ಮರು ಮೌಲ್ಯಮಾಪನ ಮಾಡಿದರೆ ಮುಖಕ್ಕೆ ಆ್ಯಸಿಡ್‌ ಹಾಕ್ತಿವಿ: ಗುಲಬರ್ಗಾ ವಿವಿ ಕುಲಪತಿಗೆ ಬೆದರಿಕೆ

ಸುದ್ದಿ ಸಂಗ್ರಹ ಕಲಬುರಗಿಗುಲಬರ್ಗಾ ವಿವಿ ಕುಲಪತಿಗೆ ದುಷ್ಕರ್ಮಿಗಳು ಆ್ಯಸಿಡ್‌ ಹಾಕುವ ಬೆದರಿಕೆ ಪತ್ರ ಕಳಿಸಿದ್ದಾರೆ. ಶಶಿಕಾಂತ್‍ ಎಸ್.ಉಡಿಕೇರಿ ಅವರಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಬಿಇಡಿ ಪರೀಕ್ಷೆಯ ಮರು ಮೌಲ್ಯಮಾಪನದ ನಿರ್ಧಾರ ನಮಗೆ ಇಷ್ಟವಾಗಿಲ್ಲ. ಎರಡು ಲಕ್ಷ ರೂ. ನೀಡಿ ಬಿಇಡ್ ಪ್ರವೇಶ ಪಡೆದು, ಎರಡು ವರ್ಷದಿಂದ ಫಲಿತಾಂಶಕ್ಕಾಗಿ ಕಾದಿದ್ದೆವೆ. ಮರು ಮೌಲ್ಯಮಾಪನದಿಂದ ಫಲಿತಾಂಶದಲ್ಲಿ ಅಂಕಗಳು ಕಡಿಮೆಯಾದರೆ ಅಥವಾ ಮರು ಮೌಲ್ಯಮಾಪನದಲ್ಲಿ ಅನುತ್ತಿರ್ಣರಾದರೆ ನಿಮ್ಮ ಮುಖಕ್ಕೆ ಆ್ಯಸಿಡ್ ಹಾಕಿ ನರಳಿ ನರಳಿ ಬದುಕುವಂತೆ ಮಾಡುತ್ತೆವೆ […]

Continue Reading

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನ: 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಸುದ್ದಿ ಸಂಗ್ರಹ ಬೆಳಗಾವಿಪ್ರಿಯಕರನ ಜೊತೆ ಓಡಿಹೋಗಲು ಪತಿ ಮನೆಗೆ ಕನ್ನ ಹಾಕಿದ್ದ ಪತ್ನಿಯನ್ನ ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ. ಪ್ರಿಯಕರನ ಜೊತೆ ಸೇರಿದ ಹೈನಾತಿ ಹೆಂಡ್ತಿ ಗಂಡನ ಮನೆಯಲ್ಲಿಯೇ 21 ಲಕ್ಷ ಮೌಲ್ಯದ ‌154.6 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾಳೆ. ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ಹಣಮಂತ ಮಾರಾಪೂರ, ಹಸೀನಾ ನದಾಫ್ ಬಂಧಿತರು. ಬಂಧಿತರಿಂದ 11 ಸಾವಿರ ಮೌಲ್ಯದ 45 ಗ್ರಾಂ ಬೆಳ್ಳಿಯ ಆಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಮೊದಲು ಕಳ್ಳತನದ […]

Continue Reading

ಪ್ರಾಥಮಿಕ ಕೃಷ್ಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಗೌರಮ್ಮ ಇಂದೂರ ನಿಧನ

ವಾಡಿ: ಸಮೀಪದ ಕಮರವಾಡಿ ಗ್ರಾಮದ ನಿವಾಸಿ, ಪ್ರಾಥಮಿಕ ಕೃಷ್ಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಗೌರಮ್ಮ ಮಲ್ಲಿನಾಥ ಇಂದೂರ (58) ಶುಕ್ರವಾರ ನಿಧನರಾದರು.    ಮೃತರ ಪತಿ ಚಿತ್ತಾಪುರ ಪಿಎಲ್’ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ತಾ.ಪಂ ಮಾಜಿ ಸದಸ್ಯ ಮಲ್ಲಿನಾಥ ಇಂದೂರ ಮತ್ತು ಮೂವರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.   ಶನಿವಾರ ಮಧ್ಯಾಹ್ನ 4 ಗಂಟೆಗೆ ಸ್ವಂತ ಜಮೀನಿನಲ್ಲಿ ಮೃತರ ಅಂತ್ಯಕ್ರಿಯೆ ನೆರವೆರಲಿದೆ. 

Continue Reading

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಸುದ್ದಿ ಸಂಗ್ರಹ ಕಲಬುರಗಿರಾಜ್ಯ ಸರಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ತಿಳಿಸಿದ್ದಾರೆ. ಸರಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರಕಾರಿ ನೌಕರರ ಸಂಘದಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಸರಕಾರಿ ನೌಕರರ ಮಕ್ಕಳು, ಮೇ.25ರ ಒಳಗಾಗಿ https://powermedia.info ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ […]

Continue Reading

ರಕ್ತ ಸಂಬಂಧವನ್ನೆ ಮರೆತು ಮದುವೆಯಾದ ಅಕ್ಕ ತಮ್ಮ

ಸುದ್ದಿ ಸಂಗ್ರಹ ಚಿಕ್ಕಬಳ್ಳಾಪುರಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯೆಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಕ್ತಸಂಬಂಧದ ಮನ್ನಣೆಯನ್ನೆ ಮರೆತು ಅಕ್ಕ-ತಮ್ಮ ಹಸೆಮಣೆ ಏರಿರುವ ವಿಲಕ್ಷಣ ಘಟನೆ ನಡೆದಿದೆ. ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಿದ್ದ ಜೋಡಿ ಈಗ ಸಪ್ತಪದಿ ತುಳಿಯುವ ಮೂಲಕ ಸಾಮಾಜಿಕ ಚರ್ಚೆಗೆ ಗ್ರಾಸವಾಗಿದ್ದಾರೆ. ದೇವನಹಳ್ಳಿಯ ಸಾವಕನಹಳ್ಳಿ ಮೂಲದ ಶಶಿಕಲಾ ಮತ್ತು ಹೊಸಕೋಟೆಯ ಪ್ರವೀಣ್ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿಶೇಷವೆಂದರೆ, ಇವರಿಬ್ಬರ ತಾಯಂದಿರು ಸ್ವಂತ ಅಕ್ಕ-ತಂಗಿಯರು. ಅಂದರೆ ವರಸೆಯಲ್ಲಿ ಶಶಿಕಲಾ ಮತ್ತು ಪ್ರವೀಣ್ ಅಕ್ಕ-ತಮ್ಮನಾಗಬೇಕು. ಆದರೆ ಈ ಸಂಬಂಧದ ಗಡಿಯನ್ನು ಮೀರಿ […]

Continue Reading

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನ ಮುಂದುವರಿಯಲಿದೆ. ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆಯಿದ್ದು, ತಾಪಮಾನದಲ್ಲಿ ಅಲ್ಪ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ […]

Continue Reading

ಇನ್ನೊಂದು ವಾರ ತಾಪಮಾನದಲ್ಲಿ ಏರುಪೇರು: ಉತ್ತರ ಕರ್ನಾಟಕಕ್ಕೆ ಅಪ್ಪಳಿಸಲಿದೆ 42° ತಾಪಮಾನ

ಸುದ್ದಿ ಸಂಗ್ರಹ ಬೆಂಗಳೂರುಮುಂದಿನ 1 ವಾರದವರೆಗೆ ರಾಜ್ಯದ ಹವಾಮಾನದಲ್ಲಿ ಭಾರಿ ಏರುಪೇರು ಕಂಡುಬರಲಿದೆ. ಒಂದೆಡೆ ಸುಡುವ ಬಿಸಿಲು, ಒಣಹವೆ ಹಾಗೂ ಮತ್ತೊಂದೆಡೆ ಮಳೆಯ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಗದಗದಲ್ಲಿ ಸೂರ್ಯನ ತಾಪ ವಿಪರೀತವಾಗಿರಲಿದೆ. ವಾರಪೂರ್ತಿ ಸುಮಾರು 42 ಡಿಗ್ರಿ ಸೆಲ್ಸಿಯಸ್ ತಾಪಮಾನದ ಎಚ್ಚರಿಕೆ ನೀಡಲಾಗಿದೆ. ನಿನ್ನೆ ಕಲಬುರಗಿಯಲ್ಲಿ 41.6 ಡಿಗ್ರಿ ದಾಖಲಾಗಿದೆ. ಬೆಳಗಾವಿ ಹಾಗೂ […]

Continue Reading

ಚುನಾವಣಾ ರಾಜಕೀಯಕ್ಕೆ ಎಚ್ ವಿಶ್ವನಾಥ್ ಗುಡ್ ಬೈ

ಸುದ್ದಿ ಸಂಗ್ರಹ ಮೈಸೂರುಮುಂಬರುವ ಯಾವುದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಎಂಎಲ್‌ಸಿ ಎಚ್ ವಿಶ್ವನಾಥ್ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಆದರೆ ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು 50 ಕೋಟಿ ರೂ. ಹಣ ಬೇಕು. ರಿಯಲ್ ಎಸ್ಟೇಟ್ ನಡೆಸುವವರು ನಿವೇಶನಗಳನ್ನಾದರೂ […]

Continue Reading

ನೆಲ, ಜಲ ಸಂರಕ್ಷಣೆ: ಕಸಾಪ ಪಾತ್ರ ಮುಖ್ಯ

ಸುದ್ದಿ ಸಂಗ್ರಹ ಚಿತ್ತಾಪುರಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಮತ್ತು ಸಂರಕ್ಷಣೆಯ ಹಿತ ದೃಷ್ಟಿಯಿಂದ 1915ರ ಮೇ 5ರಂದು ಕನ್ನಡ ಸಾಹಿತ್ಯ ಪರಿಷತ್ ಜನ್ಮ ತಾಳಿದೆ ಎಂದು ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಮುಖ್ಯಗುರು ಕಾಶಿರಾಯ ಕಲಾಲ ಹೇಳಿದರು. ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಚಾಲಿತ ವಿದ್ಯಾನಿಕೇತನ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆದ ಕಸಾಪದ 112ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪರಿಷತ್ತಿನ ಹಿರಿಯ ಸದಸ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ […]

Continue Reading

5 ಲಕ್ಷ ರೂ. ಹಣ ಪಡೆದು ಅಬಾರ್ಷನ್ ಮಾಡಿಸಿದ್ದಾಳೆ ಲೇಡಿ ಕಾನ್ಸ್‌ಟೇಬಲ್: ಪಿಎಸ್‌ಐ ವಿರೇಶ್‌ಗೆ ವಂಚಿಸಿ ಬೇರೆ ಯುವಕನ ಜೊತೆ ಹಸೆಮಣೆ ಏರಲು ಸಿದ್ಧ

ಸುದ್ದಿ ಸಂಗ್ರಹ ಯಾದಗಿರಿಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸಿ, ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯೊಂದು ಈಗ ಬೀದಿಪಾಲಾಗಿದೆ. ಪ್ರಿಯಕರನಿಗೆ ಕೈಕೊಟ್ಟು ಬೇರೆ ಯುವಕನೊಂದಿಗೆ ಮದುವೆಯಾಗಲು ಸಜ್ಜಾಗಿರುವ ಲೇಡಿ ಕಾನ್ಸ್‌ಟೇಬಲ್ ವಿರುದ್ಧ ಪಿಎಸ್ಐ ಒಬ್ಬರು ರಾಯಚೂರು ಎಸ್ಪಿ ಮೊರೆ ಹೋಗಿದ್ದಾರೆ. ಯಾದಗಿರಿಯ ಶಹಾಪುರದಲ್ಲಿ ಗುಪ್ತಚರ ಇಲಾಖೆಯಲ್ಲಿ ಪಿಎಸ್ಐ ಆಗಿರುವ ವಿರೇಶ್ ಮತ್ತು ಕಾನ್ಸ್‌ಟೇಬಲ್ ವಿಜಯಶ್ರೀ 2017 ರಿಂದ ಪ್ರೀತಿಸುತ್ತಿದ್ದರು. ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡುವಾಗ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ವಿರೇಶ್ ಪಿಎಸ್ಐ ಆಗಿ ನೇಮಕಗೊಂಡ ಬಳಿಕ, ವಿಜಯಶ್ರೀ […]

Continue Reading