್ಕೆ ಮಾಡುತ್ತಾರೆ […]

Continue Reading

ಇಂಟರ್‌ನೆಟ್, ವೈಫೈ ಇರದೆ ಬಳಸುವ ಹೊಸ ಮೆಸೆಂಜರ್ App ತಂದ ಜಾಕ್ ಡೋರ್ಸಿ

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ನ (ಇಂದಿನ ಎಕ್ಸ್‌) ಸಹ ಸ್ಥಾಪಕ ಜಾಕ್ ಡೋರ್ಸಿ ಕ್ರಾಂತಿಕಾರಿ ಎನ್ನಬಹುದಾದ ಹೆಜ್ಜೆಯೊಂದಿಗೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇಂಟರ್‌ನೆಟ್ ಇಲ್ಲದೆ, ಸೆಟ್‌ಲೈಟ್ ಸಂಪರ್ಕ ಇಲ್ಲದೆ, ವೈಫೈನೂ ಇಲ್ಲದೆ ಕಾರ್ಯನಿರ್ವಹಿಸಬಹುದಾದ ಹೊಸ ಮೆಸೆಂಜರ್ ಆಪ್ ಒಂದನ್ನು ಡೋರ್ಸಿ ಅವರು ಅಭಿವೃದ್ಧಿಪಡಿಸಿರುವುದಾಗಿ ವರದಿಯಾಗಿದೆ. ಬಿಟ್ ಚಾಟ್ ಎಂಬ ಪಿ2ಪಿ ಮೆಸೆಂಜರ್‌ ಆಪ್‌ ಅನ್ನು ಜಾಕ್ ಡೊರ್ಸಿ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಆಯಪ್ ಆಯಪಲ್ ಐ ಸ್ಟೋರ್‌ನಲ್ಲಿ ಟೆಸ್ಟ್‌ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ. […]

Continue Reading

ಭಾರತದಲ್ಲಿ ಲೈಸನ್ಸ್ ಅಗತ್ಯವಿಲ್ಲದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಇದರ ಬೆಲೆ ಫೋನ್​ಗಿಂತ ಕಡಿಮೆ

ಬೆಂಗಳೂರು: ಒಡಿಸ್ಸೆ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ರೇಸರ್ ನಿಯೋವನ್ನು ಪರಿಚಯಿಸಿದೆ. ಇದನ್ನು ಕಡಿಮೆ ವೇಗದ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್​ನ ಆರಂಭಿಕ ಬೆಲೆ ರೂ.52,000. ಕಡಿಮೆ ಬೆಲೆಗೆ ಉತ್ತಮ ಸ್ಕೂಟರ್ ಬಯಸುವವರಿಗಾಗಿ ಈ ಸ್ಕೂಟರ್ ವಿನ್ಯಾಸಗೊಳಿಸಲಾಗಿದೆ. ರೇಸರ್ ನಿಯೋ, ರೇಸರ್ ಸ್ಕೂಟರ್‌ನ ಹೊಸ ಮತ್ತು ಸುಧಾರಿತ ಮಾದರಿಯಾಗಿದ್ದು, ಇದು ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಇದರ ಬ್ಯಾಟರಿ ಕೂಡ ಮೊದಲಿಗಿಂತ ಉತ್ತಮವಾಗಿದೆ. ಈ ಸ್ಕೂಟರ್ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ. […]

Continue Reading

ಅಕ್ರಮ ಸಾಗಾಟ: ಅಕ್ಕಿ ಸಹಿತ ವಾಹನ ಜಪ್ತಿ

ಚಿತ್ತಾಪುರ: ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿಯನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಶ್ರೀಶೈಲ ಅಂಬಾಟಿ ಮತ್ತು ಸಿಬ್ಬಂದಿ ದಾಳಿ ಮಾಡಿ ಅಕ್ಕಿ ಸಹಿತ ವಾಹನ ಜಪ್ತಿ ಮಾಡಿದರು. 50 ಕೆ.ಜಿ ತೂಕದ 49 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 83,300 ಮೌಲ್ಯದ 24 ಕ್ವಿಂಟಾಲ್ 50 ಕೆ.ಜಿ ಅಕ್ಕಿ ವಶಕ್ಕೆ ಪಡೆಯಲಾಗಿದೆ. ವಾಹನ ಜಪ್ತಿ ಮಾಡಿಕೊಂಡು ಹೈದರಾಬಾದ್‌ ಮೂಲಕ ಶಾಣುನಾಯಕ ಲಕ್ಷ್ಮಣನಾಯಕ ಹಾಗೂ ಮಶಾಕ ಸಲೀಂ ದಂಡೋತಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಫುಡ್ […]

Continue Reading

ಚಿತ್ತಾಪುರ: ಜು.10 ರಂದು ಗುರುವಂದನೆ

ಚಿತ್ತಾಪುರ: ಪಟ್ಟಣದ ಶ್ರೀ ಸಿದ್ಧವೀರೇಶ್ವರ ಪೆದ್ದು ಮಠದಲ್ಲಿ ಜು.10 ರಂದು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಶರಣು ಊಡಗಿ ತಿಳಿಸಿದ್ದಾರೆ. ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯರು ಶ್ರೀ ಸಿದ್ಧವೀರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಕರ್ತೃ ಗದ್ದುಗೆ, ಶಿವಲಿಂಗಕ್ಕೆ ರುದಾಭಿಷೇಕ,‌ ವಿಶೇಷ ಪೂಜೆ, ಬಿಲ್ವಾರ್ಚನೆ ನಡೆಯಲಿದೆ. ನಂತರ ಸಿದ್ಧವೀರ ಶ್ರೀಗಳಿಗೆ ಗುರುಪಾದ ಪೂಜೆ, ಗುರುವಂದನೆ ಜರುಗಲಿದೆ. ಹಲವು ಕಲಾವಿದರು ಹಾಗೂ ಭಕ್ತರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ

Continue Reading

SSLC ತೇರ್ಗಡೆಗೆ 33 ಅಂಕ ಸಾಕು: ಇನ್ನುಮುಂದೆ ಪ್ರಥಮ ಭಾಷೆ 125ರ ಬದಲು 100ಕ್ಕೆ

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮಕ್ಕಳು ಇನ್ನುಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದ್ದಾರೆ. ಸಿಬಿಎಸ್‌ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಂತರಿಕ ಅಂಕಗಳು ಸೇರಿ ಒಟ್ಟಾರೆ ಶೇ 33 ಅಂಕ ಪಡೆದರೆ ತೇರ್ಗಡೆಯಾಗುತ್ತಾರೆ. ಪ್ರತಿ ವಿಷಯಕ್ಕೆ 20 ಆಂತರಿಕ ಅಂಕಗಳಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಎರಡು ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗುತ್ತಾರೆ. ಇದೆ ಮಾದರಿ ಎಸ್‌ಎಸ್‌ಎಲ್‌ಸಿಯಲ್ಲೂ ಅಳವಡಿಸಲು […]

Continue Reading

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು, ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಫಿಕ್ಸ್

ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ ಯುವಜನರ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿದೆ. ಹೊರಗೆ ನೋಡಲು ಆರೋಗ್ಯವಾಗಿ ಕಾಣಿಸಿಕೊಂಡರು ಕೂಡ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವಿಗೀಡಾಗುತ್ತಿರುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಹೃದಯಾಘಾತವಲ್, ಇದೊಂದು ಹಠಾತ್ ಹೃದಯ ಸ್ತಂಭನ (SCA- Sudden Cardiac Arrest ) ಎಂಬ ಸೈಲಂಟ್​ ಕಿಲ್ಲರ್​. ವಿಶ್ವದ ಹೃದಯ ಕಾಯಿಲೆಗಳಲ್ಲಿ ಭಾರತವು ಶೇ.60 ರಷ್ಟು ಪಾಲು ಹೊಂದಿದೆ. ಆದರೆ ನಮ್ಮ ಜನಸಂಖ್ಯೆಯು ವಿಶ್ವದ ಶೇ.20 ಮಾತ್ರ. […]

Continue Reading