ಚಿತ್ತಾಪುರ: ಪಟ್ಟಣದ ಶ್ರೀ ಸಿದ್ಧವೀರೇಶ್ವರ ಪೆದ್ದು ಮಠದಲ್ಲಿ ಜು.10 ರಂದು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಶರಣು ಊಡಗಿ ತಿಳಿಸಿದ್ದಾರೆ.
ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯರು ಶ್ರೀ ಸಿದ್ಧವೀರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಕರ್ತೃ ಗದ್ದುಗೆ, ಶಿವಲಿಂಗಕ್ಕೆ ರುದಾಭಿಷೇಕ, ವಿಶೇಷ ಪೂಜೆ, ಬಿಲ್ವಾರ್ಚನೆ ನಡೆಯಲಿದೆ. ನಂತರ ಸಿದ್ಧವೀರ ಶ್ರೀಗಳಿಗೆ ಗುರುಪಾದ ಪೂಜೆ, ಗುರುವಂದನೆ ಜರುಗಲಿದೆ. ಹಲವು ಕಲಾವಿದರು ಹಾಗೂ ಭಕ್ತರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ